News Karnataka Kannada
Monday, April 22 2024
Cricket
ಪಶ್ಚಿಮ ಬಂಗಾಳ

ಹಿಂದಿನಿಂದ ಯಾರೋ ನೂಕಿದ್ದಾರೆ; ದೀದಿ ಗಾಯದ ತನಿಖೆಗೆ ಬಿಜೆಪಿ ಆಗ್ರಹ

ಮುಖ್ಯಮಮತ್ರಿ ಮಮತಾ ಬ್ಯಾನರ್ಜಿ ಹಣೆಗೆ ಗಾಯವಾಗಿದ್ದು, ಅವರನ್ನು ಯಾರೋ ಹಿಂದಿನಿಂದ ನೂಕಿದಂತಾಗಿ ಬಿದ್ದಿದ್ದಾರೆ ಎಂದಿರುವ ಬಿಜೆಪಿ ತನಿಖೆಗೆ ಆಗ್ರಹಿಸಿದೆ.
Photo Credit : News Kannada

ಪಶ್ಚಿಮ ಬಂಗಾಳ: ಮುಖ್ಯಮಮತ್ರಿ ಮಮತಾ ಬ್ಯಾನರ್ಜಿ ಹಣೆಗೆ ಗಾಯವಾಗಿದ್ದು, ಅವರನ್ನು ಯಾರೋ ಹಿಂದಿನಿಂದ ನೂಕಿದಂತಾಗಿ ಬಿದ್ದಿದ್ದಾರೆ ಎಂದಿರುವ ಬಿಜೆಪಿ ತನಿಖೆಗೆ ಆಗ್ರಹಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್‌, ಈ ವಿಷಯದಲ್ಲಿ ರಾಜಕೀಯ ಮಾಡದಂತೆ ಬಿಜೆಪಿಗೆ ಎಚ್ಚರಿಸಿದೆ.

ʼಮಮತಾ ತಮ್ಮ ಮನೆಯಲ್ಲಿ ಬಿದ್ದು ಹಣೆ ಮತ್ತು ಮೂಗಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಹಿಂದಿನಿಂದ ಯಾರೋ ತಳ್ಳಿದಂತಾಗಿ ಅವರು ಬಿದ್ದಿದ್ದಾರೆʼ ಎಂದು SSKM ಆಸ್ಪತ್ರೆಯ ನಿರ್ದೇಶಕ ಮನಿಮೋಯ್‌ ಬಂಡೋಪಾಧ್ಯಾಯ ಮಾಹಿತಿ ನೀಡಿದರು.

ಆಸ್ಪತ್ರೆಯ ನಿರ್ದೇಶಕರು ತಮ್ಮ ಹೇಳಿಕೆಯನ್ನು ಇದ್ದಕ್ಕಿದ್ದಂತೆ ಬದಲಿಸಿದ್ದು ಅನುಮಾನಗಳಿಗೆ ಎಡೆ ಮಾಡಿದೆ. ಇದನ್ನು ಗಂಭಿರವಾಗಿ ಪರಿಗಣಿಸಿ ಸೂಕ್ತ ತನಿಖೆಯ ಮೂಲಕ ಸತ್ಯವನ್ನು ಬಯಲು ಮಾಡಬೇಕೆಂದು ಬಿಜೆಪಿ ನಾಯಕ ದಿಲೀಪ್‌ ಘೋಷ್‌ ಆಗ್ರಹಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ TMC ನಾಯಕ ಶಶಿ ಪಂಜಾ, ಆರೋಗ್ಯದಲ್ಲಿ ಏರುಪೇರಾದಾಗ ಇಂತಹ ಅನುಭವಗಳಾಗುವುದು ಸಹಜ. ಈ ವಿಷಯವನ್ನು ರಾಜಕೀಯಗೊಳಿಸಬಾರದು ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು