ಗೇಮಿಂಗ್‌ ಆ್ಯಪ್ ಮೂಲಕ ನಡೆಯುತ್ತಿದ್ದ ಮತಾಂತರ ದಂಧೆ ಬೇಧಿಸಿದ ಪೊಲೀಸರು

ಲಕ್ನೋ: ಕಳೆದ ಕೆಲವು ವರ್ಷಗಳಿಂದ ಗೇಮಿಂಗ್ ಆ್ಯಪ್ ಮೂಲಕ ನಡೆಸುತ್ತಿದ್ದ ಮತಾಂತರ ದಂಧೆಯನ್ನು ಉತ್ತರ ಪ್ರದೇಶ ಪೊಲೀಸರು ಭೇದಿಸಿದ್ದಾರೆ. ಗಾಜಿಯಾಬಾದ್‌ನ ಸಂಜಯ್ ನಗರದ ಮಸೀದಿ ಸಮಿತಿಯ ಸದಸ್ಯನನ್ನು ಈ ಸಂಬಂಧ ಬಂಧಿಸಲಾಗಿದೆ, ಮಸೀದಿಯ ಸಮಿತಿ ಸದಸ್ಯ ಬಲ್ಲಿಯಾ ಮೂಲದ ಅಬ್ದುಲ್ ರೆಹಮಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ರೆಹಮಾನ್ ಅವರು ಕೆಲವು ತಿಂಗಳ ಹಿಂದೆ ಸಮಿತಿಯನ್ನು ತೊರೆದಿದ್ದಾರೆ ಎಂದು ಮಸೀದಿ ಸಮಿತಿಯು ಪೊಲೀಸರಿಗೆ ತಿಳಿಸಿದೆ, ಆದರೆ ಈ ಬಗ್ಗೆ ಪುರಾವೆ ದೊರೆತಿಲ್ಲ.

ಫರಿದಾಬಾದ್‌ನ ಅಪ್ರಾಪ್ತ ಬಾಲಕನ ತಂದೆ ತನ್ನ ಮಗ ಗೇಮಿಂಗ್ ಆ್ಯಪ್ ಮೂಲಕ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದಾನೆ ಮತ್ತು ಸಂಜಯ್ ನಗರದ ಮಸೀದಿಗೆ ಭೇಟಿ ನೀಡುವಂತೆ ಆತ ಪ್ರಭಾವ ಬೀರಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ ನಂತರ ತನಿಖೆ ಪ್ರಾರಂಭವಾಯಿತು. ಮಗ ಜಿಮ್‌ಗೆ ಹೋಗುವುದಾಗಿ ಸುಳ್ಳು ಹೇಳಿ ಮಸೀದಿಗೆ ಭೇಟಿ ನೀಡುತ್ತಿರುವುದನ್ನು ಅವರು ಮನಗಂಡಿದ್ದರು.
ರೆಹಮಾನ್ ನಾಲ್ಕು ಯುವಕರನ್ನು ಮತಾಂತರಿಸಲು ಪ್ರಯತ್ನಿಸಿದ್ದಾರೆ ಎಂದು ಸಾಬೀತುಪಡಿಸಲು ತಮ್ಮ ಬಳಿ ಸಾಕ್ಷ್ಯಗಳಿವೆ ಎಂದು ಡಿಸಿಪಿನಿಪುರ್ಣ್ ಅಗರ್ವಾಲ್ ತಿಳಿಸಿದ್ದಾರೆ.

2021 ರಿಂದ ನಾಲ್ವರು ಯುವಕರೊಂದಿಗೆ ಮಾತನಾಡುತ್ತಿದ್ದರು ಮತ್ತು ಅವರಿಗೆ ಧರ್ಮದ ಬಗ್ಗೆ ವೀಡಿಯೊಗಳನ್ನು ಕಳುಹಿಸುತ್ತಿದ್ದರು ಎಂದು ನಾವು ಅರಿತಿದ್ದೇವೆ ಎಂದು ಅಧಿಕಾರಿ ಹೇಳಿದರು. ಬಾಲಕರು ಗೇಮಿಂಗ್ ಅಪ್ಲಿಕೇಶನ್ ಮೂಲಕ ರೆಹಮಾನ್‌ನೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ. ಅಲ್ಲದೆ ರೆಹಮಾನ್ ಅವರೊಂದಿಗೆ ತಮ್ಮ ಫೋನ್ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಬಾಲಕನ ವರ್ತನೆಯಲ್ಲಿ ಬದಲಾವಣೆ ಕಂಡ ಅವನ ತಾಯಿ ಅವನಿಗೆ ಸಲಹೆ ನೀಡಲು ಪ್ರಯತ್ನಿಸಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ” ಎಂದು ಎಸಿಪಿ ತಿಳಿಸಿದಾರೆ.

Umesha HS

Recent Posts

ಕನ್ನಡ ಸಾಹಿತ್ಯ ಪರಿಷತ್ ನಿಂದ ಶ್ರೀನಿವಾಸ್ ಪ್ರಸಾದ್ ರವರ ಶ್ರದ್ಧಾಂಜಲಿ ಸಭೆ

ಶ್ರೀನಿವಾಸ್ ಪ್ರಸಾದ್ ಎಂದರೆ ಸಾಮಾಜಿಕ ನ್ಯಾಯದ ಹರಿಕಾರ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಕನ್ನಡ ಸಾಹಿತ್ಯ ಪರಿಷತ್…

7 mins ago

2 ವರ್ಷದಲ್ಲಿ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗಿದ ನಾಯಿ !

ಕೆಲವು ರೋಗಗಳು ಮನುಷ್ಯರಲ್ಲಿ ಮಾತ್ರವಲ್ಲದೆ ವಿವಿಧ ರೀತಿಯ ಪ್ರಾಣಿಗಳಲ್ಲಿಯೂ ಕಂಡುಬರುತ್ತವೆ. ಪ್ರಸ್ತುತ ವಿಚಾರ ನೋಡುವುದಾದರೇ ಹೌದು ಎರಡು ವರ್ಷದ ಹಿಂದೆ…

18 mins ago

ಸಂಚಾರಕ್ಕೆ ಅಡಚಣೆ; ಕಾಂಕ್ರೀಟ್ ಮಿಶ್ರಣ ಸಾಗಾಟದ ಟ್ಯಾಂಕರ್ ಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಮಣಿಪಾಲ- ಅಲೆವೂರು ರಸ್ತೆಯು ಕಾಂಕ್ರೀಟ್ ಧೂಳಿನಿಂದ ಮುಳುಗಿಹೋಗಿದ್ದು, ಜನರು ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣ ಆಗಿದೆ.

28 mins ago

ಉಡುಪಿ: ನೀತಿ ಸಂಹಿತೆ ಉಲ್ಲಂಘನೆ; 15 ಲಕ್ಷ ರೂ. ನಗದು ವಶ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿರೂರು ಗ್ರಾಮದಲ್ಲಿ…

43 mins ago

ಪ್ರಜ್ವಲ್ ಜಾಗದಲ್ಲಿ ಮುಸ್ಲಿಂ ವ್ಯಕ್ತಿ ಇದ್ದಿದ್ದರೆ ಹೋರಾಟದ ಸ್ವರೂಪವೇ ಬೇರೆ: ನಟಿ ಸ್ವರಾ ಭಾಸ್ಕರ್

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಪ್ರತಿಕ್ರಿಯಿಸಿದ್ದು, ತಪ್ಪು ಮಾಡಿರುವ ವ್ಯಕ್ತಿ ಯಾವ ಧರ್ಮದವನು…

60 mins ago

“ನರೇಂದ್ರ ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗುವುದಿಲ್ಲವೇ”

ಪ್ರಧಾನಿ ನರೇಂದ್ರ ಮೋದಿಯವರ ಸಾವಿನ ಕುರಿತಾಗಿ ಮಾತನಾಡಿ ಕಾಂಗ್ರೆಸ್​ ಶಾಸಕ ರಾಜು ಕಾಗೆ ವಿವಾದ ಹುಟ್ಟು ಹಾಕಿದ್ದಾರೆ. "ನರೇಂದ್ರ ಮೋದಿ…

1 hour ago