ಬಂದಾ: ಯಮುನಾ ನದಿಯಲ್ಲಿ ದೋಣಿ ಮುಳುಗಿ ನಾಲ್ವರು ನೀರು ಪಾಲಾಗಿರುವ ದಾರುಣ ಘಟನೆ ಗುರುವಾರ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಮಾರ್ಕಾ ಪ್ರದೇಶದಲ್ಲಿ ನಡೆದಿದೆ.
ಬೋಟ್ ಮಾರ್ಕಾದಿಂದ ಫತೇಪುರ್ ಜಿಲ್ಲೆಯ ಜರೌಲಿ ಘಾಟ್ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೋಣಿಯಲ್ಲಿ 30 ರಿಂದ 35 ಮಂದಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿನಂದನ್ ಅವರು ತಿಳಿಸಿದ್ದಾರೆ.
ಏಳರಿಂದ ಎಂಟು ಮಂದಿ ಸುರಕ್ಷಿತವಾಗಿ ಈಜಿ ದಡ ಸೇರಿದ್ದು, ಇನ್ನೂ ಹಲವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ಇದೆ ಎಂದು ಹೆಚ್ಚುವರಿ ಎಸ್ಪಿ ಲಕ್ಷ್ಮಿ ನಿವಾಸ್ ಮಿಶ್ರಾ ಹೇಳಿದ್ದಾರೆ. ಇದುವರೆಗೆ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜ್ಮಹಲ್ ಸಮೀಪದ ಮಸೀದಿವೊಂದರಲ್ಲಿ ಘೋರ ಕೃತ್ಯ ನಡೆದಿದ್ದು ಅರೆನಗ್ನ ಸ್ಥಿತಿಯಲ್ಲಿ 22 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಈ ಘಟನೆ…
ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಕೇಸ್ ಸಂಬಂಧಿಸಿದಂತೆ ಎಚ್ ಡಿ ದೇವೆಗೌಡ ಅವರ ವಿರುದ್ದ ಆಡಿಯೋ ಒಂದರಲ್ಲಿ ಅವಹೇಳನವಾಗಿ ನಿಂಧಿಸಿದ ಮಾಜಿ…
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಬೆಂಗಾವಲು ಪಡೆ ಹೆಲಿಕಾಪ್ಟರ್ಗಳ ಪೈಕಿ ಒಂದು ಪತನಗೊಂಡಿದ್ದು, ಅಪಘಾತದಲ್ಲಿ ಇರಾನ್ ಅಧ್ಯಕ್ಷ…
ಆರ್ ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಪಾರ್ಟಿ ಆಯೋಜಕ ವಾಸು,…
ಬಂಡೀಪುರದಲ್ಲಿ ಸೆರೆಹಿಡಿಯಲಾಗಿದ್ದ ಆನೆಯ ಕೂಡುದಂತಕ್ಕೆ ಕತ್ತರಿ ಪ್ರಯೋಗ ಮಾಡಿರುವುದು ಸಕ್ಷಸ್ ಆಗಿದೆ. ಕೂಡು ದಂತದಿಂದ ಆಹಾರ ಸೇವಿಸಲಾಗದೆ ಪರದಾಡುತ್ತಿದ್ದ ಆನೆ…
ಏಪ್ರಿಲ್ 26 ರಂದು ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ…