News Karnataka Kannada
Monday, April 15 2024
Cricket
ಉತ್ತರ ಪ್ರದೇಶ

7 ನಾಯಿ ಮರಿಗಳಿಗೆ ವಿಷ ಉಣಿಸಿದ ವಿಕೃತ ವ್ಯಕ್ತಿ

Gorakhpur man poisons dog, 7 cubs
Photo Credit : IANS

ಗೋರಖ್ಪುರ: ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಸ್ಥಳೀಯ ವ್ಯಾಪಾರಿಯೊಬ್ಬ ನಾಯಿ ಮತ್ತು ಅದರ ಏಳು ನಾಯಿಮರಿಗಳಿಗೆ ವಿಷ ಹಾಕಿ ನಂತರ ಅವುಗಳ ದೇಹಗಳನ್ನು ಸುಟ್ಟುಹಾಕಿದ ಭಯಾನಕ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ  ವೈರಲ್ ಆಗಿದೆ.

ಇದರಿಂದ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ಗುರುವಾರ ಜಿಲ್ಲಾ ಪೊಲೀಸ್ ಘಟಕವನ್ನು ಸಂಪರ್ಕಿಸಿ ಆರೋಪಿ ವ್ಯಾಪಾರಿ ಗುರುಮುಖ್ ಗಂಗಾರಾಮ್ ವಿರುದ್ಧ ಐಪಿಸಿ ಸೆಕ್ಷನ್ 428 ಮತ್ತು 429 (ಕೊಲೆ, ವಿಷ, ಅಂಗವೈಕಲ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಗಂಗಾರಾಮ್ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದಾರೆ. ಕಳೆದ ಶುಕ್ರವಾರ, ಅದೇ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ನಾಯಿ ಏಳು ನಾಯಿಮರಿಗಳಿಗೆ ಜನ್ಮ ನೀಡಿತ್ತು.

ಇದರಿಂದ ಅಸಮಾಧಾನಗೊಂಡ ಗಂಗಾರಾಮ್  ನಾಯಿಗಳಿಗೆ ವಿಷಪೂರಿತ ಬಿಸ್ಕತ್ತು ನೀಡಿದ್ದ. ವಿಷಪೂರಿತ ಬಿಸ್ಕತ್ತುಗಳನ್ನು ಸೇವಿಸಿದ ನಂತರ ಎಲ್ಲಾ ನಾಯಿ ಮರಿಗಳು ಸ್ಥಳದಲ್ಲೇ ಸಾವನ್ನಪ್ಪಿದವು.

ತರುವಾಯ, ಗಂಗಾರಾಮ್ ನಾಯಿಗಳಿಗೆ ಬೆಂಕಿ ಹಚ್ಚಿದ್ದ. ಈ ಕೃತ್ಯವನ್ನು ದಾರಿಹೋಕರೊಬ್ಬರು ಚಿತ್ರೀಕರಿಸಿ ಅಂತರ್ಜಾಲದಲ್ಲಿ ಹರಿಬಿಟ್ಟಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು