News Karnataka Kannada
Tuesday, April 30 2024
ತ್ರಿಪುರ

ತ್ರಿಪುರಾ: ಪ್ರವಾಸೋದ್ಯಮವನ್ನು ಉತ್ತೇಜಿಸಲು ದುಂಬೂರ್ ಸರೋವರಕ್ಕೆ ಆಗಮಿಸಲಿದೆ ʻಹೌಸ್‌ಬೋಟ್‌ʼ

Housing Boat
Photo Credit : News Kannada

ತ್ರಿಪುರ: ತ್ರಿಪುರ ಸರ್ಕಾರವು ರಾಜ್ಯದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ,  98 ಕಿಮೀ ದೂರದಲ್ಲಿರುವ ತ್ರಿಪುರಾದ ಗೋಮತಿ ಜಿಲ್ಲೆಯ ದುಂಬೂರ್ ಸರೋವರದಲ್ಲಿ ಐದು ದ್ವೀಪಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆ.ಜೊತೆಗೆ ಹೌಸ್‌ಬೋಟ್‌ಗಳನ್ನು ಪರಿಚಯಿಸಿದೆ.

ತ್ರಿಪುರದಲ್ಲಿ ಮೊದಲ ಬಾರಿಗೆ ಪ್ರವಾಸೋದ್ಯಮ ಉದ್ದೇಶಕ್ಕಾಗಿ ದುಂಬೂರಿನಲ್ಲಿ ಸಾಹಸ ಕ್ರೀಡಾ ಚಟುವಟಿಕೆಗಳು ಮತ್ತು 5 ದ್ವೀಪಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ 7.38 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ.

ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರು ಟ್ವಿಟರ್‌ನಲ್ಲಿ ಸಾಹಸ ಕ್ರೀಡಾ ಚಟುವಟಿಕೆಗಳನ್ನು ಒಳಗೊಂಡಂತೆ 7.38 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಹಂಚಿಕೊಂಡಿದ್ದಾರೆ.

ಈಗಾಗಲೇ ಹೌಸ್‌ಬೋಟ್‌ಗಳ ಖರೀದಿ ಪೈಪ್‌ಲೈನ್‌ನಲ್ಲಿದೆ ಎಂದು ಸಿಎಂ ತಿಳಿಸಿದ್ದಾರೆ. ಅಧಿಕಾರಿಗಳು ದೇಶದ ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿ ಲಭ್ಯವಿರುವ ಎಲ್ಲಾ ಸಾಹಸ ಚಟುವಟಿಕೆಗಳನ್ನು ಅನ್ವೇಷಿಸುತ್ತಿದ್ದಾರೆ ಮತ್ತು ಸರ್ಕಾರವು ಆ ಮೂಲಸೌಕರ್ಯಗಳನ್ನು ರಾಜ್ಯದಲ್ಲಿಯೂ ನಿರ್ಮಿಸಲಿದೆ ಎಂದು ಅವರು ಮಾಹಿತಿ ನೀಡಿದರು.

ಏತನ್ಮಧ್ಯೆ, ತ್ರಿಪುರಾ ಪ್ರವಾಸೋದ್ಯಮ ಇಲಾಖೆಯು ದುಂಬೂರ್ ಸರೋವರಕ್ಕಾಗಿ ಹೌಸ್‌ಬೋಟ್‌ಗಳನ್ನು ಖರೀದಿಸಲು ಹೊರಟಿದೆ ಎಂದು ಮಾಹಿತಿ ನೀಡಿದೆ. ಕೇರಳ ಪ್ರವಾಸೋದ್ಯಮದೊಂದಿಗೆ ಪತ್ರವ್ಯವಹಾರ ನಡೆಸಲಾಗಿದೆ ಮತ್ತು ನಾವು ಅದನ್ನು ದುಂಬೂರಿನ ಸುಂದರವಾದ ನೀಲಿ ನೀರಿನಲ್ಲಿ ಪ್ರಾರಂಭಿಸಲು ನಿರೀಕ್ಷಿಸುತ್ತಿದ್ದೇವೆ ಎಂದು ಇಲಾಖೆ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು