ಎಲ್ಲೆಲ್ಲಿ ಮಹಾದೇವನ ಆಶೀರ್ವಾದವಿದೆಯೋ ಅಲ್ಲಿ ಭೂಮಿ ಸುಭಿಕ್ಷವಾಗಿರುತ್ತದೆ: ಮೋದಿ

ವಾರಾಣಸಿ: ಇಂದು ಕಾಶಿಯ ಶಕ್ತಿ ಮತ್ತು ಸ್ವರೂಪ ಮತ್ತೆ ಸುಧಾರಿಸುತ್ತಿದೆ. ಕಾಶಿಯಲ್ಲಿ ಇದನ್ನು ಮಹಾದೇವನೇ ಮಾಡಿಸುತ್ತಿದ್ದಾನೆ. ಕಾಶಿಯು ಜ್ಞಾನದ ರಾಜಧಾನಿಯಾಗಿದೆ. ಕಾಶಿಯ ಸ್ವರೂಪ ಮತ್ತಷ್ಟು ಸುಂದರವಾಗಿದೆ, ಮಹಾದೇವನಿಗೆ ಈಗ ಖುಷಿಯಾಗಿದೆ ಎಲ್ಲೆಲ್ಲಿ ಮಹಾದೇವನ ಆಶೀರ್ವಾದವಿದೆಯೋ ಅಲ್ಲಿ ಭೂಮಿ ಸುಭಿಕ್ಷವಾಗಿರುತ್ತದೆ  ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ವಾರಾಣಸಿಯಲ್ಲಿ ಬಿಎಚ್‌ಯುನಲ್ಲಿ ನಡೆದ ‘ಸಂಸದ್ ಸಂಸ್ಕೃತ ಸ್ಪರ್ಧೆ’ಯ ವಿಜೇತರಿಗೆ ಬಹುಮಾನ ವಿತರಣೆ ಮಾಡಿದ ನಂತರ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಕೂಡ ಉಪಸ್ಥಿತರಿದ್ದರು.

ಕಾಶಿಯನ್ನು ಇನ್ನಷ್ಟು ಸುಂದರಗೊಳಿಸಲಾಗುವುದು. ಇಲ್ಲಿ ರಸ್ತೆಗಳನ್ನು, ಸೇತುವೆಗಳನ್ನು ನಿರ್ಮಿಸಲಾಗುವುದು. ಕಟ್ಟಡಗಳನ್ನು ಸಹ ನಿರ್ಮಿಸಲಾಗುವುದು. ಇವೆಲ್ಲವುಗಳಿಗಿಂತಲೂ ಮೊದಲು ನಾನು ಇಲ್ಲಿನ ಜನರನ್ನು ಸುಂದರಗೊಳಿಸಬೇಕು, ಪ್ರತಿ ಮನಸ್ಸನ್ನು ಸುಂದರಗೊಳಿಸಬೇಕು. ನಾನು ಬರೇ ಸೇವಕನಷ್ಟೇ. ಒಬ್ಬ ಸೇವಕನಾಗಿ ಈ ಎಲ್ಲ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ ಎಂದು ಮೋದಿ ಹೇಳಿದರು.

‘ನಮ: ಪಾರ್ವತಿ ಪತಯೇ ಹರ ಹರ ಮಹಾದೇವ್’ ಎಂಬ ಘೋಷಣೆಯೊಂದಿಗೆ ಮೋದಿ ಭಾಷಣ ಆರಂಭಿಸಿದರು. ಕಾಶಿ ನಮ್ಮ ನಂಬಿಕೆಯ ತೀರ್ಥಕ್ಷೇತ್ರ ಮಾತ್ರವಲ್ಲ, ಇದು ಭಾರತದ ಸನಾತನ ಪ್ರಜ್ಞೆಯ ಜಾಗೃತಿ ಕೇಂದ್ರವಾಗಿದೆ. ಭಾರತದ ಸಮೃದ್ಧಿಯ ಕಥೆಯನ್ನು ಪ್ರಪಂಚದಾದ್ಯಂತ ಹೇಳುತ್ತಿದ್ದ ಕಾಲವೊಂದಿತ್ತು. ಅದರ ಹಿಂದೆ ಭಾರತದ ಆರ್ಥಿಕ ಶಕ್ತಿ ಮಾತ್ರವಲ್ಲ, ಹಿಂದೆ ನಮ್ಮ ಸಾಂಸ್ಕೃತಿಕ ಏಳಿಗೆ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಏಳಿಗೆಯೂ ಇತ್ತು. ಕಾಶಿಯಂತಹ ನಮ್ಮ ಯಾತ್ರಾ ಸ್ಥಳಗಳು ಮತ್ತು ವಿಶ್ವನಾಥ ಧಾಮದಂತಹ ನಮ್ಮ ದೇವಾಲಯಗಳು ರಾಷ್ಟ್ರದ ಪ್ರಗತಿಗೆ ತ್ಯಾಗದ ಸ್ಥಳಗಳಾಗಿವೆ ಎಂದು ಮೋದಿ ಹೇಳಿದರು.

ಪುಸ್ತಕ ಬಿಡುಗಡೆ: ಕಾರ್ಯಕ್ರಮದಲ್ಲಿ, ಕಾಶಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಎರಡು ಪುಸ್ತಕಗಳನ್ನೂ ಬಿಡುಗಡೆ ಮಾಡಲಾಯಿತು. ಕಳೆದ 10 ವರ್ಷಗಳಲ್ಲಿ ಕಾಶಿಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಕಾಶಿಯನ್ನು ಇನ್ನಷ್ಟು ಸುಂದರಗೊಳಿಸಲಾಗುತ್ತಿದೆ. ಮಾಡಬೇಕಾದ ಕೆಲಸ ಇನ್ನೂ ಸಾಕಷ್ಟಿದೆ ಎಂದು ಮೋದಿ ಹೇಳಿದರು. ಪ್ರಾಚೀನವಾದ ಕಾಶಿಯ ಗುರುತನ್ನು ಯುವ ಪೀಳಿಗೆ ಜವಾಬ್ದಾರಿಯುತವಾಗಿ ಬಲಪಡಿಸುತ್ತಿದೆ. ಇದು ಹೃತ್ಪೂರ್ವಕ ಸಂತೃಪ್ತಿಯನ್ನು ನೀಡುತ್ತದೆ ಮತ್ತು ಹೆಮ್ಮೆಯ ಭಾವನೆಯನ್ನು ನೀಡುತ್ತದೆ. ಅಮೃತ ಕಾಲ್ನಲ್ಲಿ ಎಲ್ಲಾ ಯುವಕರು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂಬ ವಿಶ್ವಾಸವನ್ನು ನೀಡಿದೆ ಎಂದು ಪ್ರಧಾನಿ ಹೇಳಿದರು.

Ashika S

Recent Posts

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

3 hours ago

ಹುಬ್ಬಳ್ಳಿ ಕೊಲೆ ಪ್ರಕರಣ : ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.

3 hours ago

ಗತವೈಭವ ಸಾರುವ ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…

3 hours ago

ನ್ಯೂಸ್ ಕರ್ನಾಟಕ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ : ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…

3 hours ago

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ : ಶೈಲೇಂದ್ರ

ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…

3 hours ago

ಭಾರತೀಯರಿಗೆ ಗುಡ್‌ ನ್ಯೂಸ್‌ : ವೀಸಾ ಇಲ್ಲದೆ ರಷ್ಯಾಕ್ಕೆ ಹೋಗುವ ಅವಕಾಶ

ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…

4 hours ago