Ad

ಚೆಸ್​ ಆಡುತ್ತಿದ್ದಾಗಲೇ ಕುಸಿದು ಬಿದ್ದ ಗ್ರ್ಯಾಂಡ್‌ಮಾಸ್ಟರ್ ಸಾವು

ಬಾಂಗ್ಲಾದೇಶದ ಚೆಸ್ ಗ್ರ್ಯಾಂಡ್‌ಮಾಸ್ಟರ್ ಜಿಯಾವುರ್ ರೆಹಮಾನ್ ಚೆಸ್​ ಆಡುತ್ತಿರುವಾಗಲೇ ದಿಢೀರ್​ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಢಾಕಾ: ಬಾಂಗ್ಲಾದೇಶದ ಚೆಸ್ ಗ್ರ್ಯಾಂಡ್‌ಮಾಸ್ಟರ್ ಜಿಯಾವುರ್ ರೆಹಮಾನ್ ಚೆಸ್​ ಆಡುತ್ತಿರುವಾಗಲೇ ದಿಢೀರ್​ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ.

Ad
300x250 2

ರಾಷ್ಟ್ರೀಯ ಚಾಂಪಿಯನ್‌ಶಿಪ್ 12ನೇ ಸುತ್ತಿನ ಪಂದ್ಯದಲ್ಲಿ ಆಡುತ್ತಿದ್ದ ವೇಳೆ ಜಿಯಾವುರ್ ರೆಹಮಾನ್ ಕುಸಿದು ಬಿದ್ದು ನಿಧನರಾದರು ಎಂದು ಬಾಂಗ್ಲಾದೇಶ ಚೆಸ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿಯಾದ ಶಹಾಬ್ ಉದ್ದೀನ್ ಶಮಿಮ್ ಮಾಹಿತಿ ಹಂಚಿಕೊಂಡಿದ್ದಾರೆ.

ರೆಹಮಾನ್ ತನ್ನ ಎದುರಾಳಿ ಇನಾಮುಲ್ ಹೊಸೈನ್ ವಿರುದ್ಧ ಪಂದ್ಯವಾಡುತ್ತಿದ್ದಾಗ ದಿಢೀರ್​​ ಕುಸಿದುಬಿದ್ದರು. ತಕ್ಷಣವೇ ಅವರನ್ನು ಢಾಕಾದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರೊಳಗೆ ಅವರು ಸಾವನ್ನಪ್ಪಿದ್ದರು ಎಂಬುದನ್ನು ವೈದ್ಯರು ಧೃಡಪಡಿಸಿದರು ಎಂದು ಶಮಿಮ್ ಹೇಳಿದ್ದಾರೆ.

Ad
Ad
Nk Channel Final 21 09 2023
Ad