Bengaluru 17°C

ಉತ್ತರ ಇಸ್ರೇಲ್‌ನ ಸೇನಾ ನೆಲೆಗಳ ಮೇಲೆ ಹಿಜ್ಬುಲ್ಲಾ ಉಗ್ರರ ಡ್ರೋನ್‌ ದಾಳಿ

ಲೆಬನಾನ್‌ನ ಸಶಸ್ತ್ರ ಗುಂಪು ಹಿಜ್ಬುಲ್ಲಾ ಮಂಗಳವಾರ ಉತ್ತರ ಇಸ್ರೇಲ್‌ಗೆ ಡ್ರೋನ್ ಮತ್ತು ರಾಕೆಟ್‌ಗಳ ಮೂಲಕ ಸರಣಿ ದಾಳಿ ನಡೆಸಿದೆ. ಆದರೆ, ಇದು ಕಳೆದ ವಾರ ಇಸ್ರೇಲ್‌ ತನ್ನ ಕಮಾಂಡರ್‌ ಫುವಾದ್‌ ಶುಕ್ರ್‌ನನ್ನು ಕೊಂದಿದ್ದಕ್ಕೆ ಪ್ರತೀಕಾರವಲ್ಲ ಎಂದು ತಿಳಿಸಿದೆ. ಶುಕ್ರ್‌ನನ್ನು ಕೊಂದಿದ್ದಕ್ಕೆ ಭೀಕರ ಪ್ರತೀಕಾರ ಇನ್ನಷ್ಟೇ ಬರಲಿದೆ ಎಂದು ಎಚ್ಚರಿಕೆ ನೀಡಿದೆ. ಉತ್ತರ ಇಸ್ರೇಲ್‌ನ ಎಕ್ರೆ ಬಳಿಯ ಎರಡು ಮಿಲಿಟರಿ ತಾಣಗಳಲ್ಲಿ ಸರಣಿ ಡ್ರೋನ್‌ ದಾಳಿಳನ್ನು ಮಾಡಲಾಗಿದೆ.  

ಬೈರೂತ್‌:  ಲೆಬನಾನ್‌ನ ಸಶಸ್ತ್ರ ಗುಂಪು ಹಿಜ್ಬುಲ್ಲಾ ಮಂಗಳವಾರ ಉತ್ತರ ಇಸ್ರೇಲ್‌ಗೆ ಡ್ರೋನ್ ಮತ್ತು ರಾಕೆಟ್‌ಗಳ ಮೂಲಕ ಸರಣಿ ದಾಳಿ ನಡೆಸಿದೆ. ಆದರೆ, ಇದು ಕಳೆದ ವಾರ ಇಸ್ರೇಲ್‌ ತನ್ನ ಕಮಾಂಡರ್‌ ಫುವಾದ್‌ ಶುಕ್ರ್‌ನನ್ನು ಕೊಂದಿದ್ದಕ್ಕೆ ಪ್ರತೀಕಾರವಲ್ಲ ಎಂದು ತಿಳಿಸಿದೆ. ಶುಕ್ರ್‌ನನ್ನು ಕೊಂದಿದ್ದಕ್ಕೆ ಭೀಕರ ಪ್ರತೀಕಾರ ಇನ್ನಷ್ಟೇ ಬರಲಿದೆ ಎಂದು ಎಚ್ಚರಿಕೆ ನೀಡಿದೆ. ಉತ್ತರ ಇಸ್ರೇಲ್‌ನ ಎಕ್ರೆ ಬಳಿಯ ಎರಡು ಮಿಲಿಟರಿ ತಾಣಗಳಲ್ಲಿ ಸರಣಿ ಡ್ರೋನ್‌ ದಾಳಿಳನ್ನು ಮಾಡಲಾಗಿದೆ.


ಇನ್ನೊಂದು ಸ್ಥಳದಲ್ಲಿ ಇಸ್ರೇಲಿ ಮಿಲಿಟರಿ ವಾಹನದ ಮೇಲೆ ದಾಳಿ ಮಾಡಿದೆ ಎಂದು ಹಿಜ್ಬುಲ್ಲಾ ಮಾಹಿತಿ ನೀಡಿದೆ. ಸಾಕಷ್ಟು ಡ್ರೋನ್‌ಗಳು ಗಡಿ ದಾಟುತ್ತಿರುವುದನ್ನು ನಾವು ಗಮನಿಸಿದ್ದೇವೆ ಎಂದು ಇಸ್ರೇಲ್‌ ಸೇನೆ ಹೇಳಿದೆ. ಲೆಬನಾನ್‌ನಿಂದ ಈ ಡ್ರೋನ್‌ಗಳು ಬರುತ್ತಿದ್ದು, ಒಂದನ್ನು ಇಂಟರ್‌ಸೆಪ್ಟ್‌ ಮಾಡಲಾಗಿದೆ ಎಂದು ತಿಳಿಸಿದೆ.


ಹಿಜ್ಬುಲ್ಲಾ ಮತ್ತು ಇಸ್ರೇಲಿ ಮಿಲಿಟರಿ ಕಳೆದ 10 ತಿಂಗಳುಗಳಿಂದ ಗಾಜಾ ಯುದ್ಧಕ್ಕೆ ಸಮಾನಾಂತರವಾಗಿ ಹೋರಾಟ ನಡೆಸುತ್ತಿದೆ. ಟಿಟ್-ಫಾರ್-ಟಾಟ್ ಸ್ಟ್ರೈಕ್‌ಗಳು ಹೆಚ್ಚಾಗಿ ಗಡಿ ಪ್ರದೇಶಕ್ಕೆ ಸೀಮಿತವಾಗಿವೆ. ಕಳೆದ ವಾರ, ಇಸ್ರೇಲ್ ಲೆಬನಾನ್‌ನ ರಾಜಧಾನಿ ಬೈರುತ್‌ನ ದಕ್ಷಿಣ ಉಪನಗರಗಳಲ್ಲಿನ ಗುಂಪಿನ ಭದ್ರಕೋಟೆಯ ಮೇಲೆ ನಡೆದ ದಾಳಿಯಲ್ಲಿ ಹಿಜ್ಬುಲ್ಲಾದ ಹಿರಿಯ ಮಿಲಿಟರಿ ಕಮಾಂಡರ್ ಶುಕ್ರ್‌ನನ್ನು ಕೊಂದು ಹಾಕಿತ್ತು.


Nk Channel Final 21 09 2023