ಉತ್ತರ ಪ್ರದೇಶ : ಇಂದು ಉತ್ತರ ಪ್ರದೇಶದ ಲಖನೌ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಆಜಾದಿ @75 ಅರ್ಬನ್ ಇಂಡಿಯಾ ಯೋಜನೆ ಅಡಿಯಲ್ಲಿನ 75 ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.
75 ಜಿಲ್ಲೆಗಳ 75 ಸಾವಿರ ಫಲಾನುಭವಿಗಳಿಗೆ ಪ್ರಧಾನಿ ಮೋದಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಮನೆಗಳ ಕೀಯನ್ನು ವರ್ಜುವಲ್ ಮೂಲಕ ವಿತರಿಸಿದರು.
ಈ ವೇಳೆ ಕಾನ್ಪುರ, ಲಖನೌ, ವಾರಣಾಸಿ, ಪ್ರಯಾಗ್ ರಾಜ್, ಗೋರಖ್ ಪುರ್, ಘಾಸಿಯಾಬಾದ್ ಗಳಿಗೆ ಸಂಚಾರ ನಡೆಸುವ 75 ವಿದ್ಯುತ್ ಬಸ್ ಗಳಿಗೆ ಚಾಲನೆ ನೀಡಿದರು.
ಈ ಬಗ್ಗೆ ಮಾತನಾಡಿದ ಅವರು, 2014ರ ನಂತರ ಸರ್ಕಾರ ನಗರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 1.13 ಕೋಟಿ ಮನೆಗಳನ್ನು ನಿರ್ಮಿಸಲು ಅನುಮತಿ ನೀಡಿದೆ. ಇವುಗಳಲ್ಲಿ ಇದುವರೆಗೆ 50 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ ಮತ್ತು ಬಡವರಿಗೆ ನೀಡಲಾಗಿದೆ ಎಂದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ, ಕೇಂದ್ರ ಸರ್ಕಾರವು ಸುಮಾರು 1 ಲಕ್ಷ ಕೋಟಿ ರೂ. ಹಣ ಬಡವರ ಖಾತೆಗಳಿಗೆ ವರ್ಗಾಯಿಸಿದೆ. ಈವರೆಗೂ 3 ಕೋಟಿ ಮನೆಗಳನ್ನು ನಿರ್ಮಿಸುವ ಮೂಲಕ ಬಡವರ ಕನಸುಗಳನ್ನು ಈಡೇರಿಸಿದ್ದೇವೆ ಎಂದರು.