Bengaluru 24°C
Ad

ಫ್ರಾನ್ಸ್​ಗೆ ತೆರಳುತ್ತಿದ್ದ ವಿಮಾನದಲ್ಲಿ ಬೆಂಕಿ: 389 ಪ್ರಯಾಣಿಕರು, 13 ಸಿಬ್ಬಂದಿ ಪ್ರಾಣಾಪಾಯದಿಂದ ಪಾರು

ಕೆನಡಾದ ಟೊರೊಂಟೊ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೋಯಿಂಗ್​ 777 ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.  

ಟೊರೊಂಟೊ: ಕೆನಡಾದ ಟೊರೊಂಟೊ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೋಯಿಂಗ್​ 777 ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

389 ಪ್ರಯಾಣಿಕರು ಹಾಗೂ 13 ಸಿಬ್ಬಂದಿಯೊಂದಿಗೆ ಬೋಯಿಂಗ್​ 777 ವಿಮಾನ ಟೇಕಾಫ್ ಆಗಿತ್ತು. ರಾತ್ರಿ 12 ಗಂಟೆ 17 ನಿಮಿಷಕ್ಕೆ ಟೇಕಾಫ್ ಆಗಿ ಫ್ರಾನ್ಸ್​ಗೆ ತೆರಳುತ್ತಿತ್ತು.

ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನದ ಹೊರ ಭಾಗದ ಬಲಗಡೆ ಶಾರ್ಟ್ ಸರ್ಕ್ಯೂಟ್ ರೀತಿಯಲ್ಲಿ​ ಬೆಂಕಿ ಚಿಮ್ಮಿದೆ. ಬಲಭಾಗದಲ್ಲಿದ್ದ ವಿಮಾನದ ಇಂಜೀನ್ ಸುಟ್ಟು ಹೋಗುತ್ತಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ.

ಇದರಿಂದ ಗಾಬರಿಗೊಂಡ ಒಳಗಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರು ಪ್ಯಾನ್, ಪ್ಯಾನ್ ಎಂದು ಕೂಗಿಕೊಂಡಿದ್ದರಿಂದ ಪೈಲೆಟ್​ಗಳು ಜಾಗೃತರಾಗಿ ರಾತ್ರಿ 12 ಗಂಟೆ 39 ನಿಮಿಷಕ್ಕೆ ಮತ್ತೆ ಅದೇ ವಿಮಾನ ನಿಲ್ದಾಣದಲ್ಲೇ ವಾಪಸ್ ಲ್ಯಾಂಡ್ ಮಾಡಿದ್ದಾರೆ.

ಸದ್ಯ 389 ಪ್ರಯಾಣಿಕರು ಮತ್ತು 13 ಸಿಬ್ಬಂದಿಯೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದು ದೊಡ್ಡ ಅನಾಹುತವೊಂದು ತಪ್ಪಿದೆ ಎಂದು ಹೇಳಲಾಗಿದೆ.

ಪೈಲಟ್‌ಗಳು ಮತ್ತು ಅವರ ಏರ್ ಟ್ರಾಫಿಕ್ ಕಂಟ್ರೋಲರ್‌ಗಳ ಅದ್ಭುತ ಕೆಲಸಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

Ad
Ad
Nk Channel Final 21 09 2023
Ad