Categories: ದೇಶ

ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾದ ಎಲ್ಲ ಮತದಾರರಿಗೆ ಕೃತಜ್ಞತೆ ಎಂದ ಪ್ರಧಾನಿ

ವದೆಹಲಿ: ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ನಡೆದ ಮತದಾನ ಅದ್ಭುತವಾಗಿದ್ದು, ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾದ ಎಲ್ಲ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ನಡೆದಿತ್ತು.

‘ಮತ ಚಲಾಯಿಸಿದ ದೇಶದಾದ್ಯಂತದ ಜನರಿಗೆ ಕೃತಜ್ಞತೆಗಳು. ಎನ್‌ಡಿಎಗೆ ಸಿಕ್ಕಿರುವ ಭಾರೀ ಜನಬೆಂಬಲವು ವಿರೋಧಪಕ್ಷಗಳನ್ನು ಇನ್ನಷ್ಟು ಹತಾಶೆಗೊಳಿಸಲಿದೆ. ಮತದಾರರು ಎನ್‌ಡಿಎಯ ಉತ್ತಮ ಆಡಳಿತವನ್ನು ಬಯಸುತ್ತಾರೆ. ಯುವಕರು ಮತ್ತು ಮಹಿಳಾ ಮತದಾರರು ಪ್ರಬಲ ಎನ್‌ಡಿಎ ಬೆಂಬಲಕ್ಕೆ ಶಕ್ತಿ ತುಂಬುತ್ತಿದ್ದಾರೆ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೇರಳದ ಎಲ್ಲ 20 ಕ್ಷೇತ್ರಗಳು ಸೇರಿದಂತೆ ರಾಜಸ್ಥಾನದ 13, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ತಲಾ 8, ಮಧ್ಯಪ್ರದೇಶದಲ್ಲಿ 7, ಬಿಹಾರ ಮತ್ತು ಅಸ್ಸಾಂನಲ್ಲಿ ತಲಾ 5, ಛತ್ತೀಸಗಡ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 3 ಹಾಗೂ ಮಣಿಪುರ, ತ್ರಿಪುರಾ, ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ 1 ಕ್ಷೇತ್ರಗಳಲ್ಲಿಯೂ ಮತದಾನ ನಡೆದಿತ್ತು.

Ashitha S

Recent Posts

ಅಧಿಕಾರಿಗಳಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಮತದಾನದ ಆರೋಪ: ಸ್ಥಳಕ್ಕೆ ಉಮೇಶ ಜಾಧವ್ ಭೇಟಿ

ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…

4 hours ago

ಅತನೂರ ಗ್ರಾಮದಲ್ಲಿ ಸರ್ವಧರ್ಮಗಳ ಆರಾಧ್ಯದೈವ ನಂದಿ ಬಸವನ ಜಾತ್ರೆಯ ಸಡಗರ

ಅಫಜಲಪುರ ತಾಲೂಕಿನ ಅತನೂರ ಗ್ರಾಮದಲ್ಲಿ ಗ್ರಾಮದೇವ ನಂದಿ ಬಸವೇಶ್ವರ ಜಾತ್ರೆಯು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರು ತಿಳಿಸಿದರು.

5 hours ago

ಪ್ರೀತಿಸಿ ಮದುವೆಯಾದ ಅನ್ಯಕೋಮಿನ ಜೋಡಿ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…

5 hours ago

ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಹತ್ಯೆ

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ  ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

5 hours ago

ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…

6 hours ago

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

6 hours ago