Categories: ವಿದೇಶ

ಸಂಬಂಧ ಹಳಸಲು ಭಾರತವೇ ಕಾರಣ: ಜಸ್ಟಿನ್ ಟ್ರುಡೊ

ಒಟ್ಟಾವಾ: ಕೆನಡಾದ ರಾಜತಾಂತ್ರಿಕರ ಮೇಲೆ ಭಾರತ ಸರ್ಕಾರದ ದಬ್ಬಾಳಿಕೆಯು ಎರಡೂ ದೇಶಗಳಲ್ಲಿನ ಲಕ್ಷಾಂತರ ಜನರಿಗೆ ಜೀವನವನ್ನು ಕಷ್ಟಕರವಾಗಿಸಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಶುಕ್ರವಾರ ಹೇಳಿದ್ದಾರೆ.

41 ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಂಡಿರುವುದಾಗಿ ಕೆನಡಾ ಹೇಳಿದ ಒಂದು ದಿನದ ನಂತರ ಟ್ರೂಡೊ ಈ ಪ್ರತಿಕ್ರಿಯೆ ನೀಡಿದ್ದಾರೆ.

ಕೆನಡಾದಲ್ಲಿ ಜೂನ್‌ನಲ್ಲಿ ನಡೆದ ಸಿಖ್ ಭಯೋತ್ಪಾದಕನ ಹತ್ಯೆಯಲ್ಲಿ ಭಾರತೀಯ ಏಜೆಂಟರು ಭಾಗಿಯಾಗಿರಬಹುದು ಎಂದು ಟ್ರುಡೊ ಕಳೆದ ತಿಂಗಳು ಹೇಳಿದ ಬಳಿಕ ಕೆನಡಾ – ಭಾರತ ಸಂಬಂಧ ಹಳಸಿದೆ. ಈಗ ನಡೆಯುತ್ತಿರುವ ಬೆಳವಣಿಗೆಗಳಿಂದ ಲಕ್ಷಾಂತರ ಜನರ ಜೀವನ ಕಷ್ಟಕರವಾಗಿದೆ. ಇದಕ್ಕೆ ಭಾರತ ಸರ್ಕಾರವೇ ಕಾರಣ ಎಂದು ಹೇಳಿದ್ದಾರೆ.

ಕೆನಡಾದ ರಾಜತಾಂತ್ರಿಕರ ಉಚ್ಚಾಟನೆಯು ವ್ಯಾಪಾರ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಮತ್ತು ಕೆನಡಾದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ತೊಂದರೆಗಳನ್ನು ಉಂಟುಮಾಡುತ್ತದೆ ಎಂದು ಟ್ರೂಡೊ ಹೇಳಿದರು.

Ashika S

Recent Posts

ಎಂಜಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ರಾಜಧಾನಿಯ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಪ್ರತಿಷ್ಠಿತ ಪಿಇಎಸ್ ಯೂನಿವರ್ಸಿಟಿಯಲ್ಲಿ ಎಂಜಿಯರಿಂಗ್‌ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

20 seconds ago

ಭಾರತೀಯ ಮೂಲದ ಮಹಿಳೆಗೆ ಬಸ್‌ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ

ಭಾರತೀಯ ಮೂಲದ 66ವರ್ಷದ ಮಹಿಳೆಯನ್ನು ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ವಾಯುವ್ಯ ಲಂಡನ್‌ ನ ಬಸ್‌ ನಿಲ್ದಾಣದಲ್ಲಿ ನಡೆದಿರುವುದಾಗಿ ವರದಿ…

32 seconds ago

ಯುವ ನವದಂಪತಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು

ಯುವ ನವ ದಂಪತಿ ನೇಣಿಗೆ ಶರಣಾಗಿರುವ ಘಟನೆ ವಿಜಯಪುರ ‌ನಗರದ ಹೊರ ಭಾಗದ ಶ್ರೀ ಸಿದ್ದೇಶ್ವರ ಬಡಾವಣೆಯಲ್ಲಿ ನಡೆದಿದೆ.

32 mins ago

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಾಯಿ ನಿಧನ

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ತಾಯಿ ಮಾಧವಿ ರಾಜೇ ಸಿಂಧಿಯಾ ದೆಹಲಿ ಏಮ್ಸ್‌ನಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲದಿನಗಳಿಂದ…

43 mins ago

ಪ್ರಬೀರ್ ಪುರಕಾಯಸ್ಥ ಬಂಧನ ಸರಿಯಾದ ಕ್ರಮವಲ್ಲ ಎಂದ ಸುಪ್ರೀಂ

ನ್ಯೂಸ್‌ ಕ್ಲಿಕ್‌ ಸುದ್ಧಿ ತಾಣದ ಸಂಸ್ಥಾಪಕರಾದ ಪ್ರಬೀರ್ ಪುರಕಾಯಸ್ಥ ಅವರನ್ನು ‘ಅಕ್ರಮ ಚಟುವಟಿಕೆ ತಡೆ ಕಾಯ್ದೆ’ (ಯುಎಪಿಎ) ಅಡಿಯಲ್ಲಿ ಬಂಧಿಸಲಾಗಿತ್ತು…

48 mins ago

ಬಸ್‌ನಲ್ಲಿ ಸೀಟಿಗಾಗಿ ಮಹಿಳೆಯರು ಚಪ್ಪಲಿನಲ್ಲಿ ಹೊಡೆದಾಟ

ಬಸ್ ಸೀಟಿಗಾಗಿ ಇಬ್ಬರು ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ಘಟನೆ ಬೀದರ್‌ನಿಂದ ಕಲಬುರಗಿ ಬಸ್‌ನಲ್ಲಿ ಶಕ್ತಿ ಯೋಜನೆ ಅಡಿ ಉಚಿತ…

52 mins ago