News Karnataka Kannada
Monday, April 29 2024
ಉತ್ತರ ಪ್ರದೇಶ

ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಯೋಗಿ ಆದಿತ್ಯನಾಥ

Yogi
Photo Credit : Twitter

ಲಕ್ನೋ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸುಮಾರು 28 ವರ್ಷಗಳ ನಂತರ ಹುಟ್ಟೂರಿನಲ್ಲಿ ತಮ್ಮ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಖಾಸಗಿ ಕಾರ್ಯಕ್ರಮದ ಮೇಲೆ ಬಹಳ ವರ್ಷಗಳ ನಂತರ ತಮ್ಮ ಹುಟ್ಟೂರಾದ ಉತ್ತರಾಖಂಡದ ಪೌರಿಗೆ ತೆರಳಿರುವ ಯೋಗಿ, ತಮ್ಮ ತಾಯಿ ಸಾವಿತ್ರಾ ದೇವಿ(85) ಅವರನ್ನು ಭೇಟಿ ಮಾಡಿ ಅವರ ಕಾಲಿಗೆ ನಮಸ್ಕರಿಸಿದ್ದಾರೆ.

ತಾಯಿಗೆ ನಮಸ್ಕಾರ ಮಾಡುತ್ತಿರುವ ಫೋಟೋವನ್ನು ಟ್ವೋಟರ್‌ನಲ್ಲಿ ಸ್ವತಃ ಯೋಗಿ ಅವರು ಹಂಚಿಕೊಂಡಿದ್ದಾರೆ. 28 ವರ್ಷಗಳಿಂದ ಯೋಗಿ ತಮ್ಮ ಹುಟ್ಟೂರಿಗೆ ಭೇಟಿ ನೀಡಿರಲಿಲ್ಲ ಎಂದು ಹೇಳಲಾಗಿದ.ಅವರ ತಾಯಿ ಮಗನ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದ್ದಾರೆ.

ಫೋಟೋಗೆ ‘ಮಾ’ ಎಂದು ಶೀರ್ಷಿಕೆ ನೀಡಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ತಾಯಿ ಸಾವಿತ್ರಾ ದೇವಿ ಅವರೊಂದಿಗಿನ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರಸ್ತುತ ಉತ್ತರಾಖಂಡ್‌ನ ತಮ್ಮ ತವರೂರು ಪೌರಿಯಲ್ಲಿದ್ದಾರೆ. ಅವರು ಉತ್ತರಪ್ರದೇಶ ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ತಮ್ಮ ತಾಯಿಯನ್ನು ಭೇಟಿಯಾಗುತ್ತಿದ್ದಾರೆ. ಬುಧವಾರ ನಡೆಯಲಿರುವ ತಮ್ಮ ಸೋದರಳಿಯನ ಕೇಶ ಮುಂಡನ ಸಮಾರಂಭಕ್ಕಾಗಿ ಅವರು ತಮ್ಮ ಪೂರ್ವಜರ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ.

28 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಉತ್ತರಾಖಂಡ್‌ಗೆ ಕುಟುಂಬ ಸಮಾರಂಭದಲ್ಲಿ ಭಾಗವಹಿಸಲು ತೆರಳಿದ್ದಾರೆ ಎಂದು ವರದಿಯಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದ ಯೋಗಿ ಆದಿತ್ಯನಾಥ್ ಅವರು ಏಪ್ರಿಲ್ 2020 ರಲ್ಲಿ ಹರಿದ್ವಾರದಲ್ಲಿ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು