News Karnataka Kannada
Thursday, April 25 2024
ಉತ್ತರ ಪ್ರದೇಶ

ಮೂತ್ರ ಮಾಡಿ ಅವಮಾನ: ಕಾಂಗ್ರೆಸ್‌ ನಿಂದ ಶುದ್ಧೀಕರಣ ಪ್ರಕ್ರಿಯೆ

Insult by urinating: Congress's clean-up process
Photo Credit : News Kannada

ಭೋಪಾಲ್: ದಲಿತ ವ್ಯಕ್ತಿಯೊಬ್ಬರಿಗೆ ಮೂತ್ರ ಮಾಡಿದ ವೀಡಿಯೊ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ನಂತರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸಂತ್ರಸ್ತನ ಪಾದಗಳನ್ನು ತೊಳೆದು ಗೌರವ ನೀಡಿದ್ದರು. ಇದೀಗ ಕಾಂಗ್ರೆಸ್‌ ಅದೇ ವ್ಯಕ್ತಿಯ ಶುದ್ದೀಕರಣ ಕಾರ್ಯಕ್ರಮ ನಡೆಸಿದೆ.

ಸ್ಥಳೀಯ ಕಾಂಗ್ರೆಸ್ ನಾಯಕ ಜ್ಞಾನ್ ಸಿಂಗ್ ಅವರು ತಮ್ಮ ಬೆಂಬಲಿಗರೊಂದಿಗೆ ಸಿಧಿ ಜಿಲ್ಲಾ ಕೇಂದ್ರದಿಂದ 25 ಕಿಮೀ ದೂರದಲ್ಲಿರುವ ದಶ್ಮತ್ ಅವರ ನಿವಾಸದಲ್ಲಿ ಗಂಗಾಜಲದೊಂದಿಗೆ “ಶುದ್ಧೀಕರಣ” ಕಾರ್ಯ ನೆರವೇರಿಸಿದ್ದಾರೆ. ಮತ್ತು ಈ ವೀಡಿಯೊವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ.

ವೀಡಿಯೊದಲ್ಲಿ, ಜ್ಞಾನ್ ಸಿಂಗ್ ಅವರು ದಶ್ಮತ್ ಅವರ “ಶುದ್ಧೀಕರಣ” ವನ್ನು ಗಂಗಾಜಲದೊಂದಿಗೆ ನೆರವೇರಿಸಲು ಅನುಮತಿ ಕೇಳುತ್ತಾರೆ. ನಾನು (ಜ್ಞಾನ್ ಸಿಂಗ್) ರಾಹುಲ್ ಭಯಾ (ಅಜಯ್ ಸಿಂಗ್) ಮತ್ತು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಿಮ್ಮೊಂದಿಗಿದ್ದೇವೆ. ಯಾರೂ ನಿಮ್ಮನ್ನು ನೋಯಿಸುವುದಿಲ್ಲ ಎಂದು ಹೇಳುವುದು ದಾಖಲಾಗಿದೆ. ಈ ಪ್ರಕ್ರಿಯೆಗೆ ದಶಮತ್ ಒಪ್ಪಿಗೆ ಸೂಚಿಸುವುದು ವಿಡಿಯೋದಲ್ಲಿದೆ

“ಶುದ್ಧೀಕರಣ” ಮಾಡಿದ ನಂತರ ಮಾತನಾಡಿದ ಜ್ಞಾನ್‌ ಸಿಂಗ್‌, ಮುಖ್ಯಮಂತ್ರಿ ಶಿವರಾಜ್‌ “ಸಿಎಂ ಅವರ ಕಾಲುಗಳನ್ನು ತೊಳೆದರು. ಆದರೆ ಅವರ ಮುಖ ಮತ್ತು ತಲೆಯಲ್ಲ. (ಪ್ರವೇಶ ಶುಕ್ಲಾ ದಶಮತ್ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ) ಆದ್ದರಿಂದ ನಾನು ಅವರ ಮುಖ ಶುದ್ಧೀಕರಣವನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು