15 ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸಿದರೆ, ಇ-ರಿಕ್ಷಾ ಚಾಲಕನ ಉಚಿತ ರೈಡ್‌

ಕೋಲ್ಕತ್ತಾ : ಫೇಸ್‌ಬುಕ್ ಬಳಕೆದಾರ ಸಂಕಲನ್ ಸರ್ಕಾರ್ ಎಂಬುವವರು ಪಶ್ಚಿಮ ಬಂಗಾಳದ ಲಿಲುವಾದ (ಹೌರಾ ಜಿಲ್ಲೆ) ಇ-ರಿಕ್ಷಾ ಚಾಲಕರ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇ-ರಿಕ್ಷಾ ಚಾಲಕನ ವಿಶಿಷ್ಟವಾದ ಉಚಿತ ರೈಡ್‌ ಬಗ್ಗೆ ತನ್ನ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಆಟೋ ಹತ್ತಿದ್ದ ಫೇಸ್ಬುಕ್ ಬಳಕೆದಾರ ಸಂಕಲನ್ ಹಾಗೂ ಆತನ ಪತ್ನಿಗೆ, 15 ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸಿದರೆ ಬಾಡಿಗೆ ಹಣ ತೆಗೆದುಕೊಳ್ಳುವುದಿಲ್ಲ ಎಂದು ಚಾಲಕ ಸುರಂಜನ್ ಕರ್ಮಾಕರ್ ಹೇಳಿದ್ದಾರೆ. ಪ್ರಯಾಣದ ದರ ಕೊಡುವುದಾಗಿ ಹೇಳಿದ ಸಂಕಲನ್ ಗೆ ಚಾಲಕ ಯಾವ ರೀತಿ ಪ್ರಶ್ನೆ ಕೇಳುತ್ತಾನೆ ಎಂಬ ಬಗ್ಗೆ ಕುತೂಹಲವಿತ್ತು. ಹೀಗಾಗಿ ಬಹಳ ಉತ್ಸುಕರಾಗಿದ್ದರಂತೆ.

ಮೊದಲ ಪ್ರಶ್ನೆ ಅತ್ಯಂತ ಸರಳವಾಗಿತ್ತು. ಅದೇನೆಂದರೆ, ಜನ ಗಣ ಮನ ಅಧಿ ನಾಯಕ ಬರೆದವರು ಯಾರು? ಎಂಬುದಾಗಿತ್ತು. ಇದನ್ನು ಕೇಳಿದ ಸಂಕಲನ್ ಗೆ ಬಹಳ ಅಚ್ಚರಿಯಾಗಿದೆ. ಆದರೆ 2ನೇ ಪ್ರಶ್ನೆ ಕೇಳಿದಾಗ ಇದು ನಿಜವಾದ ಸಾಮಾನ್ಯ ಜ್ಞಾನ ರಸಪ್ರಶ್ನೆ ಎಂಬುದು ಅರಿವಿಗೆ ಬಂದಿದೆ.

ನಂತರ ಕೇಳಿದ ಪ್ರಶ್ನೆ, ಪಶ್ಚಿಮ ಬಂಗಾಳದ ಮೊದಲ ಸಿಎಂ ಯಾರು ಎಂಬುದಾಗಿತ್ತು. ಆದರೆ, ಈ ಪ್ರಶ್ನೆಗೆ ಸರಿ ಉತ್ತರ ನೀಡಲಾಗದೆ ಸಂಕಲನ್ ತಪ್ಪುತ್ತರ ನೀಡಿದ್ದಾರೆ. ದಾರಿಯುದ್ದಕ್ಕೂ ಸ್ವಲ್ಪ ಸಮಯದವರೆಗೆ ರಸಪ್ರಶ್ನೆ ಇವರಿಬ್ಬರ ನಡುವೆ ನಡೆದಿದೆ.

ಬಳಿಕ ವಿಕ್ರಮ್-ಬೇತಾಳ್ ವಿಷಯದ ಬಗ್ಗೆ ಇಬ್ಬರೂ ಚರ್ಚಿಸಿದ್ದಾರೆ. ಅಷ್ಟೇ ಅಲ್ಲದೆ ನಟಿ ಶ್ರೀದೇವಿಯವರ ಜನ್ಮದಿನಾಂಕದಿಂದ ಹಿಡಿದು ವಿಶ್ವದ ಮೊದಲ ಟೆಸ್ಟ್ ಟ್ಯೂಬ್ ಬೇಬಿವರೆಗೆ ಚಾಲಕ ಹಾಗೂ ಪ್ರಯಾಣಿಕ ಇಬ್ಬರೂ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಹಾಗೆಯೇ ಫೇಸ್ಬುಕ್ ಬಳಕೆದಾರ ಒಂದೆರಡು ಪ್ರಶ್ನೆಗಳನ್ನು ಆಟೋ ಚಾಲಕನಿಗೂ ಕೇಳಿದ್ದಾರೆ. ಇದಕ್ಕೆ ಚಾಲಕ ಸರಿಯಾದ ಉತ್ತರ ನೀಡಿರುವುದು ಇವರಿಗೆ ಅಚ್ಚರಿ ತಂದಿದೆ.

ರಿಕ್ಷಾ ಚಾಲಕನಿಗೆ ಪುಸ್ತಕ ಅಂದ್ರೆ ಬಹಳ ಪ್ರೀತಿಯಂತೆ. ಆರ್ಥಿಕ ಅಡಚಣೆಯಿಂದ 6ನೇ ತರಗತಿಯವರೆಗೂ ಓದಿದ್ದು, ಮತ್ತೆ ಮುಂದುವರೆಸಲಾಗಲಿಲ್ಲ ಎಂದು ಸಂಕಲನ್ ಜೊತೆ ಸುರಂಜನ್ ಹೇಳಿಕೊಂಡಿದ್ದಾರೆ. ಆದರೂ ಕೂಡ ಪ್ರತಿದಿನ ಮಧ್ಯರಾತ್ರಿ 2ಗಂಟೆ ವರೆಗೆ ಓದುವ ಅಭ್ಯಾಸ ಚಾಲಕ ಸುರಂಜನ್ ಅವರಿಗೆ ಇದೆಯಂತೆ.

ಅಷ್ಟೇ ಅಲ್ಲ, ಸುರಂಜನ್ ಲಿಲುವಾ ಬುಕ್ ಫೇರ್ ಫೌಂಡೇಶನ್‌ನ ಸದಸ್ಯ ಕೂಡ ಹೌದು. ಅಲ್ಲದೆ ತಾನು ಹಿಂದೂವಾಗಿ ಹುಟ್ಟಿದ್ದರೂ, ಕೆಲವೊಮ್ಮೆ ಮುಸ್ಲಿಂ ಟೋಪಿ ಧರಿಸುವುದಾಗಿ ಹೇಳಿದ್ದಾರೆ.

Gayathri SG

Recent Posts

ಮಾಜಿ ಸಂಸದ ಎಲ್​ ಆರ್ ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ದಾಳಿ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ ಸಂಬಂಧಿಸಿದಂತೆ ಎಚ್‌ ಡಿ ದೇವೆಗೌಡ ಅವರ ವಿರುದ್ದ ಆಡಿಯೋ ಒಂದರಲ್ಲಿ ಅವಹೇಳನವಾಗಿ ನಿಂಧಿಸಿದ ಮಾಜಿ…

11 mins ago

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತ್ಯು; ಪ್ರಧಾನಿ ಮೋದಿ ಸಂತಾಪ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಬೆಂಗಾವಲು ಪಡೆ ಹೆಲಿಕಾಪ್ಟರ್‌ಗಳ ಪೈಕಿ ಒಂದು ಪತನಗೊಂಡಿದ್ದು, ಅಪಘಾತದಲ್ಲಿ ಇರಾನ್‌ ಅಧ್ಯಕ್ಷ…

20 mins ago

‘ರೇವ್ ಪಾರ್ಟಿ’ ಮೇಲೆ ಸಿಸಿಬಿ ದಾಳಿ; ನಟಿ ಹೇಮಾ ಸೇರಿ ಐವರು ಅರೆಸ್ಟ್

ಆರ್ ಫಾರ್ಮ್ ಹೌಸ್ ನಲ್ಲಿ ರೇವ್​ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಪಾರ್ಟಿ ಆಯೋಜಕ ವಾಸು,…

35 mins ago

ಆನೆಯ ಕೂಡುದಂತಕ್ಕೆ ಕತ್ತರಿ ಪ್ರಯೋಗ ಸಕ್ಸಸ್

ಬಂಡೀಪುರದಲ್ಲಿ ಸೆರೆಹಿಡಿಯಲಾಗಿದ್ದ ಆನೆಯ ಕೂಡುದಂತಕ್ಕೆ ಕತ್ತರಿ ಪ್ರಯೋಗ ಮಾಡಿರುವುದು ಸಕ್ಷಸ್ ಆಗಿದೆ. ಕೂಡು ದಂತದಿಂದ ಆಹಾರ ಸೇವಿಸಲಾಗದೆ ಪರದಾಡುತ್ತಿದ್ದ ಆನೆ…

36 mins ago

ಮತಗಟ್ಟೆ ದ್ವಂಸ ಪ್ರಕರಣ : ಬಿಡುಗಡೆಗೊಂಡ ಗ್ರಾಮಸ್ಥರಿಗೆ ಎನ್. ಮಹೇಶ್ ಸಾಂತ್ವಾನ

ಏಪ್ರಿಲ್ 26 ರಂದು ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ…

53 mins ago

ಚುನಾವಣಾ ಕರ್ತವ್ಯದಲ್ಲಿದ್ದ ಬಿಎಸ್‌ಎಫ್ ಯೋಧನಿಂದ ಲೈಂಗಿಕ ಕಿರುಕುಳ

ಪಶ್ಚಿಮ ಬಂಗಾಳದ ಉಲುಬೇರಿಯಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಬಿಎಸ್‌ಎಫ್ ಯೋಧನನ್ನು ಲೈಂಗಿಕ ಕಿರುಕುಳ ಆರೋಪ ಬಂದ ಹಿನ್ನೆಲೆಯಲ್ಲಿ…

1 hour ago