ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯ ಮೆಜಾ ಪ್ರದೇಶದ ಶಾಲೆಯೊಂದರಲ್ಲಿ ಸುಮಾರು 27 ವಿದ್ಯಾರ್ಥಿಗಳು ಶಾಲೆಯ ಟ್ಯಾಂಕ್ ನಿಂದ ನೀರು ಕುಡಿದ ಬಳಿಕ ಅಸ್ವಸ್ಥರಾಗಿದ್ದಾರೆ.
ವಿದ್ಯಾರ್ಥಿಗಳನ್ನು ಮೇಜಾ ಸಿಎಚ್ಸಿಗೆ ದಾಖಲಿಸಲಾಗಿದ್ದು, ಅಲ್ಲಿಂದ ನಾಲ್ವರನ್ನು ಎಸ್ಆರ್ಎನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಕಲುಷಿತ ನೀರು ಸೇವನೆಯಿಂದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಮೇಜಾದ ಗದುರಾಹಿ ಪಹಾಡಿಯಲ್ಲಿರುವ ಗುಲಾಬ್ ಶಂಕರ್ ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ 6, 7 ಮತ್ತು 8 ನೇ ತರಗತಿಯ ಕೆಲವು ವಿದ್ಯಾರ್ಥಿಗಳು ಶಾಲೆಯಲ್ಲಿ ನೀರು ಕುಡಿದಿದ್ದಾರೆ. ಬಳಿಕ ಹೊಟ್ಟೆ ನೋವಿನಿಂದ ಬಳಲಿ ಪ್ರಜ್ಞಾಹೀನರಾದರು. ಶಾಲೆಯ ಅಧಿಕಾರಿಗಳು ತಕ್ಷಣ ಆಂಬ್ಯುಲೆನ್ಸ್ ಗೆ ಕರೆ ಮಾಡಿ 27 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ.