Bengaluru 20°C
Ad

ಯುಎಇ ಬಂಟ್ಸ್ ನ 47ನೇ ವರ್ಷದ ‘ಗಲ್ಫ್ ಬಂಟೋತ್ಸವ-2024’

ಯುಎಇ ಬಂಟ್ಸ್ ನ 47 ನೇ ವರ್ಷದ ಫ್ಯಾಮಿಲಿ ಗೆಟ್ ಟುಗೆದರ್ “ಗಲ್ಫ್ ಬಂಟೋತ್ಸವ – 2024” ನವೆಂಬರ್ 24 ರಂದು ನಗರದ ಅಲ್ ನಸರ್ ಲೆದರ್ ಲ್ಯಾಂಡ್ ನ ಐಸ್ ರಿಂಕ್ ನ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.

ದುಬೈ: ಯುಎಇ ಬಂಟ್ಸ್ ನ 47 ನೇ ವರ್ಷದ ಫ್ಯಾಮಿಲಿ ಗೆಟ್ ಟುಗೆದರ್ “ಗಲ್ಫ್ ಬಂಟೋತ್ಸವ – 2024” ನವೆಂಬರ್ 24 ರಂದು ನಗರದ ಅಲ್ ನಸರ್ ಲೆದರ್ ಲ್ಯಾಂಡ್ ನ ಐಸ್ ರಿಂಕ್ ನ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.

Ad

ಯುಎಇಯ ರಾಜ್ಯದ ಸಾವಿರಾರು ಬಂಟ ಬಾಂಧವರು ಮತ್ತು ಯುಎಇಯ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಇನ್ನಿತರ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಬೆಳಿಗ್ಗೆಯಿಂದ ರಾತ್ರಿ ಎಂಟು ಗಂಟೆಯ ವರೆಗೆ ಸಭಾಂಗಣ ತುಂಬಿ ತುಳುಕುತಿದ್ದ ಕಾರ್ಯಕ್ರಮದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮಗಳು ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳು ವ್ಯವಸ್ಥಿತ ರೂಪದಲ್ಲಿ ಜರಗಿ ನೋಡುಗರಿಗೆ ಸಂತೋಷವನ್ನು ಉಂಟು ಮಾಡಿತ್ತು.

Ad

Piv

ಕೇರಳದ ಚೆಂಡೆ ವಾಲಗ,ಹೆಂಗಳೆಯರು ಕುಂಭ ಕೆಲಸದೊಂದಿಗೆ, ತುಳುನಾಡಿನ ಪುರತನ ವಸ್ತುಗಳನ್ನು ಹಿಡಿದುಕೊಂಡು ಹುಲಿ ವೇಷ ಕುಣಿತದೊಂದಿಗೆ ಮೆರವಣಿಗೆಯ ಮೂಲಕ ಗಣ್ಯತಿ ಗಣ್ಯರನ್ನು ಸಭಾಂಗಣಕ್ಕೆ ಬರಮಾಡಿಕೊಳ್ಳಲಾಯಿತ್ತು. “ಗಲ್ಫ್ ಬಂಟೋತ್ಸವ-2024” ದ ಉದ್ಘಾಟನೆಯನ್ನು ಯುಎಇ ಬಂಟ್ಸ್ ನ ಮಾಹ ಪೋಷಕ ಡಾ.ಬಿ‌.ಆರ್. ಶೆಟ್ಟಿ ಮತ್ತು ಎಂ.ಆರ್.ಜಿ. ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಕೆ.ಪ್ರಕಾಶ್ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.

Ad

“ಬಂಟ ವಿಭೂಷಣ” ಪ್ರಶಸ್ತಿ ಪ್ರಧಾನ:
ವರ್ಷಂಪ್ರತಿ ಕೊಡಮಾಡುವ ಯುಎಇ ಬಂಟ್ಸ್ ನ “ಬಂಟ ವಿಭೂಷಣ” ಪ್ರಶಸ್ತಿಯನ್ನು 2024 ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಭೂಷಿತರು,ದಾನಿಗಳು, ಪ್ರತಿವರ್ಷ “ಆಶಾ ಪ್ರಕಾಶ್ ಶೆಟ್ಟಿ-ನೆರವು” ಎನ್ನುವ ನೆರವು ಕಾರ್ಯಕ್ರಮದ ಮೂಲಕ ಐದು ಕೋಟಿಯಷ್ಟು ಬಡ ಬಗ್ಗರಿಗೆ ನೆರವು ನೀಡುತ್ತಿರುವ ಡಾ.ಕೆ.ಎಂ.ಪ್ರಕಾಶ್ ಶೆಟ್ಟಿಯವರಿಗೆ “ಬಂಟ ವಿಭೂಷಣ” ಪ್ರಶಸ್ತಿಯನ್ನು ಡಾ.ಬಿ.ಆರ್. ಶೆಟ್ಟಿಯವರು ಹಾಗೂ ಇನ್ನಿತರ ಗಣ್ಯತಿ ಗಣ್ಯರು ನೀಡಿ ಗೌರವಿಸಲಾಯಿತು.

Ad

P

ವೇದಿಕೆಯಲ್ಲಿ ಮುಂಬೈ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ, ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾರ್ಮೆಸ್ ಆಂಡ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಕೆ.ಸಿ.ಶೆಟ್ಟಿ, ಸಾಗರ ಬಂಟರ ಸಂಘದ ಅಧ್ಯಕ್ಷರಾದ ಸುಧಿರ್ ಕುಮಾರ್ ಶೆಟ್ಟಿ ಹಕ್ಲಾಡಿ,ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಉಪೇಂದ್ರ ರಾಮಣ್ಣ ಶೆಟ್ಟಿ, ಹುಬ್ಬಳ್ಳಿ ಬಂಟರ ಸಂಘದ ಅಧ್ಯಕ್ಷರಾದ ಸುಗ್ಗಿ ಸುಧಾಕರ ಶೆಟ್ಟಿ, ಕೆನರಾ ಟೂರ್ಸ್ ಆಂಡ್ ಟ್ರಾವೇಲ್ಸ್ ನ ಎಸ್.ಬಿ.ಶೆಟ್ಟಿ ಮುಂಬಯಿ,

Ad

2

ಯುಎಇ ಬಂಟ್ಸ್ ನ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಕಾರ್ಯದರ್ಶಿ ರವಿರಾಜ್ ಶೆಟ್ಟಿ, ಇಂಡಿಯನ್ ಸೋಷಿಯಲ್‌ ಸೆಂಟರ್ ಅಬುಧಾಬಿಯ ಅಧ್ಯಕ್ಷರಾದ ಮಿತ್ರಂಪಾಡಿ ಜಯರಾಮ ರೈ,ಉದ್ಯಮಿಗಳಾದ ದಿವಾಕರ ರೈ,ಸುಜಾತ್ ಶೆಟ್ಟಿ, ಸಜನ್ ಶೆಟ್ಟಿ, ಸುಂದರ್ ಶೆಟ್ಟಿ ಅಬುಧಾಬಿ,ದಿನೇಶ್ ಶೆಟ್ಟಿ ಕೊಟ್ಟಿಂಜ,ಸಂದೀಪ್ ರೈ ನಂಜೆ,ಪ್ರೇಮ್ ನಾಥ್ ಶೆಟ್ಟಿ, ಗುಣಶೀಲ್ ಶೆಟ್ಟಿ, ಯುಎಇ ಬಂಟ್ಸ್ ನ ಸಲಹಾ ಸಮಿತಿಯ ಪದಾಧಿಕಾರಿಗಳು ಹಾಗೂ ಸಂಘಟನ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Ad

K

ಸನ್ಮಾನ ಪತ್ರವನ್ನು ಗಣೇಶ್ ರೈ ವಾಚಿಸಿದರು.ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಸ್ವಾಗತಿಸಿದರು, ಸರ್ವೋತ್ತಮ ಶೆಟ್ಟಿ ಮತ್ತು ತುಳುನಾಡಿನ ಖ್ಯಾತ ನಿರೂಪಕ ನಿತೇಶ್ ಶೆಟ್ಟಿ ಎಕ್ಕಾರ್ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ವತಿಯಿಂದ “ಶ್ರೀ ರಾಮಾಯಣ ದರ್ಶನ” ಯಕ್ಷಗಾನ ನೃತ್ಯ ನಾಟಕ, ರಂಗ ಸಾರಥಿ ಪ್ರತಿಷ್ಠಾನ ದುಬೈ ವತಿಯಿಂದ ” ಉಂದುಲ ಒಂಜಿ ಕಥೆ” ತುಳು ಕಿರು ಪ್ರಹಾಸನ,

Ad

J

ನಿತೇಶ್ ಶೆಟ್ಟಿ ಮುಂಬಯಿಯರಿಂದ ಸ್ಟ್ಯಾಂಡಪ್ ಕಾಮಿಡಿ, ವಿದೂಷಿ ಸಪ್ನ ಕಿರಣ್ ರವರ ತಂಡದವರಿಂದ ಸ್ವಾಗತ ನೃತ್ಯ, ಸಂಗೀತ ಶೆಟ್ಟಿ ತಂಡದವರಿಂದ ಪ್ರಾರ್ಥನೆ ಗೀತೆ,ಮಕ್ಕಳ ಸಿನಿ ನೃತ್ಯ ಸ್ಪರ್ಧೆ, ಗಾಯನ ಸ್ಪರ್ಧೆ, ಫ್ಯಾಷನ್ ಶೋ ಸ್ಪರ್ಧೆ, ಜಾನಪದ ನೃತ್ಯ ಸ್ಪರ್ಧೆ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.ನಮ್ಮ ಕುಡ್ಲ ಚಾನೆಲ್ ವಾರ್ತ ವಾಚಕಿ ಶ್ರೀಮತಿ ಪ್ರೀಯ ಹರೀಶ್ ಶೆಟ್ಟಿಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

Ad

P (1)

ಅತೀ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ,ಕಾರ್ಯಕ್ರಮದ ಮಾಹ ಪೋಷಕರಿಗೆ,ಕನ್ನಡ- ತುಳು ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ,ಮಾಧ್ಯಮ ಮಿತ್ರರಿಗೆ,ಕಾರ್ಯಕ್ರಮದ ಯಶಸ್ವಿಗೆ ದುಡಿದ ಕಾರ್ಯಕರ್ತರಿಗೆ ಗೌರವಿಸಲಾಯಿತು. 2024 ನೇ ಸಂಘಟನ ಸಮಿತಿಯ ಪದಾಧಿಕಾರಿಗಳಾದ ಪ್ರೇಮ್ ನಾಥ್ ಶೆಟ್ಟಿ ಮತ್ತು ಸುದೇವಿ ಶೆಟ್ಟಿ ಅಬುಧಾಬಿ, ಯತಿರಾಜ್ ಶೆಟ್ಟಿ ಮತ್ತು ಶ್ರೇಯಾ ಶೆಟ್ಟಿ ಅಬುಧಾಬಿ, ಮಹೇಶ್ ಶೆಟ್ಟಿ ಮತ್ತು ಚಿತ್ರ ಶೆಟ್ಟಿ ಮುಸಾಫ,ರಮಾನಂದ ಶೆಟ್ಟಿ ಮತ್ತು ಆಶಾ ಶೆಟ್ಟಿ ದುಬೈ,ಜೀವನ್ ಶೆಟ್ಟಿ ಮತ್ತು ಪೂರ್ಣ ಶೆಟ್ಟಿ ದುಬೈ,

Ad

ದ್ರುವ ಶೆಟ್ಟಿ ಮತ್ತು ದೀಕ್ಷ ಶೆಟ್ಟಿ ದುಬೈ, ಸುಜೀತ್ ಶೆಟ್ಟಿ ಮತ್ತು ವೀಣ ಶೆಟ್ಟಿ ದುಬೈ, ಪ್ರದೀಪ್ ಶೆಟ್ಟಿ ಮತ್ತು ಆತ್ಮಿ ಶೆಟ್ಟಿ ದುಬೈ, ಮಂಜುಪ್ರಸಾದ್ ಶೆಟ್ಟಿ ಶಾರ್ಜಾ,ಸೂಷ್ಮ ನಿಕೇಶ್ ಶೆಟ್ಟಿ ಶಾರ್ಜಾ,ಸಹನ ಶೆಟ್ಟಿ ಶಾರ್ಜಾ,ವಿಕಾಸ್ ಶೆಟ್ಟಿ ಮತ್ತು ಭವ್ಯ ಶೆಟ್ಟಿ ಅಲ್ ಐನ್ ರವರು ಕಾರ್ಯಕ್ರಮದ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

Ad

P (2)

ಸ್ಪರ್ಧಾ ವಿಜೇತರು:
ಗಾಯನ ಸ್ಪರ್ಧೆ
1, ಬೊಲ್ಪು ತಂಡ ದುಬೈ
2,ತುಳುನಾಡ ತುಡರ್ ದುಬೈ
3,ಮೆಲೊಡಿ ಮೇಕರ್ಸ್ ದುಬೈ
4, ಸುಗ್ಗಿ ಶ್ರೀಂಗರ ಅಬುಧಾಬಿ

Ad

ಮಕ್ಕಳ ನೃತ್ಯ ಸ್ಪರ್ಧೆ
1, ಕರಾವಳಿ ಪಟಕಿ ಸ್ ಅಬುಧಾಬಿ
2,ಜೋಕುಲಾಟಿಗೆ ದುಬೈ
3,ಡ್ಯಾನ್ಸ್ ಡಿವೈನ್ ದುಬೈ
4, ಮಂಗಳೂರು ಲಿಂಟಲ್ ದುಬೈ
5, ಡ್ಯಾನ್ಸಿಂಗ್ ಡೀವಾಸ್ ದುಬೈ

Ad

ಜಾನಪದ ನೃತ್ಯ ಸ್ಪರ್ಧೆ
1, ಪೆರ್ಮೆದ ಸಿರಿಕುಳು ದುಬೈ
2, ನೃತ್ಯ ಸಾರಥಿ ದುಬೈ
3,ಐಸಿರ ಅಬುಧಾಬಿ
4, ತುಳುನಾಡ ಬಂಟೆರ್ ದುಬೈ

Ad

ಫ್ಯಾಷನ್ ಶೋ ಸ್ಪರ್ಧೆ
1,ನವದುರ್ಗ ಶಕ್ತಿ
2,ಡೈನಸ್ಟಿಸ್ ಡ್ರೆಪ್ಸ್,ಗ್ರೆಸ್ ಆಫ್ ದ ಇಂಡಿಯನ್ ರೋಯಲ್ಟಿ
3, ಜನ್ಮಭೂಮಿ ಕರ್ಮಭೂಮಿ
4, ಅಬುಧಾಬಿ ಬಂಟೆರ್ ತುಳುನಾಡ ತುತೈತ

Ad

ಅತ್ಯುತ್ತಮ ಫ್ಯಾಷನ್ ಉಡುಗೆ
ಸಪ್ನಾ ಶೆಟ್ಟಿ, ರಿತೇಶ್ ಶೆಟ್ಟಿ

Ad

ಅತ್ಯುತ್ತಮ ಫ್ಯಾಷನ್ ನಡಿಗೆ
ತನುಶ್ರೀ ಮಹೇಶ್ ಶೆಟ್ಟಿ, ಪ್ರವೀಣ್ ಶೆಟ್ಟಿ

Ad
Ad
Ad
Nk Channel Final 21 09 2023