News Karnataka Kannada
Monday, April 22 2024
Cricket
ವಿದೇಶ

KSRTC ಹೆಸರು ಬಳಕೆಗೆ ರಿಜಿಸ್ಟ್ರಾರ್‌ ಆಫ ಟ್ರೇಡ್‌ ಮಾರ್ಕ್ಸ್‌ ನಿರ್ಬಂಧ ವಿಧಿಸಿಲ್ಲ ; ಸ್ಪಷ್ಟನೆ

Photo Credit :

KSRTC ಹೆಸರು  ಬಳಕೆಗೆ    ರಿಜಿಸ್ಟ್ರಾರ್‌ ಆಫ ಟ್ರೇಡ್‌ ಮಾರ್ಕ್ಸ್‌ ನಿರ್ಬಂಧ ವಿಧಿಸಿಲ್ಲ ; ಸ್ಪಷ್ಟನೆ

ಬೆಂಗಳೂರು: ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ‘ಕೆಎಸ್‌ಆರ್‌ಟಿಸಿ’ ಟ್ರೇಡ್‌ಮಾರ್ಕ್ ಬಳಕೆಗೆ ನಿಷೇಧಿಸುವ ಯಾವುದೇ ಆದೇಶ ಟ್ರೇಡ್‌ಮಾರ್ಕ್ ರಿಜಿಸ್ಟ್ರಾರ್‌ನಿಂದ ಬಂದಿಲ್ಲ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಸ್ಪಷ್ಟಪಡಿಸಿದ್ದಾರೆ.
‘ಎರಡು ರಾಜ್ಯಗಳ ನಡುವಿನ ಕಾನೂನಾತ್ಮಕ ಹೋರಾಟ ಅಂತ್ಯಗೊಂಡಿದೆ ಎಂಬ ಮಾಧ್ಯಮ ವರದಿಗಳು ಸತ್ಯಕ್ಕೆ ದೂರವಾಗಿವೆ. ಟ್ರೇಡ್‌ಮಾರ್ಕ್ ರಿಜಿಸ್ಟ್ರಾರ್‌ನಿಂದ ಈವರೆಗೆ ಯಾವುದೇ ಆದೇಶವೂ ನಮಗೆ ಬಂದಿಲ್ಲ’ ಎಂದು ತಿಳಿಸಿದ್ದಾರೆ.
ಇಂಟಲೆಕ್ಚುವಲ್‌ ಪ್ರಾಪರ್ಟಿ ಅಪೀಲೇಟ್‌ ಬೋರ್ಡ್‌ (ಐಪಿಎಬಿ) ಮುಂದೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಲ್ಲಿಸಿರುವ ಮೇಲ್ಮನವಿ ಸಂಬಂಧವೂ ಯಾವುದೇ ಅಂತಿಮ ಆದೇಶ ಹೊರಬಿದ್ದಿಲ್ಲ. ಏತನ್ಮಧ್ಯೆ, ಈ ಮಂಡಳಿಯನ್ನೇ ರದ್ದುಪಡಿಸಿ ಕೇಂದ್ರ ಸರ್ಕಾರ ಏಪ್ರಿಲ್ 4ರಂದು ಸುಗ್ರೀವಾಜ್ಞೆ ಹೊರಡಿಸಿದೆ. ಅಲ್ಲಿ ಬಾಕಿ ಇರುವ ಅರ್ಜಿಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ. ಆದ್ದರಿಂದ ಕೆಎಸ್‌ಆರ್‌ಟಿಸಿ ಟ್ರೇಡ್‌ಮಾರ್ಕ್ ನೋಂದಣಿ ಪ್ರಸ್ತುತ ಜಾರಿಯಲ್ಲಿದೆ’ ಎಂದು ಸ್ಪಷ್ಟ‍ಪಡಿಸಿದ್ದಾರೆ.
‘ಕೇರಳ ಸಾರಿಗೆ ಸಂಸ್ಥೆಯು ರಾಜ್ಯ ಸರ್ಕಾರ ಮತ್ತು ಕೆಎಸ್‌ಆರ್‌ಟಿಸಿಗೆ ನೋಟಿಸ್ ನೀಡಲು ಉದ್ದೇಶಿಸಿದೆ ಎಂಬ ಸುದ್ದಿಗಳು ಪ್ರಕಟವಾಗಿದೆ. ಅದು ಕೂಡ ಸುಳ್ಳು ವರದಿ. ಒಂದು ವೇಳೆ ಕೇರಳ ಸಾರಿಗೆ ಸಂಸ್ಥೆ ಆ ರೀತಿಯ ನೋಟಿಸ್ ನೀಡಿದರೆ ಸೂಕ್ತ ಉತ್ತರ ನೀಡಲಾಗುವುದು. ಈ ಹೆಸರು ಉಳಿಸಿಕೊಳ್ಳಲು ಕಾನೂನು ಹೋರಾಟ ಮುಂದುವರಿಸಿದ್ದೇವೆ. ವಕೀಲರ ಜತೆ ಚರ್ಚೆ ನಡೆಸಿದ್ದೇವೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು