Ad

ಇಂಗ್ಲೆಂಡ್‌ ನೂತನ ಪ್ರಧಾನಿಯಾಗಿ ಕೀರ್ ಸ್ಟಾರ್ಮರ್ ಆಯ್ಕೆ

Pm Landn

ಲಂಡನ್: ಇಂಗ್ಲೆಂಡ್‌ ಮುಂದಿನ ಪ್ರಧಾನಮಂತ್ರಿಯಾಗಿ ಲೇಬರ್‌ ಪಾರ್ಟಿಯ  61 ವರ್ಷ ವಯಸ್ಸಿನ ಕೀರ್ ಸ್ಟಾರ್ಮರ್ ಆಯ್ಕೆಯಾಗಿದ್ದಾರೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಕರ್ನರ್ವೇಟೀವ್ ಪಕ್ಷವನ್ನು ಬಗ್ಗು ಬಡಿದಿರುವ ಲೇಬರ್ ಪಾರ್ಟಿ ಅಧಿಕಾರದ ಗದ್ದುಗೆ ಹಿಡಿದಿದೆ. ಲೇಬರ್ ಪಾರ್ಟಿಯ ಅಬ್ಬರದ ಮುಂದೆ 14 ವರ್ಷದ ಬಳಿಕ ಕರ್ನರ್ವೇಟೀವ್ ಪಾರ್ಟಿ ಸಂಪೂರ್ಣವಾಗಿ ಮಂಕಾಗಿದೆ.

Ad
300x250 2

ಇಂಗ್ಲೆಂಡ್ ಪಾರ್ಲಿಮೆಂಟ್‌ನ ಒಟ್ಟು 650 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅಧಿಕ್ಕೇರುವ ಪಕ್ಷಕ್ಕೆ 326 ಸ್ಥಾನಗಳ ಅವಶ್ಯಕತೆ ಇತ್ತು. ಇತ್ತೀಚಿನ ಮಾಹಿತಿ ಪ್ರಕಾರ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿ 326 ಸ್ಥಾನಗಳನ್ನ ಗೆದ್ದು ಮುನ್ನುಗ್ಗುತ್ತಿದೆ. ಎಕ್ಸಿಟ್‌ ಪೋಲ್‌ ಪ್ರಕಾರ ಲೇಬರ್ ಪಕ್ಷ 410 ಸೀಟ್‌ಗಳಲ್ಲಿ ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ.

ಎಡಪಂಥೀಯ ಸಿದ್ಧಾಂತಗಳ ಬಗ್ಗೆ ಒಲವು ಹೊಂದಿದ್ದ ಕೀರ್ ಸ್ಟಾರ್ಮರ್‌ ಅವರು ವೃತ್ತಿಯಲ್ಲಿ ವಕೀಲರಾಗಿದ್ದರು. ಮಾನವ ಹಕ್ಕುಗಳ ಪರ ಬಹಳಷ್ಟು ಹೋರಾಟಗಳನ್ನು ನಡೆಸಿ ಗಮನ ಸೆಳೆದಿದ್ದಾರೆ. ಮಾನವ ಹಕ್ಕು, ಕಾರ್ಮಿಕರ ಪರ ಕೀರ್ ಸ್ಟಾರ್ಮರ್‌ ನಡೆಸಿದ ದೀರ್ಘಕಾಲಿನ ಹೋರಾಟಕ್ಕೆ ಇಂಗ್ಲೆಂಡ್‌ನಲ್ಲಿ ಕೊನೆಗೂ ದಿಗ್ವಿಜಯ ಸಿಕ್ಕಿದೆ.

Ad
Ad
Nk Channel Final 21 09 2023
Ad