News Karnataka Kannada
Thursday, May 02 2024
ಉತ್ತರ ಪ್ರದೇಶ

ಸಮಾಜವಾದಿ ಪಕ್ಷದ  ಅಭ್ಯರ್ಥಿ ಕಾಜಲ್ ನಿಶಾದ್ ಗೆ ಹೃದಯ ಸ್ತಂಭನ

ಗೋರಖ್‌ಪುರ ಲೋಕಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ  ಅಭ್ಯರ್ಥಿ ಕಾಜಲ್ ನಿಶಾದ್  ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಲಕ್ನೋದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Photo Credit : NewsKarnataka

ಲಕ್ನೋ: ಗೋರಖ್‌ಪುರ ಲೋಕಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ  ಅಭ್ಯರ್ಥಿ ಕಾಜಲ್ ನಿಶಾದ್  ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಲಕ್ನೋದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಜಲ್ ಅವರು ರಕ್ತದೊತ್ತಡ ಮತ್ತು ಹೃದಯದ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಏಪ್ರಿಲ್ 5 ರಂದು ಆಕೆಯ ಆರೋಗ್ಯ ಹಠಾತ್ ಹದಗೆಟ್ಟ ನಂತರ ಕಾಜಲ್ ಅವರನ್ನು ಸ್ಟಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ನಿಶಾದ್‌ ಅವರಿಗೆ ಹೃದಯ ಸ್ತಂಭನವಾಗಿದ್ದು, ವೈದ್ಯರು ಅವರನ್ನು ಲಕ್ನೋಗೆ ಕಳುಹಿಸಿದ್ದಾರೆ ಎಂದು ಕಾಜಲ್ ನಿಶಾದ್ ಪತಿ ಸಂಜಯ್ ನಿಶಾದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

41 ವರ್ಷದ ಕಾಜಲ್ ನಿಶಾದ್ ಅವರು ಗೋರಖ್‌ಪುರ ಕ್ಷೇತ್ರದಿಂದ ನಟ ಮತ್ತು ಹಾಲಿ ಬಿಜೆಪಿ ಸಂಸದ ರವಿ ಕಿಶನ್ ಶುಕ್ಲಾ ವಿರುದ್ಧ ಕಣದಲ್ಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು