ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್‌ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಭಾರತೀಯ ಮೂಲದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಲಿಯಾಂಡರ್ ನಿವಾಸಿಗಳಾದ ಅರವಿಂದ್ ಮಣಿ(45), ಅವರ ಪತ್ನಿ ಪ್ರದೀಪಾ ಅರವಿಂದ್(40), ಮತ್ತು ಅವರ 17 ವರ್ಷದ ಮಗಳು ಆಂಡ್ರಿಲ್ ಅರವಿಂದ್, ಲ್ಯಾಂಪಾಸ್ ಕೌಂಟಿ ಬಳಿ ಬುಧವಾರ ಬೆಳಿಗ್ಗೆ 5.45 ರ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇನ್ನು ಅರವಿಂದ್ ಮತ್ತು ಅವರ ಪತ್ನಿ ಉತ್ತರ ಟೆಕ್ಸಾಸ್‌ನಲ್ಲಿರುವ ತಮ್ಮ ಮಗಳನ್ನು ಕಾಲೇಜಿಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ವಾಹನಕ್ಕೆ ಡಿಕ್ಕಿ ಹೊಡೆದ ಕಾರಿನ ಚಾಲಕ ಸೇರಿದಂತೆ ಒಟ್ಟು ಐದು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈ ದಂಪತಿ 14 ವರ್ಷದ ಮಗ ಆದಿರ್ಯಾನ್ ಘಟನೆ ಸಂದರ್ಭದಲ್ಲಿ ಜೊತೆಯಲ್ಲಿರಲಿಲ್ಲ. ಅಪ್ಪ, ಅಮ್ಮ ಮತ್ತು ಅಕ್ಕನನ್ನು ಕಳೆದುಕೊಂಡು ಪುಟ್ಟ ಬಾಲಕ ಅನಾಥನಾಗಿದ್ದಾನೆ. ಇನ್ನು GoFundMe ಎಂಬ ಸಾಮಾಜಿಕ ಜಾಲತಾಣ ಪೇಜ್ ಬಾಲಕನಿಗೆ ನಿಧಿ ಸಂಗ್ರಹಿಸಿದೆ. ಇದುವರೆಗೆ ಏಳು ಲಕ್ಷ ಡಾಲರ್‌ಗೂ ಅಧಿಕ ಹಣ ಸಂಗ್ರಹವಾಗಿದೆ.