News Karnataka Kannada
Sunday, April 21 2024
Cricket
ಉತ್ತರ ಪ್ರದೇಶ

ವಿವಾಹ ಸಮಾರಂಭ ನಡೆಯುತ್ತಿದ್ದ ವೇಳೆ ವಧುವನ್ನು ಗುಂಡಿಕ್ಕಿ ಕೊಂದ ಪ್ರಿಯಕರ

Marriage
Photo Credit :

ಮಥುರಾ :ವಿವಾಹ ಸಮಾರಂಭ ನಡೆಯುತ್ತಿದ್ದ ಸಂದರ್ಭದಲ್ಲಿಯೇ ವಧುವನ್ನು ವಿವಾಹ ಮಂಟಪದಲ್ಲಿ ಆಕೆಯ ಪ್ರಿಯಕರ ಗುಂಡಿಕ್ಕಿ ಹತ್ಯೆಗೈದ ಘಟನೆ ಉತ್ತರಪ್ರದೇಶ ಮಥುರಾದ ನೌಜ್ ಹೀಲ್ ಪ್ರದೇಶದ ಮುಬಾರಿಕ್ ಪುರ್ ಗ್ರಾಮದಲ್ಲಿ ಶುಕ್ರವಾರ(ಏಪ್ರಿಲ್ 29) ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರನ ಕೊರಳಿಗೆ ಹಾರ ಹಾಕುವ ಸಂಪ್ರದಾಯ ಮುಗಿದ ತಕ್ಷಣವೇ ವಧುವಿನ ಪ್ರಿಯಕರ ಆಕೆಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಕಾಜಲ್ ಸ್ಥಳದಲ್ಲಿಯೇ ಕೊನೆಯುಸಿರೆಳೆದಿರುವುದಾಗಿ ವರದಿ ತಿಳಿಸಿದೆ.

ಆರೋಪಿ ಹಾಗೂ ಯುವತಿಯ ನಡುವೆ ಪ್ರೇಮ ಸಂಬಂಧ ಹೊಂದಿದ್ದು, ಆಕೆ ಇನ್ನೊಬ್ಬನ ಜತೆ ವಿವಾಹವಾಗುತ್ತಿರುವುದಕ್ಕೆ ಆತ ಆಕ್ರೋಶಗೊಂಡಿದ್ದ ಎಂದು ವರದಿ ಹೇಳಿದೆ. ಗುಂಡಿನ ಶಬ್ದ ಕೇಳಿದ ಕೂಡಲೇ ಸಂಬಂಧಿಕರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದರು ಎಂದು ವರದಿ ವಿವರಿಸಿದೆ.

ವಧು-ವರ ಮಾಲೆಯನ್ನು ಅದಲು ಬದಲು ಮಾಡಿಕೊಳ್ಳುವ ಸಂಪ್ರದಾಯ ಮುಗಿದ ನಂತರ ಮಗಳು ಫ್ರೆಶ್ ಅಪ್ ಆಗಲು ಕೋಣೆಯೊಳಗೆ ತೆರಳಿದ್ದ ವೇಳೆ ಅಪರಿಚಿತ ಯುವಕನೊಬ್ಬ ಬಂದು ಮಗಳ ಮೇಲೆ ಗುಂಡು ಹಾರಿಸಿದ್ದ. ಇದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಮೃತ ವಧುವಿನ ತಂದೆ ಖುಬಿ ರಾಮ್ ಪ್ರಜಾಪತಿ ಎಎನ್ ಐ ನ್ಯೂಸ್ ಏಜೆನ್ಸಿ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.

ಘಟನೆಯ ನಂತರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ ಎಎನ್ ಐಗೆ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು