News Karnataka Kannada
Monday, April 22 2024
Cricket
ಪಶ್ಚಿಮ ಬಂಗಾಳ

ಜೈಲಿನಲ್ಲಿ ಪ್ರೀತಿ: ಪೆರೋಲ್ ಪಡೆದು ಮದುವೆಯಾದ ‘ಖೈದಿ’ ಜೋಡಿ

Love in jail: 'accused' couple gets married on parole
Photo Credit : News Kannada

ಕೋಲ್ಕತ್ತಾ: ಎರಡು ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಜೈಲು ಸೇರಿದ್ದ ಇಬ್ಬರು ಆರೋಪಿಗಳಿಗೆ ಜೈಲಿನಲ್ಲೇ ಪ್ರೇಮಾಂಕುರವಾಗಿ ಬಳಿಕ ಅವರು ಪೆರೋಲ್ ಮೂಲಕ ಹೊರಬಂದು ಮದುವೆಯಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಜೈಲಿನಲ್ಲಿ ಪರಸ್ಪರ ಪರಿಚಯವಾಗಿ ಸ್ನೇಹಿತರಾಗಿದ್ದ ಅಬ್ದುಲ್ ಹಸೀಮ್ ಅಸ್ಸಾಂ ಮತ್ತು ಶಹನಾರಾ ಖಾತುನ್. ಇಬ್ಬರೂ ಬರ್ಧಮಾನ್ ಸೆಂಟ್ರಲ್ ಕರೆಕ್ಷನಲ್ ಹೋಮ್‌ನಲ್ಲಿ ಭೇಟಿಯಾಗಿದ್ದರು. ಅಬ್ದುಲ್ ಹಸೀಮ್ ಅಸ್ಸಾಂನವರು ಮತ್ತು ಶಹನಾರಾ ಖಾತುನ್ ಪಶ್ಚಿಮ ಬಂಗಾಳದವರು. ಹಾಸಿಮ್‌ಗೆ 8 ವರ್ಷ ಮತ್ತು ಶಹನಾರಾಗೆ 6 ವರ್ಷ ಶಿಕ್ಷೆ ವಿಧಿಸಲಾಗಿತ್ತು. ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಇಬ್ಬರಿಗೂ ಆಗಾಗ ಭೇಟಿಯಾಗುತ್ತಿದ್ದರಿಂದ ಸ್ನೇಹ ಬೆಳೆದು, ಅದು ಪ್ರೀತಿಯಾಗಿ ತಿರುಗಿದೆ.

ಪ್ರೀತಿಯ ಕುರಿತು ಖೈದಿಗಳಿಬ್ಬರು ಕುಟುಂಬಗಳಿಗೆ ತಿಳಿಸಿದ ನಂತರ ಮದುವೆಯಾಗಲು ನಿರ್ಧರಿಸಿದ್ದರು. ಐದು ದಿನಗಳ ಪೆರೋಲ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಪೂರ್ವ ಬರ್ಧಮಾನ್‌ನ ಮೊಂಟೇಶ್ವರ ಬ್ಲಾಕ್‌ನ ಕುಸುಮ್‌ಗ್ರಾಮ್‌ನಲ್ಲಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು