News Karnataka Kannada
Wednesday, May 01 2024
ತ್ರಿಪುರ

ಮಾಜಿ ಮಿಸ್‌ ಇಂಡಿಯಾ ತಾರೆ ರಿಂಕಿ ಚಕ್ಮಾ ನಿಧನ

ಅಗರ್ತಲಾ: ತ್ರಿಪುರಾ ಮೂಲದ ಮಾಜಿ ಮಿಸ್‌ ಇಂಡಿಯಾ ತಾರೆ ರಿಂಕಿ ಚಕ್ಮಾ  (28) ನಿಧನರಾಗಿದ್ದಾರೆ.
Photo Credit : News Kannada

ಅಗರ್ತಲಾ: ತ್ರಿಪುರಾ ಮೂಲದ ಮಾಜಿ ಮಿಸ್‌ ಇಂಡಿಯಾ ತಾರೆ ರಿಂಕಿ ಚಕ್ಮಾ  (28) ನಿಧನರಾಗಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಶಸ್ತ್ರಚಿಕಿತ್ಸೆ ಬಳಿಕವು ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

ಶಸ್ತ್ರಚಿಕಿತ್ಸೆ ಬಳಿಕ ಚಿಕಿತ್ಸಾ ವಿಧಾನಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದ ಚಕ್ಮಾ, ಶೀಘ್ರ ಗುಣಮುಖವಾಗಿ ಮತ್ತೆ ಸಹಜ ಜೀವನಕ್ಕೆ ಮರಳುತ್ತೇನೆ ಅನ್ನೋ ಭರವಸೆಯಲ್ಲಿದ್ದರು. ಆದ್ರೆ ಆಕೆ ಗುಣಮುಖಳಾಗುವುದಿಲ್ಲ ಎಂದು ತಿಳಿದ ನಂತರ ತನಗೆ ಸ್ತನ ಕ್ಯಾನ್ಸರ್‌ ಇರೋದನ್ನ ಬಹಿರಂಗಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫೆಮಿನಾ ಮಿಸ್‌ ಇಂಡಿಯಾ  ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಕಷ್ಟದ ಸಮಯದಲ್ಲಿ ಚಕ್ಮಾ ಕುಟುಂಬಸ್ಥರು ಹಾಗೂ ಆಪ್ತರಿಗೆ ದುಃಖ ತಡೆದುಕೊಳ್ಳುವ ಶಕ್ತಿ ದೇವರು ಕೊಡಲಿ ಎಂದು ಬಂಧುಮಿತ್ರರು ಸಂತಾಪ ಸೂಚಿಸಿದ್ದಾರೆ.

ಚಕ್ಮಾ ಮೊದಲ ಬಾರಿಗೆ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಶ್ವಾಸಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡಿತು, ತಲೆ ಭಾಗದಲ್ಲಿ ಗಡ್ಡೆ ಬೆಳೆಯಿತು (ಮೆದುಳಿನ ಗಡ್ಡೆ). ಇದರಿಂದ ಕಿಮೋಥೆರಪಿಗೆ ಒಳಗಾಗಿದ್ದರು. ಈ ವೇಳೆ ಕುಟುಂಬದಲ್ಲಿ ಆರ್ಥಿಕ ಸಮಸ್ಯೆಯೂ ಉಂಟಾಗಿ ಇದ್ದ ಹಣವೆಲ್ಲ ಖಾಲಿಯಾಯ್ತು. ನಂತರ ಮೆದುಳಿನ ಶಸ್ತ್ರಚಿಕಿತ್ಸೆಗಾಗಿ ದೇಣಿಗೆ ಸಂಗ್ರಹಿಸಲು ಶುರು ಮಾಡಿದರು. ಅಷ್ಟರಲ್ಲೇ ಚಕ್ಮಾ ನಿಧನರಾದರು.

ರಿಂಕಿ ಚಕ್ಮಾ ಅವರು 2017 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ‘ಬ್ಯೂಟಿ ವಿತ್ ಎ ಪರ್ಪಸ್’ ಪ್ರಶಸ್ತಿಯನ್ನು ಗಳಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು