Ad

ಅಮೆರಿಕದ ಕಾಲೇಜಿನಲ್ಲಿ ಪದವಿ ಪಡೆದವರಿಗೆ ಗ್ರೀನ್‌ ಕಾರ್ಡ್‌ : ಟ್ರಂಪ್ ಭರವಸೆ

ಅಮೇರಿಕಾ ಕಾಲೇಜಿನಲ್ಲಿ ಪದವಿ ಪಡೆಯುವವರಿಗೆ ಟ್ರಂಪ್ ಅವರು ಸಿಹಿ ಸುದ್ದಿ ನೀಡಿದ್ದಾರೆ.ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಂಚೂಣಿಯಲ್ಲಿರುವ ಟ್ರಂಪ್ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ನೇರವಾಗಿ ಗ್ರೀನ್ ಕಾರ್ಡ್ ನೀಡುವ ಘೋಷಣೆಯನ್ನು ಮಾಡಿದ್ದಾರೆ ಇದರೊಂದಿಗೆ ಮುಂಬರುವ ದಿನಗಳಲ್ಲಿ ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ ಎಂದು ಹೇಳಿದ್ದಾರೆ.

ನ್ಯೂಯಾರ್ಕ್: ಅಮೇರಿಕಾ ಕಾಲೇಜಿನಲ್ಲಿ ಪದವಿ ಪಡೆಯುವವರಿಗೆ ಟ್ರಂಪ್ ಅವರು ಸಿಹಿ ಸುದ್ದಿ ನೀಡಿದ್ದಾರೆ.ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಂಚೂಣಿಯಲ್ಲಿರುವ ಟ್ರಂಪ್ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ನೇರವಾಗಿ ಗ್ರೀನ್ ಕಾರ್ಡ್ ನೀಡುವ ಘೋಷಣೆಯನ್ನು ಮಾಡಿದ್ದಾರೆ ಇದರೊಂದಿಗೆ ಮುಂಬರುವ ದಿನಗಳಲ್ಲಿ ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ ಎಂದು ಹೇಳಿದ್ದಾರೆ.

Ad
300x250 2

ಆದರೆ ನವೆಂಬರ್ ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದರೆ ಮಾತ್ರ ಈ ವ್ಯವಸ್ಥೆ ಸಿಗಲಿದೆ. ಸಂದರ್ಶನದಲ್ಲಿ ಹೇಳಿದಂತೆ ಡಿಪ್ಲೊಮಾ ಆದವರಿಗೆ ನೇರವಾಗಿ ಗ್ರೀನ್ ಕಾರ್ಡ್ ನೀಡಲು ಬಯಸುತ್ತೇನೆ, ಇದರಿಂದ ಅವರು ಕಾಲೇಜುಗಳಿಂದ ಪದವಿ ಪಡೆದ ನಂತರ ಈ ದೇಶದಲ್ಲಿ ಉಳಿಯಬಹುದು.

ಎರಡು ವರ್ಷ ಅಥವಾ ನಾಲ್ಕು ವರ್ಷ ಇತ್ಯಾದಿ ಶಿಕ್ಷಣದ ಅವಧಿಗೂ ಇದಕ್ಕೂ ಸಂಬಂಧವಿಲ್ಲ. ಇದನ್ನು ಜೂನಿಯರ್ ಕಾಲೇಜುಗಳಿಗೂ ಅನ್ವಯಿಸಬೇಕು ಎಂದು ನಾನು ಭಾವಿಸಿದ್ದೇನೆ” ಎಂದು ಟ್ರಂಪ್ ಹೇಳಿದರು.

Ad
Ad
Nk Channel Final 21 09 2023
Ad