News Karnataka Kannada
Sunday, April 21 2024
Cricket
ಉತ್ತರ ಪ್ರದೇಶ

ಉತ್ತರ ಪ್ರದೇಶ: ಗೋಣಿ ಚೀಲದಲ್ಲಿ ಬಾಲಕನ ಶವ ಪತ್ತೆ

ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಕಾರೊಂದು ಕಂದಕಕ್ಕೆ ಬಿದ್ದ ಪರಿಣಾಮ ದಂಪತಿ ಹಾಗೂ ಮಗು ಸಾವನ್ನಪ್ಪಿದ್ದಾರೆ.
Photo Credit :

ಉತ್ತರ ಪ್ರದೇಶ : ನೋಯ್ಡಾದಲ್ಲಿ ಪೊಲೀಸರನ್ನೇ ಬೆಚ್ಚಿ ಬೀಳಿಸುವಂಥ ಘಟನೆಯೊಂದು ನಡೆದಿದೆ. 10 ವರ್ಷದ ಬಾಲಕನೊಬ್ಬ ಗೋಣಿ ಚೀಲದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಎರಡು ದಿನಗಳ ಹಿಂದೆ ಈ ಬಾಲಕ ನಾಪತ್ತೆಯಾಗಿದ್ದ. ಪಕ್ಕದ ಗಾಜಿಯಾಬಾದ್‌ನ ಖೋರಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪೋಷಕರು ದೂರು ದಾಖಲಿಸಿದ್ದರು. ಕೊಲೆಯಾಗಿರುವ ಬಾಲಕ ಖೋರಾ ಕಾಲೋನಿಯ ವಂದನಾ ಎನ್‌ಕ್ಲೇವ್‌ನ ನಿವಾಸಿಯಾಗಿದ್ದ.

ಪೊಲೀಸರ ಪ್ರಕಾರ, ಹುಡುಗನ ತಾಯಿಯ ಸೋದರ ಸಂಬಂಧಿಯೇ ಈ ಕೃತ್ಯ ಎಸಗಿದ್ದಾನೆ. ಬಾಲಕನನ್ನು ಕೊಂದು ಶವವನ್ನು ನೋಯ್ಡಾದ ಸೆಕ್ಟರ್ 54ರ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾನೆ ಎನ್ನಲಾಗ್ತಾ ಇದೆ.

ಯಾವ ಕಾರಣಕ್ಕೆ ಈ ಹತ್ಯೆ ನಡೆದಿದೆ ಅನ್ನೋದು ಸ್ಪಷ್ಟವಾಗಿಲ್ಲ. ಕೌಟುಂಬಿಕ ಕಲಹ ಕಾರಣವೋ ? ಅಥವಾ ಮಾಟ ಮಂತ್ರಕ್ಕೇನಾದರೂ ಬಾಲಕನನ್ನು ಬಲಿ ಕೊಡಲಾಗಿದೆಯಾ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದು, ಹೆಚ್ಚಿನ ತನಿಖೆ ನಡೆಸ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು