ತ್ರಿಪುರ

ಮದ್ಯದ ಅಮಲಿನಲ್ಲಿ ಆಲ್ಕೋಹಾಲ್ ಎಂದು ಆಸಿಡ್ ಕುಡಿದು ವ್ಯಕ್ತಿ ಸಾವು

ಅಗರ್ತಲಾ : ವ್ಯಕ್ತಿಯೊಬ್ಬರು ಆಲ್ಕೋಹಾಲ್ ಎಂದು ಭಾವಿಸಿ ಆಸಿಡ್ ಕುಡಿದು ಸಾವನ್ನಪ್ಪಿರುವ ಘಟನೆ ನಡೆದಿದೆ.

ತ್ರಿಪುರಾದ ಖೋವೈ ಜಿಲ್ಲೆಯ ಲಂಕಾಪುರ ಎಡಿಸಿ ಗ್ರಾಮದಲ್ಲಿ 55 ವರ್ಷದ ವ್ಯಕ್ತಿಯೊಬ್ಬ ಆಸಿಡ್ ಸೇವಿಸಿ ಸಾವನ್ನಪ್ಪಿದ್ದಾರೆ. ಕಾರ್ತಿಕ್ ಮೋಹನ್ ದೆಬ್ಬರ್ಮ ಎಂಬ ವ್ಯಕ್ತಿಯೇ ಸಾವನ್ನಪ್ಪಿರುವ ವ್ಯಕ್ತಿ  ಗುರುತಿಸಲಾಗಿದೆ. ಮದ್ಯದ ಅಮಲಿನಲ್ಲಿ ಆಸಿಡ್ ತುಂಬಿದ ಬಾಟಲಿಯನ್ನು ಕುಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ದೆಬ್ಬರ್ಮ ದಿನನಿತ್ಯ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿದ್ದ. ಶುಕ್ರವಾರ ರಾತ್ರಿ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ.

ದೆಬ್ಬರ್ಮ ಸ್ಥಳೀಯ ಹಳ್ಳಿಗಾಡಿನ ಮದ್ಯದ ಅಂಗಡಿಯಲ್ಲಿ ಅತಿಯಾಗಿ ಕುಡಿದಿದ್ದು, ಮನೆಗೆ ಹೋಗಿ ಮಲಗಿದ್ದಾನೆ. ಮಧ್ಯರಾತ್ರಿ ಎದ್ದು, ಮದ್ಯ ಕುಡಿಯಲು ಹುಡುಕಾಡಿದ್ದಾನೆ. ಆದರೆ ಆತನ ಕೈಗೆ ಮನೆಯಲ್ಲಿದ್ದ ಆಸಿಡ್ ಬಾಟಲಿ ಸಿಕ್ಕಿದೆ. ಅದನ್ನೇ ಮದ್ಯ ಎಂದು ತಿಳಿದ ಕುಡಿದಿದ್ದಾನೆ ಎನ್ನಲಾಗಿದೆ.

ಆಸಿಡ್ ಕುಡಿದ ತಕ್ಷಣ ದೆಬ್ಬರ್ಮ ಪ್ರಜ್ಞಾಹೀನನಾಗಿದ್ದಾನೆ. ದೆಬ್ಬರ್ಮ ಕುಟುಂಬ ಸದಸ್ಯರು ಆತ ಪ್ರಜ್ಞಾಹೀನನಾಗಿರುವುದನ್ನು ನೋಡಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿದ್ದಾರೆ. ವೈದ್ಯರು ಆತ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.

Gayathri SG

Recent Posts

ಕೇಸೋರಾಮ್ ಇಂಡಸ್ಟ್ರೀಸ್ ಮುಖ್ಯಸ್ಥೆ ಮಂಜುಶ್ರೀ ಖೇತಾನ್ ವಿಧಿವಶ

ಬಿಕೆ ಬಿರ್ಲಾ ಒಡೆತನದ ಕೇಸೋರಾಮ್ ಇಂಡಸ್ಟ್ರೀಸ್ ಸಂಸ್ಥೆಯ ಛೇರ್ಮನ್ ಆಗಿದ್ದ ಮಂಜುಶ್ರೀ ಖೇತಾನ್ ನಿಧನರಾಗಿದ್ದಾರೆ.

2 mins ago

ಡಿವೈಡರ್‌ಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ಮೃತ್ಯು

ಭೀಕರ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಬೆಂಗಳೂರಲ್ಲಿ ನಡೆದಿದೆ.

10 mins ago

ಎಸ್‌ಎಸ್‌ಎಲ್‌ಸಿ ಗ್ರೇಸ್ ಮಾರ್ಕ್ಸ್‌ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧಾರ

ಈ ಬಾರಿಯ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಶೇಕಡಾ 20ರಷ್ಟು ಗ್ರೇಸ್‌ ಮಾರ್ಕ್ಸ್ ಕೊಟ್ಟು ವಿದ್ಯಾರ್ಥಿಗಳನ್ನ ಪಾಸ್ ಮಾಡಿದ್ದು…

13 mins ago

ಅಡುಗೆ ಮಾಡುತಿದ್ದ ವೇಳೆ ಗ್ಯಾಸ್‌ ಸಿಲಿಂಡರ್ ಸ್ಫೋಟ: ಮನೆಯ ವಸ್ತುಗಳು ಬೆಂಕಿಗಾಹುತಿ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ನಂದನಗದ್ದಾದಲ್ಲಿ ಮನೆಯಲ್ಲಿ ಅಡುಗೆ ಮಾಡುತಿದ್ದ ವೇಳೆ ಗ್ಯಾಸ್‌ ಸಿಲಿಂಡರ್ ಸ್ಫೋಟಗೊಂಡ ಘಟನೆ ನಡೆದಿದೆ.

21 mins ago

ಪಂದ್ಯದ ವೇಳೆ ಮಳೆ ಬಾರದಂತೆ ಆರ್​ಸಿಬಿ ಆಟಗಾರರಿಂದ ಕೃಷ್ಣ ನಾಮ ಜಪ

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ನಾಳೆ ನಡೆಯುವ ಮಹತ್ವದ ಪಂದ್ಯದಲ್ಲಿ ಆರ್​ಸಿಬಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದ್ದರೂ ಕೂಡ ಪಂದ್ಯಕ್ಕೆ ಮಳೆ…

29 mins ago

ಪುತ್ತೂರು: ಹೋರಿಗಾಗಿ ದೈವದ ಮೊರೆ ಹೋದ ಬಜರಂಗದಳ

ಇಲ್ಲಿನ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ತಿರುಗಾಡುತ್ತಿದ್ದ ಹೋರಿಗಳು ಮೇ.1 ರಿಂದ ನಾಪತ್ತೆಯಾಗಿರುವ ಘಟನೆಯೊಂದು ವರದಿಯಾಗಿದೆ. ಇದರ ಪತ್ತೆಗಾಗಿ ಬಜರಂಗದಳ ಇದೀಗ…

44 mins ago