Bengaluru 23°C
Ad

ಉಷ್ಣದ ಅಲೆ : ಮೃತಪಟ್ಟ ಹಜ್‌ ಯಾತ್ರಿಗಳ ಸಂಖ್ಯೆ 1,000ಕ್ಕೆ ಏರಿಕೆ

ಮೆಕ್ಕಾದ ಹಜ್‌ ಯಾತ್ರೆಯಲ್ಲಿ ಬಿಸಿಲಿನ ತಾಪ ತಾಳಲಾರದೇ ಸಾವನ್ನಪ್ಪಿದವರ ಸಂಖ್ಯೆ 1,000ಕ್ಕೆ ಏರಿಕೆಯಾಗಿದ್ದು, ಇದರಲ್ಲಿ ಬಹುತೇಕ ಯಾತ್ರಾರ್ಥಿಗಳು ನೋಂದಣಿ ಮಾಡಿಸಿಕೊಂಡಿಲ್ಲ ಎಂದು ವರದಿ ತಿಳಿಸಿದೆ.

ಮೆಕ್ಕಾ: ಮೆಕ್ಕಾದ ಹಜ್‌ ಯಾತ್ರೆಯಲ್ಲಿ ಬಿಸಿಲಿನ ತಾಪ ತಾಳಲಾರದೇ ಸಾವನ್ನಪ್ಪಿದವರ ಸಂಖ್ಯೆ 1,000ಕ್ಕೆ ಏರಿಕೆಯಾಗಿದ್ದು, ಇದರಲ್ಲಿ ಬಹುತೇಕ ಯಾತ್ರಾರ್ಥಿಗಳು ನೋಂದಣಿ ಮಾಡಿಸಿಕೊಂಡಿಲ್ಲ ಎಂದು ವರದಿ ತಿಳಿಸಿದೆ.

Ad
300x250 2

ಈಜಿಪ್ಟ್‌ ನ 58 ಮಂದಿ ಇದರಲ್ಲಿ ಸೇರಿದ್ದು, ಸೌದಿ ಅರೇಬಿಯಾ ರಾಜತಾಂತ್ರಿಕ ಅಧಿಕಾರಿ ನೀಡಿದ ಮಾಹಿತಿ ಪ್ರಕಾರ, ಹಜ್‌ ಯಾತ್ರೆಯಲ್ಲಿ 658 ಮಂದಿ ಸಾವನ್ನಪ್ಪಿದ್ದು, ಸುಮಾರು 630 ಯಾತ್ರಾರ್ಥಿಗಳು ಅನ್‌ ರಿಜಿಸ್ಟರ್ಡ್.‌ ಒಟ್ಟು 1081 ಮಂದಿ ಬಿಸಿಲ ತಾಪಕ್ಕೆ ಕೊನೆಯುಸಿರೆಳೆದಿದ್ದು, ಅಂದಾಜು 70 ಭಾರತೀಯ ಯಾತ್ರಾರ್ಥಿಗಳು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಸೌದಿಯ ಮೆಕ್ಕಾದಲ್ಲಿ 52 ಡಿಗ್ರಿ ಸೆಲ್ಸಿಯಸ್‌ ನಷ್ಟು ತಾಪಮಾನ ಇದ್ದಿರುವುದಾಗಿ ಹವಾಮಾನ ಇಲಾಖೆ ತಿಳಿಸಿದ್ದು, ಪ್ರತಿ ದಶಕಕ್ಕೂ 0.4 ಡಿಗ್ರಿ ಸೆಲ್ಸಿಯಸ್‌ ನಷ್ಟು ತಾಪಮಾನ ಹೆಚ್ಚಳವಾಗುತ್ತಲೇ ಇದೆ ಎಂದು ಹೇಳಿದೆ.

Ad
Ad
Nk Channel Final 21 09 2023
Ad