ವಾಷಿಂಗ್ಟನ್: ಲಾಂಗ್ ಐಲ್ಯಾಂಡ್‌ನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಂದು ಭಾಷಣ ಮಾಡುವ ಮುನ್ನ ಅವರ ರ‍್ಯಾಲಿಯ ಸ್ಥಳದ ಬಳಿ ಕಾರಿನಲ್ಲಿ ಸ್ಫೋಟಕಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಇಂದು ರಾತ್ರಿ 7 ಗಂಟೆಗೆ ಟ್ರಂಪ್ ನ್ಯೂಯಾರ್ಕ್ನಲ್ಲಿ ಪ್ರಚಾರ ಸಭೆ ನಡೆಸಿದ್ದರು. ಈ ಘಟನೆಯು ಮತ್ತೊಂದು ಆತಂಕಕಾರಿ ಭದ್ರತಾ ಉಲ್ಲಂಘನೆಯನ್ನು ಪ್ರತಿನಿಧಿಸುತ್ತದೆ. ಡೈಲಿ ಮೇಲ್ ವರದಿಯ ಪ್ರಕಾರ, ಫ್ಲೋರಿಡಾದ ಪಾಮ್ ಬೀಚ್ ಗಾಲ್ಫ್ ಕ್ಲಬ್‌ನಲ್ಲಿ ಶಂಕಿತನನ್ನು ಬಂಧಿಸಲು ಕಾರಣವಾದ ಹತ್ಯೆಯ ಪ್ರಯತ್ನದ 3 ದಿನಗಳ ನಂತರ ಈ ಘಟನೆ ಸಂಭವಿಸಿದೆ.
ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಟ್ರಂಪ್ ಅವರ ಗಾಲ್ಫ್ ಕೋರ್ಸ್‌ನಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ನಂತರ ಸ್ಥಳೀಯ ಪೊಲೀಸರು ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಆಡುತ್ತಿದ್ದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ 27-ಹೋಲ್ ಟ್ರಂಪ್ ಇಂಟರ್ನ್ಯಾಷನಲ್ ಗಾಲ್ಫ್ ಕೋರ್ಸ್‌ನ ಹೊರಗೆ ರೈಫಲ್‌ನಿಂದ ಗುಂಡು ಹಾರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅದರ ಬೆನ್ನಲ್ಲೇ ಇಂದು ಸ್ಫೋಟಕಗಳು ಪತ್ತೆಯಾಗಿವೆ ಎಂಬ ಮಾಹಿತಿ ತಿಳಿದು ಬಂದಿದೆ.