News Karnataka Kannada
Monday, April 22 2024
Cricket
ಉತ್ತರ ಪ್ರದೇಶ

ನೊಯ್ಡಾ ಸಮೀಪದಲ್ಲಿ ನಿರ್ಮಾಣವಾಗಲಿದೆ ಬೃಹತ್ ಫಿಲ್ಮ್ ಸಿಟಿ

Film City
Photo Credit :

ಪಣಜಿ: ಉತ್ತರ ಪ್ರದೇಶದ ನೊಯ್ಡಾ ಸಮೀಪದಲ್ಲಿ ನಿರ್ಮಾಣವಾಗಲಿದೆ ಬೃಹತ್ ಫಿಲ್ಮ್ ಸಿಟಿ. ಚಿತ್ರೀಕರಣ, ಪ್ರಿ ಪ್ರೊಡಕ್ಷನ್, ಪೋಸ್ಟ್ ಪ್ರೊಡಕ್ಷನ್ ಎಲ್ಲವೂ ಒಂದೇ ಸೂರಿನಡಿ ದೊರೆಯಲಿದೆ.

ಈ ವಿಚಾರವನ್ನು ಉತ್ತರ ಪ್ರದೇಶ ಸರಕಾರದ ಸಾರ್ವಜನಿಕ ಸಂಪರ್ಕ, ಮಾಹಿತಿ, ವಾರ್ತಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹಗಾರ್ ಪ್ರಕಟಿಸಿದ್ದಾರೆ.

ಗೋವಾದಲ್ಲಿ ನಡೆಯುತ್ತಿರುವ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರಿಂದ ಉತ್ತರ ಪ್ರದೇಶಕ್ಕೆ ಲಭಿಸಿದ ‘ಚಿತ್ರೀಕರಣ ಸ್ನೇಹಿ ನಗರ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ ಉತ್ತರ ಪ್ರದೇಶದಲ್ಲಿ ಒಂದು ದೊಡ್ಡ ಫಿಲ್ಮ್ ಸಿಟಿಯನ್ನು ನಿರ್ಮಿಸಲಾಗುತ್ತಿದೆ. ಅಂದಾಜು ₹ 10ಸಾವಿರ ಕೋಟಿ ವೆಚ್ಚದಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಈ ಫಿಲ್ಮ್‌ಸಿಟಿ ರೂಪುಗೊಳ್ಳಲಿದೆ. ಈ ಯೋಜನೆ ಕನಸಿನಲ್ಲಿಲ್ಲ, ಸದ್ಯ ಕಾಗದದಲ್ಲಿದೆ. ಯೋಜನೆಯ ಟೆಂಡರ್ ಪ್ರಕ್ರಿಯೆ ಕೂಡ ಶುರುವಾಗಿದೆ ಎಂದು ನವನೀತ್ ತಿಳಿಸಿದರು.

ಇತ್ತೀಚಿಗಷ್ಟೇ ಭೂಮಿ ಪೂಜೆ ನೆರವೇರಿಸಿದ ನೊಯ್ಡಾ ಜೇವಾರ್ ವಿಮಾನ ನಿಲ್ದಾಣದ ಸಮೀಪದಲ್ಲಿಯೇ ಈ ಫಿಲ್ಮ್ ಸಿಟಿ ಮೇಲೇಳಲಿದೆ. ದೇಶ ಮತ್ತು ಜಗತ್ತಿನ ದೊಡ್ಡ ನಿರ್ಮಾಣ ಸಂಸ್ಥೆಗಳು ಈ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಆಹ್ವಾನ ನೀಡಿದ ಅವರು, ಉತ್ತರ ಪ್ರದೇಶ ಸರಕಾರ ಈ ಭೂಮಿಗಾಗಿ ಹಣವನ್ನು ಪಡೆಯುವುದಿಲ್ಲ. ಬದಲಾಗಿ ಲೀಸ್ ಆಧಾರದಲ್ಲಿ ಜಮೀನು ಒದಗಿಸಲಿದೆ. ವಾರ್ಷಿಕ ನಿರ್ದಿಷ್ಟ ಬಾಡಿಗೆ ಎಂದು ನಿಗದಿಪಡಿಸಲಿದೆ. ನಮ್ಮ ಈ ಪ್ರಯತ್ನಕ್ಕೆ ಬೆಂಬಲ ನೀಡಿ ಎಂದು ಕೋರಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು