News Karnataka Kannada
Wednesday, April 24 2024
Cricket
ಉತ್ತರಖಂಡ

ಮುಂದಿನ10-15 ವರ್ಷಗಳಲ್ಲಿ ಅಖಂಡ ಭಾರತ ನನಸು: ಮೋಹನ್‌ ಭಾಗವತ್‌

Mohan Bhagavath
Photo Credit :

ಹರಿದ್ವಾರ: ಮಹರ್ಷಿ ಅರಬಿಂದೋ ಸ್ವಾಮಿ ವಿವೇಕಾನಂದರು, ಅವರು ಕಂಡ ಅಖಂಡ ಭಾರತದ ಕನಸು ಮುಂದಿನ 10-15 ವರ್ಷಗಳಲ್ಲೇ ನನಸಾಗಲಿದೆ ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಎಲ್ಲವನ್ನೂ ಒಂದೇ ಸಲ ಸಾಧಿಸಲಾಗದು. ನಮ್ಮ ಬಳಿ ಅಧಿಕಾರವಿಲ್ಲ, ಅದು ಜನತೆಯ ಬಳಿ ಇದೆ. ಅವರಿಗೆ ಅದರ ಮೇಲೆ ಹಿಡಿತವಿದೆ. ಅವರು ಯಾವಾಗ ಸಿದ್ಧರಾಗುತ್ತಾರೋ, ಆಗ ದೇಶದ ಪ್ರತಿ ಪ್ರಜೆಗಳ ಸ್ವಭಾವವೂ ಖಂಡಿತಾ ಬದಲಾಗುತ್ತದೆ.

ಅಖಿಲ ಭಾರತ ಅಖಾಡ ಪರಿಷತ್‌ ಅಧ್ಯಕ್ಷ ಸ್ವಾಮಿ ರವೀಂದ್ರ ಪುರಿ ಅವರು ಹರಿದ್ವಾರದಲ್ಲಿ ಸಾಧು- ಸಂತರನ್ನು ಉದ್ದೇಶಿಸಿ ಮಾತನಾಡುವಾಗ, “ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಮುಂದಿನ 20-25 ವರ್ಷಗಳಲ್ಲಿ ಅಖಂಡ ಭಾರತದ ಕನಸು ನನಸಾಗಲಿದೆ’ ಎಂದಿದ್ದರು.

ಇದಕ್ಕೆ ಭಾಗವತ್‌ ಪ್ರತಿಕ್ರಿಯಿಸುತ್ತಾ, “20-25 ವರ್ಷಗಳು ಎನ್ನುವುದು ನನ್ನ ಪ್ರಕಾರ ಬಲು ಸುದೀರ್ಘ‌. ನಾವು ನಮ್ಮ ಕಾರ್ಯದ ವೇಗ ಹೆಚ್ಚಿಸಿದ್ದೇ ಆದಲ್ಲಿ, ಅಖಂಡ ಭಾರತವಾಗಲು 10- 15 ವರ್ಷಗಳು ಸಾಕು.

ಈ ಅವಧಿಯೊಳಗೆ ನಾವು ಸ್ವಾಮಿ ವಿವೇಕಾನಂದರ, ಮಹರ್ಷಿ ಅರಬಿಂದೋರ ಕನಸನ್ನು ತಲುಪಲಿದ್ದೇವೆ’ ಎಂದರು.

ಸ್ವಾಮಿ ವಿವೇಕಾನಂದರು ಧರ್ಮವೇ ಭಾರತದ ಜೀವಾಳ ಎಂದಿದ್ದರು. ಧರ್ಮದ ಅಭಿವೃದ್ಧಿ ಇಲ್ಲದೆ, ಭಾರತದ ಅಭಿವೃದ್ಧಿ ಅಸಾಧ್ಯ. ಹಿಂದೂರಾಷ್ಟ್ರದ ಕನಸು ಕೈಗೂಡಿದಾಗ ಮಾತ್ರವೇ ಭಾರತ ಪ್ರಗತಿ ಸಾಧ್ಯ’ ಎಂದು ಪ್ರತಿಪಾದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು