News Karnataka Kannada
Monday, April 29 2024
ವಿದೇಶ

ಪಬ್‌ಜಿ ಮೂಲಕ ಪ್ರೀತಿ, ಭಾರತಕ್ಕೆ ಅಕ್ರಮವಾಗಿ ಬಂದ ಮಹಿಳೆಗೆ ಜಾಮೀನು

Love through PUBG, woman granted bail to woman who came to India illegally
Photo Credit : IANS

ನೋಯ್ಡಾ: ಭಾರತೀಯನನ್ನು ಪ್ರೀತಿಸಿ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಪಾಕಿಸ್ತಾನಿ ಮಹಿಳೆ ಮತ್ತು ಆಕೆಯ ಸಂಗಾತಿಯನ್ನು ಈ ಹಿಂದೆ ಬಂಧಿಸಲಾಗಿದ್ದು, ಪ್ರಸ್ತುತ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ನ್ಯಾಯಾಲಯವು ಇಬ್ಬರಿಗೂ ಜಾಮೀನು ನೀಡಿದೆ.

ಮಹಿಳೆಯನ್ನು ಸೀಮಾ ಹೈದರ್ ಎಂದು ಗುರುತಿಸಲಾಸಲಾಗಿದ್ದು, ಆಕೆಯ ಸಂಗಾತಿ ಸಚಿನ್ ಮೀನಾ ಮತ್ತು ಆತನ ತಂದೆ ನೇತ್ರಪಾಲ್ ಮೀನಾ ಅವರನ್ನು ಆರೋಪಿಗಳೆಂದು ಗುರುತಿಸಲಾಗಿತ್ತು.

ಸೀಮಾ ವಿರುದ್ಧ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಸಚಿನ್ ಮತ್ತು ನೇತ್ರಾಪಾಲ್ ವಿರುದ್ಧ ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ದಂಪತಿಗಳು 2019 ರಲ್ಲಿ ಆನ್‌ಲೈನ್ ಗೇಮ್ ಪಬ್‌ ಜಿ ಮೂಲಕ ಸಂಪರ್ಕಕ್ಕೆ ಬಂದಿದ್ದರು. ವಕೀಲ ಹೇಮಂತ್ ಕೃಷ್ಣ ಪರಾಶರ್ ಪ್ರಕಾರ, ಮಾರ್ಚ್‌ನಲ್ಲಿ ದಂಪತಿಗಳು ಮೊದಲು ನೇಪಾಳದಲ್ಲಿ ಭೇಟಿಯಾಗಿದ್ದರು. ಕಠ್ಮಂಡುವಿನ ಪಶುಪತಿನಾಥ ದೇವಾಲಯದಲ್ಲಿ ವಿವಾಹವಾಗಿದ್ದರು.

ಸೀಮಾಗೆ ಪಾಕಿಸ್ತಾನಕ್ಕೆ ಹಿಂತಿರುಗಲು ಇಷ್ಟವಿಲ್ಲದ ಕಾರಣ, ಅವರು ಭಾರತದ ಬಸ್ ಹತ್ತಿ ಮೇ 13 ರಂದು ಬಂದಿದ್ದರು. ಅಂದಿನಿಂದ, ದಂಪತಿಗಳು ರಬುಪುರದ ಅಂಬೇಡ್ಕರ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಈ ವಿಷಯ ತಿಳಿದ ಪೊಲೀಸರು ಅವರ ನಿವಾಸಕ್ಕೆ ದಾಳಿ ನಡೆಸಿದ್ದರು. ಆದರೆ ಅಷ್ಟೊತ್ತಿಗಾಗಲೇ ದಂಪತಿ ಪರಾರಿಯಾಗಿದ್ದರು. ನಂತರ ಹರಿಯಾಣದ ಬಲ್ಲಭಗಢದಲ್ಲಿ ದಂಪತಿ, ಸಚಿನ್ ತಂದೆಯನ್ನು ಪೊಲೀಸ್ ತಂಡವು ಬಂಧಿಸಿತ್ತು.

ಪೊಲೀಸರು ಸೀಮಾ ಮತ್ತು ಸಚಿನ್‌ನಿಂದ ಮೂರು ನಕಲಿ ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು