News Karnataka Kannada
Monday, April 22 2024
Cricket
ದೇಶ

2ನೇ ವಿಶ್ವಯುದ್ಧ ವೇಳೆ ಹೋರಾಡಿದ್ದ ಹಿರಿಯ ಸಿಖ್ ಸೈನಿಕರನ್ನು ಗೌರವಿಸಿದ ಪ್ರಧಾನಿ ರಿಷಿ

UK PM Rishi Sunak
Photo Credit : Twitter
ಲಂಡನ್: ಎರಡನೇ ವಿಶ್ವ ಯುದ್ಧದಲ್ಲಿ ಹೋರಾಡಿದ ಬದುಕುಳಿದವರಲ್ಲಿ ಕೊನೆಯ ಸಿಖ್ ಸೈನಿಕ ರಾಜೀಂದರ್ ಸಿಂಗ್ ದತ್ತ್ ರನ್ನು ಬ್ರಿಟನ್ ಪ್ರಧಾನ ಮಂತ್ರಿ ರಿಷಿ ಸುನಕ್  ಅವರು ಲಂಡನ್ ನಲ್ಲಿರುವ ತಮ್ಮ ಅಧಿಕೃತ ನಿವಾಸ 10 ಡೌನಿಂಗ್ ಸ್ಟ್ರೀಟ್ನಲ್ಲಿ ನಡೆದ ಯುಕೆ-ಇಂಡಿಯಾ ವೀಕ್ ಸಮಾರಂಭದಲ್ಲಿ ಪಾಯಿಂಟ್ಸ್ ಆಫ್ ಲೈಟ್ ಪದವಿ ಗೌರವದೊಂದಿಗೆ ಸನ್ಮಾನಿಸಿದ್ದಾರೆ.

101 ವರ್ಷದ ದತ್ತ್ ಅವರು ಸೇನೆಗೆ ನೀಡಿರುವ ಸೇವೆ “ಅವಿಭಜಿತ ಭಾರತೀಯ ಮಾಜಿ ಸೈನಿಕರ ಸಂಘ”ದಲ್ಲಿ ಮಾಡಿರುವ ಕೆಲಸವನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ದತ್ತ್ ಅವರು ಬ್ರಿಟನ್ ಮತ್ತು ಭಾರತೀಯ ಮಾಜಿ ಸೈನಿಕರನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 1963ನೇ ಇಸವಿಯಿಂದ ನೈಋತ್ಯ ಲಂಡನ್ನ ಹೌನ್ಸ್ಲೋದಲ್ಲಿ ನೆಲೆಸಿರುವ ದತ್ತ್, 1921 ರಲ್ಲಿ ವಿಭಜನೆ ಪೂರ್ವ ಭಾರತದಲ್ಲಿ ಜನಿಸಿದ್ದರು. ಬ್ರಿಟಿಷ್ ವಸಾಹತುಶಾಹಿ ಅವಧಿಯಲ್ಲಿ ಮಿತ್ರ ಸೇನೆಗಳೊಂದಿಗೆ ಹೋರಾಡಿದ್ದರು.

“ಬ್ರಿಟನ್ ಪ್ರಧಾನಿ ಅವರಿಂದ ಈ ಮನ್ನಣೆಯನ್ನು ಪಡೆಯುತ್ತಿರುವುದು ಅಪಾರ ಗೌರವವಾಗಿದ್ದು ಸಂತೋಷವಾಗುತ್ತಿದೆ. ‘ಅವಿಭಜಿತ ಭಾರತೀಯ ಮಾಜಿ ಸೈನಿಕರ ಸಂಘ’ದ ಪ್ರಾಮುಖ್ಯತೆ ಮತ್ತು ಪ್ರಭಾವವನ್ನು ಮನಗಂಡಿದ್ದಕ್ಕಾಗಿ ಅವರಿಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ” ಎಂದು ದತ್ತ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು