Bengaluru 28°C

‘ಒಳನುಸುಳುವಿಕೆ ತಡೆಯಲು ಬಾಂಗ್ಲಾ ಗಡಿಯಲ್ಲಿ ಹೆಚ್ಚಿನ ಸೇನಾ ನಿಯೋಜನೆ

Increased Bangladesh Border

ಗುವಾಹಟಿ: ಪಕ್ಕದ ಬಾಂಗ್ಲಾದೇಶದಲ್ಲಿ ಉಂಟಾಗಿರುವ ಕ್ಷೋಭೆಯಿಂದಾಗಿ ಒಳನುಸುಳುವಿಕೆಯ ಸಾಧ್ಯತೆ ಇರುವುದುರಿಂದ ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ ಹಾಗೂ ತ್ರಿಪುರದಲ್ಲಿರುವ ಬಾಂಗ್ಲಾದೇಶ- ಭಾರತ ಗಡಿಯಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸಲಾಗಿದೆ. ಜನರ ಓಡಾಟಕ್ಕೆ ಕಡಿವಾಣ ಹಾಕಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಹೇಳಿದೆ.


ಅಲ್ಲಿ ನಡೆಯುತ್ತಿರುವ ಹಿಂಸೆಯ ಪರಿಣಾಮವನ್ನು ಎದುರಿಸಲು ಸಜ್ಜಾಗಿರಿ ಎಂದು ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಿಗೆ ಅಸ್ಸಾಂ, ಮೇಘಾಲಯ ಹಾಗೂ ತ್ರಿಪುರ ಸರ್ಕಾರಗಳು ಸೂಚಿಸಿವೆ.


‘ಒಳನುಸುಳುವಿಕೆ ಹಾಗೂ ಕಳ್ಳಸಾಗಣಿಕೆ ತಡೆಯಲು ಗಡಿಯುದ್ದಕ್ಕೂ ಭಾರಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಯಾವುದೇ ಅನಿರೀಕ್ಷಿತ ಸನ್ನಿವೇಶವನ್ನು ಎದುರಿಸಲು, ಅಂತರರಾಷ್ಟ್ರೀಯ ಗಡಿಯಲ್ಲಿ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ. ಎಲ್ಲದ್ದಕ್ಕೂ ಸಿದ್ಧವಾಗಿರುವಂತೆ ಸೂಚಿಸಿ, ಹಿರಿಯ ಅಧಿಕಾರಿಗಳು ಹಾಗೂ ಕಮಾಂಡಂಟ್‌ಗಳನ್ನು ನಿಯೋಜಿಸಲಾಗಿದೆ’ ಎಂದು ಬಿಎಸ್‌ಎಫ್‌ ತಿಳಿಸಿದೆ.


‘ಗಡಿಯಲ್ಲಿ 11 ಬೆಟಾಲಿಯನ್‌ಗಳು, ಜಲ ಫಿರಂಗಿ ಕಣ್ಗಾವಲು ವಹಿಸಿದೆ. ಎಲ್ಲವನ್ನೂ ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ಕಸ್ಟಮ್ಸ್ ಠಾಣೆಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ತಕ್ಷಣದ ಮಾಹಿತಿ ‍ಪಡೆಯಲು ಗುಪ್ತಚರ ವಿಭಾಗದ ಕಾರ್ಯಾಚರಣೆಯನ್ನು ಹೆಚ್ಚಿಸಲಾಗಿದೆ. ಯಾವುದೇ ಬೆದರಿಕೆಯನ್ನು ಎದುರಿಸಲು ಹಾಗೂ ಅದನ್ನು ಮಟ್ಟಹಾಲು ಸೂಚಿಸಲಾಗಿದೆ’ ಎಂದು ಬಂಗಾಳ ಮತ್ತು ಅಸ್ಸಾಂನ 409 ಕಿ.ಮೀ ಗಡಿಯನ್ನು ಕಾಪಾಡುವ ಬಿಎಸ್‌ಎಫ್‌ನ ಗುವಾಹಟಿ ಫ್ರಾಂಟಿಯರ್ ತಿಳಿಸಿದೆ.


Nk Channel Final 21 09 2023