Categories: ವಿದೇಶ

ಶಿವ ದೇವರು ಗಾಂಜಾ ವ್ಯಸನಿಗಳ ಗುರು ಎಂದ ನಾಯಕ ಯಾರು ಗೊತ್ತಾ

ಕೋಲ್ಕತ್ತಾ: ಶಿವ ದೇವ ಮದ್ಯ ಮತ್ತು ಗಾಂಜಾ ಸೇವನಿಗಳ ಗುರುವಾಗಿದ್ದು ಕುಡುಕರು ತಮ್ಮ ಕುಟುಂಬಗಳನ್ನು ಶಿವ ನೋಡಿಕೊಳ್ಳುತ್ತಾನೆ ಎಂಬ ನಂಬಿಕೆಯಿಂದ ನಾಶವಾದ ಕುಟುಂಬಗಳ ಸಂಖ್ಯೆಯನ್ನು ಯಾರು ಲೆಕ್ಕ ಹಾಕುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆಯೊಂದನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸಂಸದ ಬಿಕಾಶ್ ರಂಜನ್ ಭಟ್ಟಾಚಾರ್ಯ ನೀಡಿದ್ದಾರೆ.
ನನ್ನ ಬಾಲ್ಯದಲ್ಲಿ ಪೋಸ್ಟ್‌ಮ್ಯಾನ್ ಒಬ್ಬ ಕುಡಿದು ಶಿವ ದೇವಾಲಯಕ್ಕೆ ಒದೆಯುವುದನ್ನು ನೋಡಿದ್ದೇನೆ. ಆತ ತನ್ನ ಕುಟುಂಬವನ್ನು ನೋಡಿಕೊಳ್ಳುವಂತೆ ಮಹಾದೇವನನ್ನು ಬೇಡಿಕೊಳ್ಳುತ್ತಿದ್ದನು ಎಂದು ಬರೆದಿದ್ದಾರೆ. ಮುಂದುವರೆದು, ಕಾಳಿಘಾಟ್‌ನ ನಕುಲೇಶ್ವರ ಲೇನ್ ಮಹಾಕಾಳಿ ಪಾಠಶಾಲೆಯ ಸಮೀಪವಿರುವ ಕಿರಿದಾದ ರಸ್ತೆಯಲ್ಲಿ ನೀವು ಮಾಹಿಮ್ ಹಲ್ದರ್ ಸ್ಟ್ರೀಟ್‌ನಿಂದ ನಕುಲೇಶ್ವರ ಲೇನ್‌ಗೆ ಪ್ರವೇಶಿಸಿದರೆ, ನಾಲ್ಕೈದು ಮನೆಗಳ ನಂತರ, ನೀವು ಒಂದು ಸಣ್ಣ ಶಿವನ ದೇವಸ್ಥಾನವನ್ನು ಕಾಣಬಹುದು. ಒಂದು ದಿನ ಸಂಜೆ ಅಮಲೇರಿದ ಸ್ಥಿತಿಯಲ್ಲಿದ್ದ ಏರಿಯಾದ ಪೋಸ್ಟ್‌ಮ್ಯಾನ್ ದೇವಸ್ಥಾನದ ಮುಂದೆ ಒದ್ದಾಡುತ್ತಾ ಅದರ ಮುಂದೆ ಕುಳಿತಿದ್ದನ್ನು ನೋಡಿದೆ.

ಆತ ಶಿವನನ್ನು ಪ್ರಾರ್ಥಿಸುತ್ತಿರುವುದನ್ನು ನೋಡಿದೆ. ಆತ ‘ಬಾಬಾ, ನೀವು ಮದ್ಯ ಮತ್ತು ಗಾಂಜಾದ ಪ್ರಭುವಾಗಿರುವುದರಿಂದ, ನೀವು ಕುಡಿಯುವವರ ಕುಟುಂಬಗಳನ್ನು ನೋಡಿಕೊಳ್ಳಬೇಕು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದರು ಎಂದು ಬರೆದಿದ್ದಾರೆ. ಭಟ್ಟಾಚಾರ್ಯಾ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

Umesha HS

Recent Posts

ಬಿಸಿಲಿನ ತಾಪ, ಮೇವಿನ ಕೊರತೆಯಿಂದ ಸಾವಿಗೀಡಾಗುತ್ತಿವೆ ಸಾಕುಪ್ರಾಣಿಗಳು

ಹೆಚ್ಚುತ್ತಿರುವ ಬಿಸಿಲಿನ ತಾಪ ಹಾಗೂ ಸಮರ್ಪಕ ಮೇವು ದೊರಕದೆ ಕಾಡಂಚಿನ ಗ್ರಾಮಗಳ ಜಾನುವಾರು, ಸಾಕುಪ್ರಾಣಿಗಳು ಸಾವಿಗೀಡಾಗುತ್ತಿವೆ.

5 mins ago

ದೊಡ್ಡಬಳ್ಳಾಪುರ: ಹಳೇ ದ್ವೇಷಕ್ಕೆ ಯುವಕನ ಕತ್ತು ಕುಯ್ದು ಕೊಲೆ

ಹಳೇ ದ್ವೇಷಕ್ಕೆ ನಡುರಸ್ತೆಯಲ್ಲಿ ಯುವಕನ ಕತ್ತು ಕುಯ್ದು ಕೊಲೆ ಮಾಡಿದ ಘಟನೆ ದೊಡ್ಡಬಳ್ಳಾಪುರ ಹೊರವಲಯ ನವೋದಯ ಶಾಲೆಯ ಮುಂಭಾಗದಲ್ಲಿ ನಡೆದಿದೆ.

19 mins ago

ಕೇಂದ್ರ ಸೂಚನೆ ನೀಡಿದ ಕೂಡಲೇ ರಾಜ್ಯದಲ್ಲಿ ಸಿಎಎ ಅನುಷ್ಠಾನ: ಮೋಹನ್‌ ಯಾದವ್‌

ದೇಶಾದ್ಯಂತ ಚುನಾವಣೆಗ ಅಂತ್ಯಗೊಳುವುದಕ್ಕೂ ಮುನ್ನ ವಿವಿಧ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕ್ರಿಯೆ ಆರಂಭಿಸಬೇಕೆಂದು ಕೇಂದ್ರ ನಿರ್ಧರಿಸಿದೆ.

36 mins ago

ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಮಾನಸಿಕ ಅಸ್ವಸ್ಥ

ವ್ಯಕ್ತಿಯೊಬ್ಬ ತನ್ನ ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ  ಸೀತಾಪುರದಲ್ಲಿ ನಡೆದಿದೆ.

55 mins ago

ಕಲಬುರಗಿ: ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ

ಮದುವೆಗೆ ನಿರಾಕರಿಸಿದ್ದಕ್ಕೆ  ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ನಗರ ಹೊರವಲಯದ ಯಲ್ಲಾಲಿಂಗ್ ಕಾಲೋನಿಯಲ್ಲಿ ನಡೆದಿದೆ.

1 hour ago

ಮುಂದಿನ 6 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಮುಂದಿನ 6 ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ  ನೀಡಿದೆ.

2 hours ago