Bengaluru 25°C
Ad

ಬೈರುತ್​​ ಮೇಲೆ ಇಸ್ರೇಲ್​ ವೈಮಾನಿಕ ದಾಳಿ : 22 ಮಂದಿ ಸಾವು

ಮಧ್ಯ ಬೈರುತ್‌ನಲ್ಲಿ ಗುರುವಾರ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 22 ಮಂದಿ ಅಸು ನೀಗಿದ್ದಾರೆ. ದಾಳಿಯಲ್ಲಿ ಡಜನ್‌ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ಹೇಳಿದೆ. ಜೊತೆಗೆ ಲೆಬನಾನ್‌ನಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾಗಳೊಂದಿಗೆ ಇಸ್ರೇಲ್​ ಸೈನಿಕರು ರಕ್ತಸಿಕ್ತ ಸಂಘರ್ಷ ಮುಂದುವರೆದಿದೆ.

ಲೆಬನಾನ್​: ಮಧ್ಯ ಬೈರುತ್‌ನಲ್ಲಿ ಗುರುವಾರ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 22 ಮಂದಿ ಅಸು ನೀಗಿದ್ದಾರೆ. ದಾಳಿಯಲ್ಲಿ ಡಜನ್‌ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ಹೇಳಿದೆ. ಜೊತೆಗೆ ಲೆಬನಾನ್‌ನಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾಗಳೊಂದಿಗೆ ಇಸ್ರೇಲ್​ ಸೈನಿಕರು ರಕ್ತಸಿಕ್ತ ಸಂಘರ್ಷ ಮುಂದುವರೆದಿದೆ.

ಸೆಂಟ್ರಲ್ ಬೈರುತ್‌ನ ಮೇಲಿನ ಈ ವಾಯುದಾಳಿ ಒಂದು ವರ್ಷದಲ್ಲಿ ಅತಿ ಹೆಚ್ಚು ಮಾರಣಾಂತಿಕವಾಗಿದೆ ಎಂದು ವರದಿಯಾಗಿದೆ. ಮಧ್ಯ ಬೈರುತ್​ ಮೇಲೆ ಏಕಕಾಲದಲ್ಲಿ ಎರಡು ವಸತಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್​ ಸೇನೆ ದಾಳಿ ನಡೆಸುತ್ತಿದೆ. ವೈಮಾನಿಕ ದಾಳಿಯಲ್ಲಿ ಎಂಟು ಅಂತಸ್ತಿನ ಕಟ್ಟಡವನ್ನು ದ್ವಂಸಗೊಳಿಸಲಾಗಿದೆ ಎಂದು ಎಪಿ ಛಾಯಾಗ್ರಾಹಕ ಹೇಳಿದ್ದಾರೆ. ಈ ನಡುವೆ ಹಿಜ್ಬುಲ್ಲಾದ ಉನ್ನತ ಭದ್ರತಾ ಅಧಿಕಾರಿ ವಫೀಕ್ ಸಫಾ ಅವರನ್ನು ಕೊಲ್ಲುವ ಪ್ರಯತ್ನ ವಿಫಲವಾಗಿದೆ ಎಂದು ಹಿಜ್ಬುಲ್ಲಾದ ಅಲ್ ಮನರ್ ಟಿವಿ ವರದಿ ಮಾಡಿದೆ. ಉದ್ದೇಶಿತ ಎರಡೂ ಕಟ್ಟಡಗಳ ಒಳಗೆ ಸಫಾ ಇರಲಿಲ್ಲ ಎಂದು ಅದು ಹೇಳಿದೆ. ಈ ವರದಿಗಳ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ.

Ad
Ad
Nk Channel Final 21 09 2023