News Karnataka Kannada
Wednesday, May 01 2024
ವಿದೇಶ

24 ಗಂಟೆಯಲ್ಲಿ 99 ಬಾರ್‌ ಗಳಲ್ಲಿ ಕುಡಿದು ಗಿನ್ನೆಸ್‌ ದಾಖಲೆ

Guinness World Record for drinking in 99 bars in 24 hours
Photo Credit : News Kannada

ಸಿಡ್ನಿ: ಕುಡಿಯೋದೇ ನನ್ನ ವೀಕ್ನೆಸ್‌ ಹಾಡಿನಂತೆ ಕೆಲವರು ಕುಡಿಯುವುದೇ ಜೀವನ ಸರ್ವಸ್ವ ಎಂಬಂತೆ ಇರುತ್ತಾರೆ. ಅದೇ ರೀತಿ ಆಸ್ಟ್ರೇಲಿಯದ ಸಿಡ್ನಿಯಲ್ಲಿರುವ ಹ್ಯಾರಿ ಕೂರೋಸ್ ಮತ್ತು ಜೇಕ್ ಲೋಯ್ಟರ್ಟನ್ ಎಂಬ ಸ್ನೇಹಿತರು ಒಂದು ದಿನದಲ್ಲಿ ಬರೋಬ್ಬರಿ 99 ಬಾರ್‌ ಗಳಿಗೆ ಭೇಟಿ ನೀಡಿಯೇ ಗಿನ್ನಿಸ್‌ ದಾಖಲೆ ಬರೆದಿದ್ದಾರೆ.
ಮದ್ಯರಾತ್ರಿ 12 ಗಂಟೆಗೆ ಬಾರ್‌ ಗಳಿಗೆ ಹೋಗುವ ಪ್ಲ್ಯಾನ್‌ ಗೆ ಚಾಲನೆ ನೀಡಿದರು. ಆದರೆ ಆ ಸಮಯದಲ್ಲಿ ಬಹುತೇಕ ಹೆಚ್ಚಿನ ಪಬ್‌ (ಬಾರ್ ಗಳು) ಮುಚ್ಚಿರುವುದರಿಂದ ನಡೆದುಕೊಂಡೇ ಹೋಗಿ ಬಾರ್‌ ತೆರೆದಿದ್ದ ಬಾರ್‌ ಗಳಿಗೆ ಹೋಗಿ ಕುಡಿಯಲು ಶುರು ಮಾಡಿದ್ದಾರೆ. ಆ ಬಳಿಕ ಕೆಲ ಸಮಯ ವಿಶ್ರಾಂತಿ ತೆಗೆದುಕೊಂಡು ಮುಂಜಾನೆ ಮತ್ತೆ ಬಾರ್‌ ಗಳಿಗೆ ಹೋಗಿದ್ದಾರೆ.

ಹೋಗುವ ಪ್ರತಿ ಎರಡನೇ ಬಾರ್‌ ನಲ್ಲಿ ಹ್ಯಾರಿ ಕೂರೋಸ್ ಮತ್ತು ಜೇಕ್ ಲೋಯ್ಟರ್ಟನ್ ಮದ್ಯ ಕುಡಿಯುವ ಯೋಜನೆಯನ್ನು ಮೊದಲು ಹಾಕಿಕೊಂಡಿದ್ದರು. ಉಳಿದ ಬಾರ್ ನಲ್ಲಿ ಅಲ್ಕೋಹಾಲ್‌ ಮಿಶ್ರಿತವಿಲ್ಲದ ಪಾನೀಯಗಳನ್ನು ಕುಡಿಯಬೇಕೆನ್ನುವ ಪ್ಲ್ಯಾನ್‌ ಹಾಕಿಕೊಂಡಿದ್ದರು. ಆದರೆ ಆ ಬಳಿಕ ಅದನ್ನು ಬದಲಾಯಿಸಿದ್ದಾರೆ. ಸಿಡ್ನಿನಲ್ಲಿ ವಿಪರೀತ ಮದ್ಯಸೇವನೆ ಕುರಿತು ಕಟ್ಟುನಿಟ್ಟಾದ ಕಾನೂನಿದೆ. ಈ ಕಾರಣದಿಂದ ಹೋಗುವ ಬಾರ್‌ ಗಳಲ್ಲಿ ಮಿತವಾಗಿ ಮದ್ಯ ಸೇವಿಸುತ್ತಿದ್ದ ಕಾರಣ ಎಲ್ಲ ಬಾರ್‌ ಗಳಿಗೆ ಇಬ್ಬರನ್ನು ಒಳಗೆ ಬಿಡುತ್ತಿದ್ದರು ಎಂದು ವರದಿ ತಿಳಿಸಿದೆ.

ನಾವು ಅಗತ್ಯವಿರುವ ಸೋಡ ಮಿಶ್ರಿತ ಲಿಕ್ವಿಡ್‌ ನ ಪಾನೀಯವನ್ನು ಸೇವಿಸುವಾಗಲು ನಿಯಂತ್ರಣವಾಗಿದ್ದೆವು. ನಾನು ಆ ಕಾರಣದಿಂದ ಅಗತ್ಯವಿದ್ದಾಗ ಜ್ಯೂಸ್‌ ಕುಡಿಯುತ್ತಿದ್ದೆ ಎಂದು ಹ್ಯಾರಿ ಹೇಳುತ್ತಾರೆ. ವರದಿಗಳ ಪ್ರಕಾರ ಇಬ್ಬರು ಒಂದು ದಿನದಲ್ಲಿ 99 ಬಾರ್‌ ಗಳಿಗೆ ಭೇಟಿ ಕೊಟ್ಟು, ಸುಮಾರು 1,500 ಆಸ್ಟ್ರೇಲಿಯನ್ ಡಾಲರ್‌ಗಳನ್ನು (ಅಂದಾಜು. 82, 652) ಖರ್ಚು ಮಾಡಿದ್ದಾರೆ. ಇದೀಗ ಇವರ ಈ ವಿಚಿತ್ರ ಸಾಧನೆ ಗಿನ್ನೆಸ್‌ ದಾಖಲೆ ಪಟ್ಟಿಗೆ ಸೇರಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು