News Karnataka Kannada
Wednesday, May 01 2024
ಉತ್ತರ ಪ್ರದೇಶ

ಪಿಟ್​ಬುಲ್​ ದಾಳಿ: ಬಾಲಕನನ್ನು ರಕ್ಷಿಸಿದ ಬೀದಿ ನಾಯಿಗಳು

ಗಾಜಿಯಾಬಾದ್​ನಲ್ಲಿ ಪಿಟ್​ಬುಲ್​ ನಾಯಿಯೊಂದು ಬಾಲಕನ ಮೇಲೆ ದಾಳಿ ನಡೆಸಿದ ಘಟನೆ ನಡೆದಿದ್ದು,  ಆತನನ್ನು ರಕ್ಷಿಸಲು ಬೀದಿ ನಾಯಿಗಳು ಓಡಿಬಂದಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Photo Credit : NewsKarnataka

ಗಾಜಿಯಾಬಾದ್: ಗಾಜಿಯಾಬಾದ್​ನಲ್ಲಿ ಪಿಟ್​ಬುಲ್​ ನಾಯಿಯೊಂದು ಬಾಲಕನ ಮೇಲೆ ದಾಳಿ ನಡೆಸಿದ ಘಟನೆ ನಡೆದಿದ್ದು,  ಆತನನ್ನು ರಕ್ಷಿಸಲು ಬೀದಿ ನಾಯಿಗಳು ಓಡಿಬಂದಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮನೆಯ ಗೇಟ್​ ಬಳಿ ಬಾಲಕನ ಮೇಲೆ ನಾಯಿ ದಾಳಿ ನಡೆಸಿದೆ, ಬಾಲಕ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ, ಮೇಲಿನ ಮನೆಯವರು ನಾಯಿ ಮೇಲೆ ನೀರು ಸುರಿದಿದ್ದಾರೆ ಆದರೂ ಆ ನಾಯಿ ಶಾಂತವಾಗಲಿಲ್ಲ.

ಬಳಿಕ ಹೇಗೋ ಬಾಲಕ ಪಕ್ಕದ ಮನೆಯ ಗೇಟ್​ ತೆಗೆದು ಒಳಗೆ ಹೋಗಲು ಯತ್ನಿಸಿದ್ದಾನೆ ಆಗ ನಾಯಿ ಮತ್ತೆ ಅಟ್ಯಾಕ್ ಮಾಡಿದೆ, ಆಗ ಬೀದಿ ನಾಯಿಗಳು ತಕ್ಷಣ ಓಡಿ ಬಂದು ಪಿಟ್​ಬುಲ್​ನ್ನು ಕಚ್ಚಿ ಎಳೆದು ಹೊರ ಹಾಕಿವೆ ಆಗ ಬಾಲಕ ಸುಲಭವಾಗಿ ತಪ್ಪಿಸಿಕೊಂಡು ಮನೆಯ ಒಳಗೆ ಹೋಗಿದ್ದಾನೆ.

ನಾಯಿಯನ್ನು ಮಹಾನಗರ ಪಾಲಿಕೆ ವಶಕ್ಕೆ ಪಡೆದಿದೆ. ಇದೀಗ ಬಾಲಕ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪಿಟ್‌ಬುಲ್ ಟೆರಿಯರ್, ಅಮೇರಿಕನ್ ಬುಲ್‌ಡಾಗ್ಸ್, ರೊಟ್‌ವೀಲರ್ಸ್ ಮತ್ತು ಮ್ಯಾಸ್ಟಿಫ್ಸ್ ಸೇರಿದಂತೆ 23 ತಳಿಗಳ ಅಪಾಯಕಾರಿ ನಾಯಿಗಳ ಮಾರಾಟ ಮತ್ತು ಸಂತಾನೋತ್ಪತ್ತಿಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು