Ad

ಉಷ್ಣದ ಅಲೆ: 53.3 ಡಿ.ಸೆ. ತಾಪಮಾನಕ್ಕೆ ಕ್ಯಾಲಿಫೋರ್ನಿಯಾ ತತ್ತರ

ಕ್ಯಾಲಿಫೋರ್ನಿಯಾದಲ್ಲಿ ಬಿಸಿಲಿನ ತಾಪ ಮಿತಿ ಮೀರಿ ದ್ದು,ಅಲ್ಲಿನ ಜನತೆ ತತ್ತರಿಸಿ ಹೋಗಿದ್ದಾರೆ. ಸೋಮವಾರ ತಾಪಮಾನ 53.3 ಡಿಗ್ರಿ ಸೆ. (128 ಡಿಗ್ರಿ ಫ್ಯಾರನ್‌ಹೀಟ್‌)ಗೆ ಏರಿಕೆಯಾಗಿದೆ. ಮಿತಿ ಮೀರಿದ ತಾಪ ದಿಂದಾಗಿ ಡೆತ್‌ ವ್ಯಾಲಿ ನೋಡಲು ತೆರಳಿದ್ದ ಪ್ರವಾಸಿಗನೊಬ್ಬ ಮೃತ ಪಟ್ಟಿದ್ದಾನೆ.

ಲಾಸ್‌ಏಂಜಲೀಸ್‌: ಕ್ಯಾಲಿಫೋರ್ನಿಯಾದಲ್ಲಿ ಬಿಸಿಲಿನ ತಾಪ ಮಿತಿ ಮೀರಿ ದ್ದು,ಅಲ್ಲಿನ ಜನತೆ ತತ್ತರಿಸಿ ಹೋಗಿದ್ದಾರೆ. ಸೋಮವಾರ ತಾಪಮಾನ 53.3 ಡಿಗ್ರಿ ಸೆ. (128 ಡಿಗ್ರಿ ಫ್ಯಾರನ್‌ಹೀಟ್‌)ಗೆ ಏರಿಕೆಯಾಗಿದೆ. ಮಿತಿ ಮೀರಿದ ತಾಪ ದಿಂದಾಗಿ ಡೆತ್‌ ವ್ಯಾಲಿ ನೋಡಲು ತೆರಳಿದ್ದ ಪ್ರವಾಸಿಗನೊಬ್ಬ ಮೃತ ಪಟ್ಟಿದ್ದಾನೆ.

Ad
300x250 2

6 ಮಂದಿ ಡೆತ್‌ ವ್ಯಾಲಿ ನೋಡಲು ಬೈಕಿನಲ್ಲಿ ಪ್ರಯಾಣಿಸಿದ್ದರು. ಈ ವೇಳೆ ಅತಿಯಾದ ತಾಪಕ್ಕೆ ಸಿಲುಕಿ ಓರ್ವ ಮೃತಪಟ್ಟಿದ್ದಾನೆ. ಉಳಿದವರಿಗೆ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ಒಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಧೀರ್ಘಾವಧಿಯಿಂದ ಬೀಸುತ್ತಿರುವ ಬಿಸಿಗಾಳಿಯಿಂದಾಗಿ ತಾಪಮಾನದಲ್ಲಿ ವಿಪರೀತ ಏರಿಕೆಯಾಗಿದ್ದು, ಇದ ರಿಂದಾಗಿ ಸುಮಾರು 3.6 ಕೋಟಿ ಮಂದಿ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ಯಾಲಿ ಫೋರ್ನಿಯಾದಲ್ಲಿ ಉಷ್ಣಾಂಶ 43.3 ಡಿ.ಸೆ. ದಾಖಲಾಗಿದೆ. ಡೆತ್‌ ವ್ಯಾಲಿಯಲ್ಲಿ ಗರಿಷ್ಠ 53.3 ಡಿಗ್ರಿ ದಾಖಲಾಗಿದೆ.

Ad
Ad
Nk Channel Final 21 09 2023
Ad