ಪಶ್ಚಿಮಬಂಗಾಳದಲ್ಲಿ 7 ವರ್ಷದ ಮಗುವಿನಲ್ಲಿ ಒಮಿಕ್ರಾನ್ ಪತ್ತೆ

ನವದೆಹಲಿ:ಕೋವಿಡ್ ನ ಹೊಸ ರೂಪಾಂತರ ತಳಿ ಒಮಿಕ್ರಾನ್ ಮೊದಲ ಪ್ರಕರಣ ಪಶ್ಚಿಮಬಂಗಾಳದಲ್ಲಿ ಬುಧವಾರ(ಡಿಸೆಂಬರ್ 15) ಪತ್ತೆಯಾಗಿದೆ. ತೆಲಂಗಾಣ ಮೂಲದ 7 ವರ್ಷದ ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.ಆದರೆ ಮಗುವಿನ ಪೋಷಕರನ್ನು ಪರೀಕ್ಷೆಗೊಳಪಡಿಸಿದ್ದು, ನೆಗೆಟಿವ್ ವರದಿ ಬಂದಿರುವುದಾಗಿ ಹೇಳಿದೆ.

ದಂಪತಿ ಮತ್ತು ಮಗು ವಿದೇಶದಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಮಗುವಿನಲ್ಲಿ ಸೋಂಕು ಪತ್ತೆಯಾಗಿದ್ದು, ಬಳಿಕ ಅವರು ಪಶ್ಚಿಮಬಂಗಾಳಕ್ಕೆ ತೆರಳಿರುವುದಾಗಿ ವರದಿ ವಿವರಿಸಿದೆ.

ಕೋವಿಡ್ ಸೋಂಕು ಇನ್ನೂ ಮುಂದುವರಿದಿದೆ. ಏತನ್ಮಧ್ಯೆ ಜಗತ್ತಿನ 41 ದೇಶಗಳಲ್ಲಿ ಜನಸಂಖ್ಯೆಯ ಶೇ.10ರಷ್ಟು ಲಸಿಕೆಯನ್ನು ನೀಡಲು ಸಾಧ್ಯವಾಗಿಲ್ಲ ಹಾಗೂ 98 ದೇಶಗಳಲ್ಲಿ ಶೇ.40ರ ಗುರಿಯನ್ನೂ ತಲುಪಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

Swathi MG

Recent Posts

ನಾನು ಡಾರ್ಕ್‌ ಸ್ಕಿನ್‌ ಭಾರತೀಯ ಎಂದ ಅಣ್ಣಾಮಲೈ

ಸ್ಯಾಮ್ ಪಿತ್ರೋಡಾ ಅವರ ಜನಾಂಗೀಯ ಟೀಕೆಗೆ ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ, ನಾನು ಡಾರ್ಕ್‌ ಸ್ಕಿನ್‌ ಭಾರತೀಯ ಎಂದು…

24 mins ago

ಮಲೆನಾಡಿಗೆ ತಂಪೆರೆದ ವರುಣ-ಆಲಿಕಲ್ಲು ಮಳೆ

ಜಿಲ್ಲೆಯ ಬಹುತೇಕ ಕಡೆ ಇಂದು ಗುಡುಗು, ಸಿಡಿಲಿನೊಂದಿಗೆ ಆಲಿಕಲ್ಲು ಮಳೆ ಸುರಿದಿದೆ. ಹಲವು ದಿನಗಳಿಂದ ವಿಪರೀತ ತಾಪಮಾನದಿಂದ ಬಸವಳಿದಿದ್ದ ಜನರಿಗೆ…

27 mins ago

ರೈತರಿಗೆ ಉಪಟಳ ನೀಡುತ್ತಿದ್ದ ಪುಂಡಾನೆ ಸೆರೆ

ರೈತರಿಗೆ ಆಗಾಗ್ಗೆ ಉಪಟಳ ನೀಡುತ್ತಾ ತಲೆನೋವಾಗಿದ್ದ ಪುಂಡಾನೆಯನ್ನು ಸುಮಾರು  ಇಪ್ಪತೈದು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ  ಅರಣ್ಯಾಧಿಕಾರಿಗಳು ಗೋಪಾಲಸ್ವಾಮಿ ಬೆಟ್ಟದ…

43 mins ago

ಐಐಟಿ ನೂತನ ನಿರ್ದೇಶಕರಾಗಿ ಪ್ರೊ. ಎಸ್.ಆರ್.ಮಹಾದೇವ ಪ್ರಸನ್ನ ನೇಮಕ

ಧಾರವಾಡದ ಐಐಟಿ ನೂತನ ನಿರ್ದೇಶಕರಾಗಿ ಪ್ರೊ. ಎಸ್.ಆರ್.ಮಹಾದೇವ ಪ್ರಸನ್ನ ನೇಮಕಗೊಂಡಿದ್ದಾರೆ. 2023 ರಲ್ಲಿ ಭಾರತದ ರಾಷ್ಟ್ರಪತಿ ದೌಪದಿ ಮುರ್ಮು ಅವರಿಂದ…

45 mins ago

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79)…

57 mins ago

ಮದ್ದೂರು ಅರಣ್ಯದಲ್ಲಿ ಬೆಂಕಿ ಅವಘಡ : ಆರೋಪಿ ಬಂಧನ

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಮದ್ದೂರು ವಲಯದಲ್ಲಿ ಕಳೆದ ಏಪ್ರಿಲ್ 24 ರಂದು ಬೆಂಕಿ ಅವಘಡ ಸಂಭವಿಸಿ ಅಪಾರ ಪ್ರಮಾಣದ…

1 hour ago