News Karnataka Kannada
Saturday, April 13 2024
Cricket
ಉತ್ತರ ಪ್ರದೇಶ

ಉತ್ತರ ಪ್ರದೇಶ ಆಸ್ಪತ್ರೆಯಲ್ಲಿದೆ ಅನಾಥ ಮಕ್ಕಳ ತೊಟ್ಟಿಲು

Uttar Pradesh hospital has cradle of orphaned children
Photo Credit : Pixabay

ಲಕ್ನೋ: ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ಕ್ವೀನ್ ಮೇರಿ ಆಸ್ಪತ್ರೆಯಲ್ಲಿ ‘ಪಲ್ನಾ’ ಎಂಬ ತೊಟ್ಟಿಲನ್ನು ಸ್ಥಾಪಿಸಲಾಗಿದ್ದು, ಪರಿತ್ಯಕ್ತ ಶಿಶುಗಳಿಗೆ ಆರೈಕೆ ದೊರೆಯಲಿದೆ. ಅಂಗವಿಕಲತೆ, ಇತರ ಸಾಮಾಜಿಕ ಕಾರಣಗಳಿಗಾಗಿ ತಂದೆ ತಾಯಿಗಳಿಗೆ ಮಗುವನ್ನು ಸಾಕಲು ಮನಸ್ಸಿಲ್ಲದಿದ್ದರೆ ಈ ತೊಟ್ಟಿಲಿನಲ್ಲಿ ಮಗುವನ್ನು ಇಟ್ಟು ತೆರಳಬಹುದು.

ಆಸ್ಪತ್ರೆಯ ಮುಖ್ಯ ಗೇಟ್ ಬಳಿ ತೊಟ್ಟಿಲು ಅಳವಡಿಸಲಾಗಿದೆ. ಪಾಲಕರು ತಮ್ಮ ಗುರುತನ್ನು ಬಹಿರಂಗಪಡಿಸದೆ ತಮ್ಮ ಮಗುವನ್ನು ತೊಟ್ಟಿಲಲ್ಲಿ ಬಿಡಬಹುದು.

ಉತ್ತರ ಪ್ರದೇಶ ಆರೋಗ್ಯ ಖಾತೆ ಸಚಿವ ಬ್ರಜೇಶ್ ಪಾಠಕ್, ತೊಟ್ಟಿಲಿನಲ್ಲಿ ಮಗು ಇರಿಸಿರುವ ಬಗ್ಗೆ ಎರಡು ನಿಮಿಷಗಳಲ್ಲಿ ಸಿಬ್ಬಂದಿಗೆ ಎಚ್ಚರಿಕೆ ನೀಡುವ ಸಂವೇದಕ ವ್ಯವಸ್ಥೆ ಕೂಡ ಇದೆ ಎಂದು ತಿಳಿಸಿದ್ದಾರೆ. ನಂತರ ಮಗುವನ್ನು ರಾಜ್ಯವು ದತ್ತು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಸಿಬ್ಬಂದಿಯು ಮಗುವಿನ ಒಟ್ಟಾರೆ ಯೋಗ ಕ್ಷೇಮವನ್ನು ಪರೀಕ್ಷಿಸಲು ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುತ್ತಾರೆ. ನಂತರ ಮಗುವನ್ನು ದತ್ತು ಸ್ವೀಕಾರದ ವಿಧಿವಿಧಾನಗಳನ್ನು ಪೂರ್ಣಗೊಳಿಸಿ ಚೈಲ್ಡ್‌ಲೈನ್‌ ಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ. ಜನರಿಗೆ ಮಕ್ಕಳನ್ನು ನೋಡಿಕೊಳ್ಳಲು ಸಮಸ್ಯೆ ಎದುರಾದರೆ ಮಕ್ಕಳನ್ನು ತೊಟ್ಟಿಲಲ್ಲಿ ಬಿಡುವಂತೆ ಪಾಠಕ್ ಪೋಷಕರಿಗೆ ಮನವಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು