News Karnataka Kannada
Saturday, April 13 2024
Cricket
ಉತ್ತರ ಪ್ರದೇಶ

ಹೋಳಿ ಹಬ್ಬ ಹಿನ್ನೆಲೆ : ಅನ್ಯಕೋಮಿನ ಕುಟುಂಬಕ್ಕೆ ಬಣ್ಣ ಹಚ್ಚಿ ಅಸಭ್ಯ ವರ್ತನೆ

ನಾಳೆ ಹೋಳಿ ಹಬ್ಬ ಇದ್ದು ಇಂದಿನಿಂದಲೇ ಸಂಭ್ರಮ ಆರಂಭವಾಗಿದೆ. ಎಲ್ಲೆಡೆ ಬಣ್ಣ ಹಚ್ಚಿ ಸಂಭ್ರಮಿಸುತ್ತಿದ್ದಾರೆ. ಆದರೆ ಉತ್ತರಪ್ರದೇಶದ ಬಿಜ್ನೋರ್ ಜಿಲ್ಲೆಯ ನಗರದ ಧಾಂಪುರ್ ಪ್ರದೇಶದಲ್ಲಿ ಹೋಳಿ ಆಡುತ್ತಿದ್ದ ಯುವಕರ ಗುಂಪೊಂದು ತಮ್ಮಷ್ಟಕ್ಕೆ ತೆರಳುತ್ತಿದ್ದ ಅನ್ಯಕೋಮಿನ ಕುಟುಂಬದ ಮೇಲೆ ಬಣ್ಣದ ನೀರು ಎರಚಿ ಅಸಭ್ಯವಾಗಿ ವರ್ತಿಸಿದ್ದಾರೆ ಇದೀಗ ಈ ದೃಶ್ಯ ಎಲ್ಲೆಡೆ ವೈರಲ್‌ ಆಗಿದೆ.
Photo Credit : NewsKarnataka

ಉತ್ತರ ಪ್ರದೇಶ: ನಾಳೆ ಹೋಳಿ ಹಬ್ಬ ಇದ್ದು ಇಂದಿನಿಂದಲೇ ಸಂಭ್ರಮ ಆರಂಭವಾಗಿದೆ. ಎಲ್ಲೆಡೆ ಬಣ್ಣ ಹಚ್ಚಿ ಸಂಭ್ರಮಿಸುತ್ತಿದ್ದಾರೆ. ಆದರೆ ಉತ್ತರಪ್ರದೇಶದ ಬಿಜ್ನೋರ್ ಜಿಲ್ಲೆಯ ನಗರದ ಧಾಂಪುರ್ ಪ್ರದೇಶದಲ್ಲಿ ಹೋಳಿ ಆಡುತ್ತಿದ್ದ ಯುವಕರ ಗುಂಪೊಂದು ತಮ್ಮಷ್ಟಕ್ಕೆ ತೆರಳುತ್ತಿದ್ದ ಅನ್ಯಕೋಮಿನ ಕುಟುಂಬದ ಮೇಲೆ ಬಣ್ಣದ ನೀರು ಎರಚಿ ಅಸಭ್ಯವಾಗಿ ವರ್ತಿಸಿದ್ದಾರೆ ಇದೀಗ ಈ ದೃಶ್ಯ ಎಲ್ಲೆಡೆ ವೈರಲ್‌ ಆಗಿದೆ.

ಬೈಕ್‌ ನಲ್ಲಿ ತೆರಳುತ್ತಿದ್ದ ಕುಟುಂಬಕ್ಕೆ ನೀರು ಎರಚಿ,ಬಣ್ಣ ಹಚ್ಚಿ ಜೈ ಶ್ರೀರಾಮ್‌ ಹರ ಹರ ಮಹಾದೇವ ಎನ್ನುತ್ತಾ ಅವರು ಬಣ್ಣ ಹಚ್ಚಬೇಡಿ ಎಂದು ವಿರೋಧಿಸಿದರು ಕೇಳದೆ ಮೂವರ ಮುಖಕ್ಕು ಬಣ್ಣ ಹಚ್ಚಿ ಅಸಭ್ಯವಾಗಿ ವರ್ತಿಸಿದ್ದಾರೆ.ಸದ್ಯ ಈ ಎಲ್ಲ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ಪೊಲೀಸರು ಸಂತ್ರಸ್ತ ಕುಟುಂಬವನ್ನು ತಲುಪಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆಯಲ್ಲಿ ಪಾಲ್ಗೊಂಡ ಯುವಕರಿಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎನ್ನಲಾಗ್ತಿದೆ.ಇದೀಗ ಪೊಲೀಸರು ಒಬ್ಬನನ್ನು  ಬಂಧಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು