ಮಗು ದತ್ತು ಪಡೆಯಲು ವಿವಾಹ ಪ್ರಮಾಣ ಪತ್ರದ ಅಗತ್ಯ ಇಲ್ಲ: ಅಲಹಾಬಾದ್ ಹೈಕೋರ್ಟ್ ತೀರ್ಪು

ಅಲಹಾಬಾದ್ ಹೈಕೋರ್ಟ್, ಮಗುವನ್ನು ದತ್ತು ತೆಗೆದುಕೊಳ್ಳಲು ಮದುವೆ ಪ್ರಮಾಣ ಪತ್ರ ದ ಅಗತ್ಯತೆ ಇಲ್ಲ ಎಂದು ​ ಹೇಳಿದೆ. ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ 1956 ರ ಅಡಿಯಲ್ಲಿ ಒಂಟಿ ಪೋಷಕರೂ  ಕೂಡ ಮಗುವನ್ನು ದತ್ತು ಪಡೆಯಬಹುದು ಎಂದು ತಿಳಿಸಿದೆ.

ಮಂಗಳಮುಖಿಯೊಬ್ಬರು ಮಗುವನ್ನು ದತ್ತು ತೆಗೆದುಕೊಳ್ಳುವ ಸಂಬಂಧ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಾ. ಕೌಶಲ್​ ಜಯೇಂದ್ರ ಠಾಕೆ ಮತ್ತು ನ್ಯಾ. ವಿವೇಕ್​ ವರ್ಮಾರ ಪೀಠ ಈ ತೀರ್ಪು ನೀಡಿದೆ. ಮಗುವನ್ನು ದತ್ತು ತೆಗೆದುಕೊಳ್ಳಲು ಮದುವೆ ಆಗಿರಲೇ ಬೇಕು ಎಂದೆಲ್ಲ ಏನೂ ಇಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

ಮಗುವನ್ನು ದತ್ತು ತೆಗೆದುಕೊಳ್ಳುವ ಸಂಬಂಧ ಅರ್ಜಿ ಸಲ್ಲಿಸಿದ್ದ ಮಂಗಳಮುಖಿಯ ಹೆಸರು ರೀನಾ. ವಾರಣಾಸಿಯ ಅರ್ದಾಲಿ ಬಜಾರ್‌ನ ಮಹಾಬೀರ್ ಮಂದಿರದಲ್ಲಿ 2000ನೇ ಇಸ್ವಿಯ ಡಿಸೆಂಬರ್ 16 ರಂದು ವ್ಯಕ್ತಿಯೊಬ್ಬರನ್ನು ವಿವಾಹವಾದರು. ನಂತರ ದಂಪತಿ ಮಗುವೊಂದನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದರು. ಮಗುವನ್ನು ದತ್ತು ಪಡೆಯುವ ಪ್ರಕ್ರಿಯೆ ಶುರು ಮಾಡಿದ್ದರು. ಆದರೆ ದತ್ತು ತೆಗೆದುಕೊಳ್ಳಬೇಕು ಎಂದರೆ, ಹಿಂದು ವಿವಾಹ ಕಾಯ್ದೆಯಡಿ ವಿವಾಹ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಹೇಳಲಾಯಿತು.

ಹೀಗಾಗಿ 2021ರಲ್ಲಿ ದಂಪತಿ ವಾರಾಣಸಿಯ ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಆನ್​​ಲೈನ್​​ನಲ್ಲಿ ಅರ್ಜಿ ಸಲ್ಲಿಸಿದ್ದರು. ತಮ್ಮ ವಿವಾಹವನ್ನು ನೋಂದಣಿ ಮಾಡಿ, ಅದರ ಪ್ರಮಾಣ ಪತ್ರ ನೀಡುವಂತೆ ಕೋರಿದ್ದರು. ರೀನಾ ತೃತೀಯಲಿಂಗಿ ಆಗಿದ್ದರಿಂದ ಅವರ ವಿವಾಹವನ್ನು ನೋಂದಾವಣೆ ಮಾಡಲು ಸಾಧ್ಯವಿಲ್ಲ. ವಿವಾಹ ಸರ್ಟಿಫಿಕೇಟ್​ ನೀಡಲು ಕಾನೂನು ಪ್ರಕಾರ ಸಾಧ್ಯವಿಲ್ಲ ಎಂದು ಹೇಳಲಾಗಿತ್ತು.

ಅದಾದ ನಂತರ ದಂಪತಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ತಮಗೆ ಮಗುವನ್ನು ದತ್ತು ತೆಗೆದುಕೊಳ್ಳಬೇಕಾಗಿದೆ. ಹೀಗಾಗಿ ಅದಕ್ಕೆ ಸಂಬಂಧಪಟ್ಟಂತೆ ವಿವಾಹ​ ಸರ್ಟಿಫಿಕೇಟ್​ ಕೊಡುವಂತೆ ವಾರಾಣಸಿ ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದರು.

ಈಗ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಹಿಂದು ದತ್ತು ಮತ್ತು ನಿರ್ವಹಣಾ ಕಾಯ್ದೆ 1956ರ ಸೆಕ್ಷನ್​ 7 (ದತ್ತು ತೆಗೆದುಕೊಳ್ಳಲು ಹಿಂದು ಪುರುಷನ ಸಾಮರ್ಥ್ಯ) ಮತ್ತು ಸೆಕ್ಷನ್​ 8 (ದತ್ತು ಸ್ವೀಕರಿಸಲು ಹಿಂದೂ ಮಹಿಳೆಯ ಸಾಮರ್ಥ್ಯ)ಗಳಡಿ ಮಕ್ಕಳನ್ನು ದತ್ತು ಪಡೆಯಲು ವಿವಾಹ ಪ್ರಮಾಣ ಪತ್ರದ ಅಗತ್ಯತೆ ಇಲ್ಲ ಎಂದು ತೀರ್ಪು ನೀಡಿದೆ.

ಇನ್ನು ಕರ್ನಾಟಕದಲ್ಲಿ 2014ರಲ್ಲಿ ಕೇವಲ 77 ಮಕ್ಕಳನ್ನು ದತ್ತು ಪಡೆಯಲಾಗಿತ್ತು. ಆದರೆ, ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ 2005ರಲ್ಲಿ ತಂದ ನೂತನ ದತ್ತು ಮಾರ್ಗಸೂಚಿ ಕರ್ನಾಟಕದಲ್ಲಿ ಮಕ್ಕಳ ಭಾಗ್ಯದಿಂದ ವಂಚಿತರಾಗಿದ್ದ ದಂಪತಿಗಳಿಗೆ ವರದಾನವಾಯಿತು. ಮಕ್ಕಳನ್ನು ದತ್ತು ಪಡೆಯಲು ಕೆಲವು ಸಾಮಾನ್ಯ ದಾಖಲೆಗಳು ಮತ್ತು ನಿಯಮಗಳ ಪಾಲನೆ ಅಗತ್ಯವಾಗಿದೆ. ಮಕ್ಕಳನ್ನು ದತ್ತು ಪಡೆಯುವುದರಿಂದ ಅನಾಥ ಮಕ್ಕಳ ಪಾಲನೆಗೆ ಸಹಕಾರಿ.

ಮಕ್ಕಳನ್ನು ದತ್ತು ತೆಗದುಕೊಳ್ಳುವುದು ಜನಸಂಖ್ಯೆ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ಜೊತೆಗೆ ಅನಾಥ ಮಕ್ಕಳ ಉತ್ತಮ ಭವಿಷ್ಯ ಮತ್ತು ಮಕ್ಕಳ ಅನಾಥ ಭಾವ, ತಂದೆ ತಾಯಿ ಇಲ್ಲ ಎನ್ನುವ ನೋವು ಕಡಿಮೆಯಾಗುತ್ತದೆ. ಮಕ್ಕಳನ್ನು ದತ್ತು ಪಡೆಯುವುದು ಹೆಣ್ಣುಮಕ್ಕಳಲ್ಲಿನ ಬಂಜೆತನವನ್ನು ಕಡಿಮೆ ಮಾಡುತ್ತದೆ. ಬದಲಾದ ಆಹಾರ ಪದ್ಧತಿ ಇನ್ನಿತರೆ ಕಾರ್ಯಗಳಿಂದಾಗಿ ಕೂಡ ಬಂಜೆತನದ ಸಮಸ್ಯೆ ಎದುರಾಗಿದೆ. ಮಕ್ಕಳನ್ನು ಮಾಡಿಕೊಳ್ಳುವುದರಲ್ಲಿ ವಿಚ್ಛೇದನ, ವಿವಾಹ ವಿಳಂಬ, ನಾನಾ ಅಪಘಾತದಲ್ಲಿ ಮಕ್ಕಳನ್ನು ಕಳೆದುಕೊಂಡವರು, ಸಮಯ ಮುಂದೂಡಿಕೆ, ಆಧುನಿಕ ಜೀವನ ಶೈಲಿಯೂ ಬಂಜೆತನ ಸಮಸ್ಯೆಗೆ ಕಾರಣವಾಗಿದೆ.

Gayathri SG

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

2 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

2 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

2 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

3 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

4 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

4 hours ago