ಉತ್ತರ ಪ್ರದೇಶ: ಹಾಸ್ಟೆಲ್ ಒಳಗೆ ಗ್ಯಾಸ್ ಸಿಲಿಂಡರ್ ಸ್ಫೋಟ, 10 ವಿದ್ಯಾರ್ಥಿಗಳಿಗೆ ಗಾಯ

ಬುಲಂದ್ ಶಹರ್ : ಉತ್ತರ ಪ್ರದೇಶದ ‘ ಬುಲಂದ್ ಶಹರ್’ ನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹಾಸ್ಟೆಲ್ ಒಳಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಹತ್ತು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಸ್ಟೆಲ್ ನ ಅಡುಗೆ ಮನೆಯೊಳಗೆ ಆಹಾರವನ್ನು ಬೇಯಿಸುವಾಗ 5 ಕೆಜಿ ತೂಕದ ಸಣ್ಣ ಸಿಲಿಂಡರ್ ಸ್ಫೋಟಗೊಂಡು ಈ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

ಗಾಯಗೊಂಡವರನ್ನು ಚಿಕಿತ್ಸೆಗಾಗಿ ಅಲಿಘರ್ ನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಪ್ರಕಾಶ್ ಸಿಂಗ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ. ಉಪ ಕಲೆಕ್ಟರ್ ಅಲಿಘರ್ ನ ಮುಖ್ಯ ವೈದ್ಯಕೀಯ ಅಧಿಕಾರಿಯೊಂದಿಗೆ ಆಸ್ಪತ್ರೆಯಲ್ಲಿ ಹಾಜರಿದ್ದಾರೆ ಎಂದು ಅವರು ಹೇಳಿದರು.

‘ದೇಬಾಯಿ ತಹಸಿಲ್ ನ ಸಿಬ್ಬಂದಿ ಸ್ಥಳದಲ್ಲೇ ಇದ್ದಾರೆ, ಚಿಂತಿಸಬೇಕಾಗಿಲ್ಲ.’ ಹಿರಿಯ ಪೊಲೀಸ್ ಅಧೀಕ್ಷಕರೊಂದಿಗೆ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಅಲಿಘರ್ ಗೆ ಹೋಗುತ್ತಿದ್ದೇನೆ ಎಂದು ಸಿಂಗ್ ಹೇಳಿದರು.

Gayathri SG

Recent Posts

ಶೈಕ್ಷಣಿಕ ಸಾಧನೆಗಿಂತ ನನ್ನ ಮೀಸೆಯಿಂದಾಗಿ ಹೆಚ್ಚು ಟ್ರೋಲ್‌ ಆಗಿದ್ದೇನೆ : ಟಾಪರ್‌ ಹುಡುಗಿ

98.50 ಪ್ರತಿಶತ ಅಂಕದೊಂದಿಗೆ ಯುಪಿ ಬೋರ್ಡ್ 10ನೇ ತರಗತಿಯ ಟಾಪರ್ ಆಗಿ ಹೊರಹೊಮ್ಮಿರುವ ಪ್ರಾಚಿ ನಿಗಮ್ ತಮ್ಮ ಮುಖದ ಕೂದಲಿನ…

17 mins ago

ತಂದೆ ಮುಖಕ್ಕೆ ಮನ ಬಂದಂತೆ ಹೊಡೆದು ಕೊಂದೆ ಬಿಟ್ಟ ಕ್ರೂರಿ ಮಗ

ಆಸ್ತಿ ಆಸೆಯಿಂದಾಗಿ ಹೆತ್ತ ತಂದೆ ಎಂದು ನೋಡದೆ ಮನಬಂದಂತೆ ಹೊಡೆದಿದ್ದಾನೆ. ಆತನ ಹೊಡೆತದ ನೋವು ತಾಳಲಾರದೆ ವೃದ್ಧ ಪ್ರಾಣಬಿಟ್ಟಿದ್ದಾರೆ. ಈ…

45 mins ago

ಮಸೀದಿ ಒಳಗೆ ನುಗ್ಗಿ ಮಕ್ಕಳ ಮುಂದೆ ದೊಣ್ಣೆಗಳಿಂದ ಹೊಡೆದು ಧರ್ಮಗುರುವಿನ ಕೊಲೆ

ಅಕ್ರಮವಾಗಿ ಮಸೀದಿ ಒಳಗೆ ನುಗ್ಗಿದ ಮೂವರು ಮಾಸ್ಕ್​ ಧರಿಸಿದ ದುಷ್ಕರ್ಮಿಗಳು ಅಮಾನುಷವಾಗಿ ದೊಣ್ಣೆಗಳಿಂದ ಹೊಡೆದು ಧರ್ಮಗುರುವನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.…

1 hour ago

ನಾಮಪತ್ರ ಹಿಂಪಡೆದ ಕಾಂಗ್ರೆಸ್​ ಅಭ್ಯರ್ಥಿ ಅಕ್ಷಯ್​ ಕಾಂತಿ ಬಾಮ್​

ಚುನಾವಣೆಗೂ ಮುನ್ನ ಇಂದೋರ್​ನ ಕಾಂಗ್ರೆಸ್​ ಅಭ್ಯರ್ಥಿ ಅಕ್ಷಯ್​ ಕಾಂತಿ ಬಾಮ್​ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ.

1 hour ago

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಜೆಡಿಎಸ್ ಪಕ್ಷದಿಂದ ಉಚ್ಛಾಟನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ. ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಜೆಡಿಎಸ್…

1 hour ago

ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ‌ ಅರ್ಥಪೂರ್ಣವಾಗಿ ನಡೆದ ಆಟಿಸಂ ಜಾಗೃತಿ ʼಎಕ್ಷಪ್ಸನಲ್ 2024ʼ

ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ ಪಾಥ್ವೆ ಎಂಟರ್‌ ಪ್ರೈಸಸ್‌ ಹಾಗೂ ಸ್ಪೇಷಲ್‌ ಪೇರೆಂಟ್ಸ್‌ ಸಪೋರ್ಟ್‌ ಗ್ರೂಪ್‌ ಅವರ ಸಹಯೋಗದೊಂದಿಗೆ ಐಬ ಅಸೋಸಿಯೇಷನ್…

1 hour ago