ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಆರಂಭ: ಇಲ್ಲಿದೆ ಹೈಲೆಟ್ಸ್‌

ದೆಹಲಿ:  ಲೋಕಸಭೆಯಲ್ಲಿ 2024ನೇ ಸಾಲಿನ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ ಆರಂಭವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 6ನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ.

ಬಜೆಟ್‌ ಮಂಡನೆಗೂ ಮುನ್ನ ಮಾತನಾಡಿದ ಲೋಕಸಭಾ ಸ್ಪೀಕರ್, 2024ನೇ ಸಾಲಿನ ಬಜೆಟ್‌ ಪ್ರತಿಯನ್ನು ಸಂಸದರಿಗೆ ಬಜೆಟ್ ಓದಿದ ನಂತರ ಹಂಚಿಕೆ ಮಾಡಲಾಗುವುದು ಎಂದಿದ್ದಾರೆ. ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಮಧ್ಯಂತರ ಬಜೆಟ್ ಉತ್ತಮವಾಗಿರುತ್ತದೆ ಎಂದು  ಪ್ರಧಾನಿ ಮೋದಿ ಹೇಳಿದ್ದಾರೆ. ಇನ್ನು  ದೇಶಕ್ಕೆ ಹೊಸ ದಿಕ್ಕು ಮತ್ತು ಭರವಸೆ ಸಿಕ್ಕಿದೆ, ಎಲ್ಲರಿಗೂ ಮನೆ, ಎಲ್ಲರಿಗೂ ನೀರು, ಪ್ರತಿ ಮನೆಗೆ ವಿದ್ಯುತ್‌ಗೆ ಒತ್ತು ಕೊಡಲಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆ ಉತ್ತಮ ಸಾಧನೆ ಮಾಡಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.

ಆರ್ಥಿಕತೆಯಲ್ಲಿ ದೊಡ್ಡ ಬದಲಾವಣೆಗಳು ಕಂಡುಬರುತ್ತಿವೆ. ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪುತ್ತಿವೆ. ದೇಶದ ಪ್ರತಿಯೊಂದು ವರ್ಗದ ಜನರಿಗೆ ಪ್ರತಿಯೊಂದು ಸೌಲಭ್ಯ ತಲುಪುತ್ತಿದೆ. ಗ್ರಾಮೀಣ ಜನರ ಆದಾಯ ಹೆಚ್ಚಿದೆ. ನಮ್ಮ ಯುವ ದೇಶವು ಹೆಚ್ಚಿನ ಆಕಾಂಕ್ಷೆಗಳನ್ನು ಹೊಂದಿದೆ, ಅದರ ವರ್ತಮಾನದ ಬಗ್ಗೆ ಹೆಮ್ಮೆಯಿದೆ ಮತ್ತು ಉಜ್ವಲ ಭವಿಷ್ಯಕ್ಕಾಗಿ ಭರವಸೆ ಮತ್ತು ನಂಬಿಕೆಯನ್ನು ಹೊಂದಿದೆ. ನಮ್ಮ ಸರ್ಕಾರದ ಅತ್ಯುತ್ತಮ ಕೆಲಸದ ಆಧಾರದ ಮೇಲೆ ಜನರು ಮತ್ತೊಮ್ಮೆ ಬಲವಾದ ಜನಾದೇಶವನ್ನು ನೀಡುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದರು. ಅಲ್ಲದೇ ಬಡವರು, ಮಹಿಳೆಯರು ಮತ್ತು ಯುವಕರ ಕಡೆ ಗಮನ ಹರಿಸುವ ಅಗತ್ಯವಿದೆ ಎಂದು ಮಧ್ಯಂತರ ಬಜೆಟ್​ ಮಂಡನೆಯಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದರು.

ಇನ್ನು ಫಸಲ್ ಬಿಮಾ ಯೋಜನೆಯಿಂದ ನಾಲ್ಕು ಕೋಟಿ ರೈತರಿಗೆ ಲಾಭವಾಗಿದೆ.  ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಭಾಗವಹಿಸುವಿಕೆ 10 ವರ್ಷಗಳಲ್ಲಿ 28 ಪ್ರತಿಶತದಷ್ಟು ಹೆಚ್ಚಾಗಿದೆ.  ಸ್ಕಿಲ್ ಇಂಡಿಯಾ ಮಿಷನ್ 1.4 ಕೋಟಿ ಯುವಕರಿಗೆ ತರಬೇತಿ ನೀಡಿದೆ, 54 ಲಕ್ಷ ಯುವಕರಿಗೆ ತರಬೇತಿ ನೀಡಿದೆ ಮತ್ತು 3000 ಹೊಸ ಐಟಿಐಗಳನ್ನು ಸ್ಥಾಪಿಸಿದೆ. ಪ್ರಮುಖವಾಗಿ 2014ರಲ್ಲಿ ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸಿದಾಗ ಹಲವು ಸವಾಲುಗಳಿದ್ದವು. ಸಾರ್ವಜನಿಕರ ಹಿತದೃಷ್ಟಿಯಿಂದ ಆರ್ಥಿಕತೆಯನ್ನು ಬಲಪಡಿಸಲು ಮತ್ತು ಜನರಿಗೆ ಉದ್ಯೋಗವನ್ನು ಪಡೆಯಲು ಅನೇಕ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಮಾಡಲಾಗಿದೆ. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯತ್ತ ಸರ್ಕಾರದ ಗಮನ ಕೇಂದ್ರೀಕರಿಸಿದೆ ಮತ್ತು ಎಲ್ಲಾ ವರ್ಗ ಮತ್ತು ಜನರ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯುತ್ತಿದೆ. 2047 ರ ವೇಳೆಗೆ ನಾವು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತೇವೆ. ಎಂದರು.

ಈಗಾಗಲೇ ಪ್ರಧಾನ ಮಂತ್ರಿ ಆವಾಸ್ ಅಡಿಯಲ್ಲಿ, ಗ್ರಾಮೀಣ ಪ್ರದೇಶದಲ್ಲಿ 70 ಪ್ರತಿಶತ ಮನೆಗಳನ್ನು ಮಹಿಳೆಯರಿಗೆ ನೀಡಲಾಗಿದೆ. ಇತ್ತಎಲ್ಲಾ ಮೂಲಭೂತ ಯೋಜನೆಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುತ್ತಿವೆ, ತೆರಿಗೆ ಸುಧಾರಣೆಗಳಿಂದ ತೆರಿಗೆ ವ್ಯಾಪ್ತಿ ಹೆಚ್ಚಿದೆ.  ಪ್ರಮುಖವಾಗಿ  ತ್ರಿವಳಿ ತಲಾಖ್ ಅನ್ನು ಕಾನೂನುಬಾಹಿರವಾಗಿಸುವುದು, ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 1/3 ಸ್ಥಾನಗಳನ್ನು ಮೀಸಲಿಡುವುದು, ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 70% ಕ್ಕಿಂತ ಹೆಚ್ಚು ಮನೆಗಳನ್ನು ನೀಡುವುದು ಅವರ ಘನತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಸರ್ಕಾರದ ಗಮನವು ಜಿಡಿಪಿ ಮೇಲೆ ಇದೆ ಎಂದು ಹಣಕಾಸು ಸಚಿವೆ ಸೀತಾರಾಮನ್ ಹೇಳಿದರು. ಸರ್ಕಾರವು ಆಡಳಿತ, ಅಭಿವೃದ್ಧಿ ಮತ್ತು ಕಾರ್ಯಕ್ಷಮತೆಯ ಮೇಲೆ ಸಮಾನವಾಗಿ ಗಮನಹರಿಸುತ್ತಿದೆ ಎಂದರು.

  • ₹7 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಿದ ಕೇಂದ್ರ ಸರ್ಕಾರ
  • ₹7 ಲಕ್ಷ ಆದಾಯ ಇರೋರಿಗೆ ತೆರಿಗೆ (ಟ್ಯಾಕ್ಸ್​) ಇಲ್ಲ
  • ಜನಸಂಖ್ಯೆ ಏರಿಕೆ ನಿಯಂತ್ರಣಕ್ಕೆ ಸಮಿತಿ ರಚನೆ
  • ಹೊಸ ಹೆದ್ದಾರಿಗಳ ನಿರ್ಮಾಣಕ್ಕೆ ನೀಲನಕ್ಷೆ
  • ಪ್ರವಾಸೋದ್ಯಮ 75 ಸಾವಿರ ಕೋಟಿ ಹಣ ಮೀಸಲು
  • ಟೂರಿಸಂ ಅಭಿವೃದ್ಧಿಗೆ ಬಡ್ಡಿ ರಹಿತ ಸಾಲ
  • ರಾಜ್ಯದ ಟೂರಿಸಂ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ
  • ಅಮೃತ ಕಾಲ, ಕರ್ತವ್ಯ ಕಾಲ ಆರ್ಥಿಕತೆಗೆ ಉತ್ತಮ ರೀತಿಯಲ್ಲಿ ಬೂಸ್ಟ್​
  • ಪ್ರವಾಸೋದ್ಯಮ ಕೇತ್ರದಲ್ಲಿ ಇದೀಗ ಭಾರೀ ಬದಲಾವಣೆ ಆಗಿದೆ
  • ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಗಮನ ಹರಿಸಿದೆ
  • ಎಲೆಕ್ಟ್ರಿಕಲ್​ ಬಸ್​, ವಾಹನಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ
  • 40 ಸಾವಿರ ರೈಲ್ವೆ ಕೋಚ್​ಗಳ ಬದಲಾವಣೆಗೆ ಕ್ರಮ ಕೈಗೊಂಡಿದ್ದೇವೆ
  • ಸಣ್ಣಪುಟ್ಟ ನಗರಗಳಿಗೂ ,ಮೆಟ್ರೋ ಯೋಜನೆ ವಿಸ್ತರಣೆ ಮಾಡಲಾಗುವುದು
  • ಮೆಟ್ರೋ ಮತ್ತು ನಮೋ ಭಾರತ್ ರೈಲ್ವೆಗೆ ಹೆಚ್ಚಿನ ಹೊತ್ತು
  • ವಿಮಾನಯಾನ ಕ್ಷೇತ್ರಕ್ಕೆ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡಲಾಗುತ್ತಿದೆ
  • ಸಂಶೋಧನೆ, ತಂತ್ರಜ್ಞಾನಕ್ಕೆ ಹೆಚ್ಚಿನ ಹೊತ್ತು
  • ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್
  • ದೆಶದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಬದಲಾವಣೆ ಆಗಿದೆ
  • ಲಕ್ಷ ದ್ವೀಪ ಸೇರಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲು ಸರ್ಕಾರ ನಿರ್ಧಾರ
  • ಮತ್ಸ್ಯ ಯೋಜನೆಯಿಂದ 55 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಸುವ ಗುರಿ
  • ಮತ್ಸ್ಯ ಸಂಪದ ಯೋಜನೆಯಿಂದ ಮೀನುಗಾರಿಕೆ ಲಾಭ
  • ಕಿಸಾನ್ ಸಂಪದದಿಂದ 38 ಲಕ್ಷ ರೈತರಿಗೆ ಲಾಭ
  • ಎಣ್ಣೆ ಕಾಳು ಉತ್ಪಾದನೆಯಲ್ಲಿ ಆತ್ಮನಿರ್ಭರ ಯೋಜನೆ ಗುರಿ
  • 43 ಕೋಟಿ ಸಾಲವನ್ನು ಮಂಜೂರು ಮಾಡಲಾಗಿದೆ
  • ಪ್ರಧಾನ ಮಂತ್ರಿ ಮುದ್ರಾಯೋಜನೆಯಡಿ ಸಾಲ ಮಂಜೂರು
  • ಲಕ್ಷಾಧಿಪತಿ ದೀದಿ ಯೋಜನೆ ಘೋಷಣೆ ಮಾಡಿದ ವಿತ್ತ ಸಚಿವೆ
  • 3 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಲು ಗುರಿ
  • 1 ಕೋಟಿ ಮಹಿಳೆಯರು ಈಗ ಲಕ್ಷಾಧಿಪತಿಗಳು ಆಗಿದ್ದಾರೆ
  • ದೇಶದಲ್ಲಿ ಮಹಿಳಾ ಉದ್ಯಮಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ
  • 9 ರಿಂದ 14 ವರ್ಷದ ಬಾಲಕಿಯರಿಗೆ ಲಸಿಕೆ ನೀಡಲು ಒತ್ತು
  • ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಈ ಯೋಜನೆ ಲಾಭ
  • ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆ
  • 300 ಯುನಿಟ್​ ವಿದ್ಯುತ್​ ಉತ್ದಾದನೆಯ ಸೌಲಭ್ಯ ಒದಗಿಸಲಾಗುವುದು
  • 1 ಕೋಟಿ ಮನೆಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಕೆ
  • ಪಿಎಂ ಆವಾಸ್ ಯೋಜನೆಯಲ್ಲಿ ಶೇ.70 ರಷ್ಟು ಮನೆ ನಿರ್ಮಾಣ ಮಾಡಲಾಗುವುದು
  • ಮುಂದಿನ 5 ವರ್ಷಗಳಲ್ಲಿ ಬಡವರಿಗಾಗಿ ಒಟ್ಟು 3 ಕೋಟಿ ಮನೆಗಳು ನಿರ್ಮಾಣ
  • ಉನ್ನತ ಶಿಕ್ಷಣ ಪಡೆಯುತ್ತಿರುವ ಮಹಿಳೆಯರ ಸಂಖ್ಯೆ ದೇಶದಲ್ಲಿ ಹೆಚ್ಚಾಗಿದೆ
  • NEP ಮೂಲಕ ಯುವಕರ ಅಭಿವೃದ್ಧಿಗೆ ಹೆಚ್ಚಿನ ಹೊತ್ತು
  • ಭಾರತದ ಆರ್ಥಿಕತೆ ಹಲವು ಸಕಾರಾತ್ಮಕ ಬದಲಾವಣೆ ಕಂಡಿದೆ
  • ಭಾರತೀಯರು ಭವಿಷ್ಯವನ್ನ ಭರವಸೆಯೊಂದಿಗೆ ಎದುರು ನೋಡ್ತಿದ್ದಾರೆ
  • ನರೇಂದ್ರ ಮೋದಿ ನಾಯಕತ್ವ ವಹಿಸಿದಾಗ ಸಾಕಷ್ಟು ಸವಾಲುಗಳಿದ್ದವು
  • ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದಿಂದ ಮುನ್ನಡೆಯುತ್ತಿದ್ದೇವೆ
  • ನಮ್ಮ ಆರ್ಥಿಕತೆ ಈಗ ಹೊಸ ಮಜಲುಗಳನ್ನ ಕಂಡುಕೊಳ್ಳುತ್ತಿದ್ದೇವೆ.
  • ವರ್ತಮಾನದ ಬಗ್ಗೆ ಹೆಮ್ಮೆ, ಭವಿಷ್ಯದ ಬಗ್ಗೆ ಭರವಸೆ ಈಗ ಜನರಲ್ಲಿದೆ
  • ಎಲ್ಲರನ್ನ ಒಳಗೊಂಡ ಅಭಿವೃದ್ಧಿಯೊಂದಿಗೆ ಗ್ರಾಮಗಳಿಗೂ ತಲುಪಿದ್ದೇವೆ
  • ಆಹಾರದ ಬಗ್ಗೆಗಿದ್ದ ಆತಂಕ, ಉಚಿತ ಆಹಾರ ಪದಾರ್ಥದಿಂದ ದೂರ ಮಾಡಲಾಗಿದೆ
  • ಅನ್ನದಾತರಿಗೆ ಎಂಎಸ್​ಪಿಯನ್ನ ನೀಡಲಾಗುತ್ತಿದೆ
  • ಸರ್ವಾಂಗೀಣ, ಸರ್ವ ಸ್ಪರ್ಶಿ, ಸರ್ವ ವೇಷ್ಠಿ ಗುರಿಯೊಂದಿಗೆ ಕೆಲಸ
  • ಈ ಮೂಲಕ 2047ರೊಳಗೆ ವಿಕಸಿತ ಭಾರತದ ಗುರಿ ಆಗಿದೆ
  • ಸಾಮಾಜಿಕ ನ್ಯಾಯ ಈ ಹಿಂದೆ ಕೇವಲ ರಾಜಕೀಯ ಹೇಳಿಕೆಯಾಗಿತ್ತು
  • ಸಾಮಾಜಿಕ ನ್ಯಾಯವನ್ನ ಒದಗಿಸುವುದು ನಮ್ಮ ಸರ್ಕಾರದ ಗುರಿ
  • ಭಾಯಿ, ಭತೀಜಾ ವಾದವನ್ನ ವಂಶಾಡಳಿತವನ್ನ ತಡೆಯಲಾಗುತ್ತಿದೆ
  • ನಾವು ಪ್ರಮುಖ ನಾಲ್ಕು ಅಂಶಗಳ ಬಗ್ಗೆ ಗಮನ ಹರಿಸಬೇಕು
  • ಬಡತನ, ಮಹಿಳೆಯರು, ಯುವ ಮತ್ತು ಅನ್ನದಾತರ ಮೇಲೆ ಗಮನ
  • ಈ ನಾಲ್ಕು ವರ್ಗಗಳ ಅಭಿವೃದ್ಧಿಯಾದ್ರೆ ದೇಶದ ಅಭಿವೃದ್ಧಿಯಾಗುತ್ತೆ
  • ಸಬ್ ಕಾ ಸಾಥ್​ನಿಂದಾಗಿ 25 ಕೋಟಿ ಜನರಿಗೆ ಬಡತನದಿಂದ ಸ್ವಾತಂತ್ರ್ಯ
  • 34 ಲಕ್ಷ ಕೋಟಿ ಹಣ ಜನಧನ್ ಖಾತೆ ಮೂಲಕ ನೇರ ಖಾತೆಗೆ
  • ಪಿಎಂ ಸ್ವ ನಿಧಿಯಿಂದ 78 ಲಕ್ಷ ಬೀದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು
  • ಪಿಎಂ ವಿಶ್ವಕರ್ಮ ಯೋಜನೆಯಿಂದ ಕುಶಲ ಕರ್ಮಿಗಳಿಗೆ ನೆರವು
  • ದಿವ್ಯಾಂಗ, ತೃತೀಯ ಲಿಂಗಿಗಳ ಕಲ್ಯಾಣಕ್ಕಾಗಿಯು ಯೋಜನೆಗಳು
  • ಪೂರ್ಣ ಪ್ರಮಾಣ ಬಜೆಟ್ ಜೂನ್ ತಿಂಗಳಲ್ಲಿ ಮಂಡಿಸಲಾಗುತ್ತೆ
  • ಹೊಸ ಸರ್ಕಾರ ರಚನೆಯಾದ ಬಳಿಕ ಮಂಡನೆಯಾಗಲಿದೆ ಬಜೆಟ್
  • ಈ ಮೂಲಕ 2047ರೊಳಗೆ ವಿಕಸಿತ ಭಾರತದ ಗುರಿ
    2024ನೇ ಸಾಲಿನ ಆರ್ಥಿಕ ವರ್ಷದಲ್ಲಿ GDP 5.8% ಕ್ಕೆ ಪರಿಷ್ಕರಿಸಲಾಗಿದೆ
    ನೇರ, ಪರೋಕ್ಷ ತೆರಿಗೆ ಹಾಗೂ ಆಮದು ಸುಂಕದಲ್ಲಿ ಯಾವುದೇ ಬದಲಾವಣೆ ಇಲ್ಲ
    ಲಕ್ಷದ್ವೀಪ ಸೇರಿ ದೇಶದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಶೇಷ ಪ್ರಾಜೆಕ್ಟ್
    ಮೆಟ್ರೋ ರೈಲು ಮತ್ತು ನಮೋ ಭಾರತ್‌ ವಿಸ್ತರಣೆ. ವಂದೇ ಭಾರತ್ ಕೋಚ್‌ಗಳಿಗೆ 40 ಸಾವಿರ ಬೋಗಿಗಳು.
    ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೂ ಆಯುಷ್ಮಾನ್ ಭಾರತ್ ವಿಸ್ತರಣೆ. ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಯ ಯೋಜನೆ.
    ರಕ್ಷಣಾ ವೆಚ್ಚವನ್ನು GDP ಯ 3.4% ಕ್ಕೆ ನಿಗದಿಪಡಿಸಲಾಗಿದೆ
    ಮಧ್ಯಮ ವರ್ಗ, ಕೊಳಗೇರಿ ನಿವಾಸಿಗಳಿಗೆ ವಸತಿ ನೆರವು
    ಜಾಗತಿಕವಾಗಿ ಸ್ಪರ್ಧೆಗಾಗಿ ಎಂಎಸ್‌ಎಂಇಗಳ ಬೆಳವಣಿಗೆಗೆ ಆದ್ಯತೆ
    ದೇಶದ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಆರ್ಥಿಕ ನೀತಿಗಳು
    ಮುಂದಿನ 5 ವರ್ಷಗಳಲ್ಲಿ 2047ಕ್ಕೆ ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಿಸುವ ದೃಷ್ಟಿಕೋನ

Ashitha S

Recent Posts

ಶಿಕಾರಿಗೆ ತೆರಳಿದ್ದ ಯುವಕನ ಮೇಲೆ ಮಿಸ್​​ ಫೈರ್; ಯುವಕ ಸಾವು

ಶಿಕಾರಿಗೆ ತೆರಳಿದ್ದ ಯುವಕನ ಮೇಲೆ ಮಿಸ್ ಫೈರ್ ಆದ ಘಟನೆ ಚಿಕ್ಕಮಗಳೂರಿನ ತಾಲೂಕಿನ ಉಲುವಾಗಿಲು ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟದಲ್ಲಿ…

10 seconds ago

ಖಾರವಾದ ಚಿಪ್ಸ್ ತಿಂದ 14ರ ಬಾಲಕನಿಗೆ ಹೃದಯ ಸ್ತಂಭನ

ಅತ್ಯಂತ ಖಾರವಾದ ಟೋರ್ಟಿಲ್ಲಾ ಚಿಪ್ ತಿನ್ನುವ ಸಾಮಾಜಿಕ ಮಾಧ್ಯಮ ಚಾಲೆಂಜ್‌ ನಲ್ಲಿ ಭಾಗವಹಿಸಿದ ಅಮೆರಿಕದ 14ರ ಹರೆಯದ ಹುಡುಗನೊಬ್ಬ ಹೃದಯ…

15 mins ago

ನಂಜನಗೂಡು ಶ್ರೀ ನಂಜುಂಡೇಶ್ವರನ ದರ್ಶನ ಪಡೆದ ಹೆಚ್. ಡಿ ರೇವಣ್ಣ

ಮಹಿಳೆ ಕಿಡ್ನಾಪ್ ಕೇಸ್ ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಮಾಜಿ ಸಚಿವ ಹೆಚ್.…

32 mins ago

ʼನನ್ನನ್ನು ನೋಡಬೇಡಿ, ಅಟಲ್‌ ಸೇತುವೆ ನೋಡಿʼ ಎಂದ ರಶ್ಮಿಕಾಗೆ ಪಿಎಂ ಮೋದಿ ಮೆಚ್ಚುಗೆ

ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ಸಿನಿಮಾಗಳು.…

1 hour ago

ಗಮನ ಸೆಳೆದ ಮಾವು ಮೇಳ; ವಿವಿಧ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ

ಹಣ್ಣುಗಳ ರಾಜನೆಂದು ಕರೆಯಲಾಗುವ, ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ…

1 hour ago

ಇಂದು ರೀ ರಿಲೀಸ್ ಆದ ಉಪ್ಪಿಯ ‘‘A’’ ಸಿನಿಮಾ; ಸ್ವಾಗತಿಸಿದ ಫ್ಯಾನ್ಸ್

ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A” ಸಿನಿಮಾ ಇಂದು ರೀ ರಿಲೀಸ್​ ಆಗಿದೆ. ಬೆಂಗಳೂರಿನ…

2 hours ago