News Karnataka Kannada
Saturday, April 20 2024
Cricket
ವಿದೇಶ

ಇಸ್ತಾಂಬುಲ್‌ನ 16 ಅಂತಸ್ತಿನ ಕಟ್ಟದಲ್ಲಿ ಭಾರೀ ಅಗ್ನಿ ಅವಘಡ

ಟರ್ಕಿ ದೇಶದ  ನಗರ ಇಸ್ತಾಂಬುಲ್‌ನ 16 ಅಂತಸ್ತಿನ ಕಟ್ಟದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.
Photo Credit : NewsKarnataka

ಇಸ್ತಾಂಬುಲ್‌: ಟರ್ಕಿ ದೇಶದ  ನಗರ ಇಸ್ತಾಂಬುಲ್‌ನ 16 ಅಂತಸ್ತಿನ ಕಟ್ಟದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.

ಇಸ್ತಾಂಬುಲ್‌ನ ಖ್ಯಾತ ಮಸ್ಕ್ಯೂರೇಡ್ ನೈಟ್‌ಕ್ಲಬ್‌ನಲ್ಲಿ ನವೀಕರಣ ಕೆಲಸ ನಡೆಯುತ್ತಿತ್ತು. ಕಟ್ಟಡದ ಅಂಡರ್‌ಗ್ರೌಂಡ್‌, ಮೊದಲ ಮತ್ತು ಮೂರನೇ ಮಹಡಿಯಲ್ಲಿ ರಿನೋವೇಶನ್ ಕಾರ್ಯವನ್ನ ಮಾಡಲಾಗುತ್ತಿತ್ತು. ಈ ವೇಳೆ ನಿನ್ನೆ ಮಧ್ಯಾಹ್ನ ಇಸ್ಬಾಂಬುಲ್‌ ಸಮಯದ ಪ್ರಕಾರ 12 ಗಂಟೆ 47 ನಿಮಿಷಕ್ಕೆ ಬೆಂಕಿ ಕಾಣಿಸಿಕೊಂಡಿದೆ.

ಈ ಬೆಂಕಿ ದುರಂತದಲ್ಲಿ ಸುಮಾರು 29ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ. ಇನ್ನೂ 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಕಿ ಕಾಣಿಸಿಕೊಂಡು ಮೂರ್ನಾಲ್ಕು ಮಹಡಿಯನ್ನೇ ಸುಟ್ಟು ಭಸ್ಮ ಮಾಡಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಗಂಭೀರವಾಗಿ ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಹಲವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಅಂತ ತಿಳಿದು ಬಂದಿದೆ.

ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಅಲ್ಲದೇ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ನೈಟ್ ಕ್ಲಬ್ ಮ್ಯಾನೇಜರ್, ನವೀಕರಣ ಗುತ್ತಿಗೆ ಪಡೆದ ಮ್ಯಾನೇಜರ್, ಸೂಪರ್‌ವೈಸರ್ ಸೇರಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು