News Karnataka Kannada
Saturday, April 20 2024
Cricket
ದೇಶ

ದೇವಳ ಸರಕಾರಿಕರಣ ಮಾಡಿದಂತೆ ಮಸೀದಿಗಳನ್ನು ಏಕೆ ಮಾಡುವುದಿಲ್ಲ? ಪುಷ್ಪೇಂದ್ರ ಕುಲಶ್ರೇಷ್ಠ ಪ್ರಶ್ನೆ

Temple Culture Protection Meeting in Mumbai
Photo Credit : News Kannada

ಮುಂಬೈ: ಹಿಂದೂ ಬಾಂಧವರು ಹಿಂದೂ ರಾಷ್ಟ್ರದ ಬೇಡಿಕೆಗಾಗಿ ಸರಕಾರವನ್ನು ಅವಲಂಬಿಸಿಕೊಂಡಿದ್ದಾರೆ, ಆದರೆ ಒಂದು ಜನಾಂಗವು ತಮಗೆ ಬೇಕಾದುದೆಲ್ಲವನ್ನೂ ಸರಕಾರದಿಂದ ಮಾಡಿಸಿಕೊಳ್ಳುತ್ತದೆ. ಅಧಿಕಾರದಲ್ಲಿ ಹಿಂದೂಗಳಿದ್ದರು ಕೂಡ ಈ ಜನರ ವಿಚಾರಕ್ಕನುಸಾರವಾಗಿಯೇ ಸರಕಾರ ಕಾರ್ಯಾಚರಿಸುತ್ತದೆ. ನಮ್ಮ ದೇಶವು ಯಾವುದೇ ಭಯೋತ್ಪಾದಕರಿಂದ ನಡೆಸಲ್ಪಡುತ್ತಿಲ್ಲ. ಆದರೂ ಕೂಡ ಅನೇಕ ಬಾರಿ ಹಿಂದೂ ವಿರೋಧಿ ನಿಲುವು ಏಕೆ ತಾಳಲಾಗುತ್ತದೆ ಎಂದು ಹಿರಿಯ ಪತ್ರಕರ್ತರಾದ ಪುಷ್ಪೇಂದ್ರ ಕುಲಶ್ರೇಷ್ಠ ಪ್ರಶ್ನಿಸಿದರು.

ಗೌಡ ಸಾರಸ್ವತ ಬ್ರಾಹ್ಮಣ ಟೆಂಪಲ್ ಟ್ರಸ್ಟ್, ಮಹಾರಾಷ್ಟ್ರ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮುಂಬೈಯ ದಾದರನಲ್ಲಿರುವ ಸ್ವಾತಂತ್ರ್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕ ಭವನದಲ್ಲಿ ಆಯೋಜಿಸಲಾದ ಮಂದಿರ ಸಂಸ್ಕೃತಿ ರಕ್ಷಣೆ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ದೇವಸ್ಥಾನಗಳ ಸರಕಾರಿಕರಣವನ್ನು ಯಾರು ಮಾಡಿದರು? ದೇವಸ್ಥಾನಗಳ ಹಾಗೆ ಸರಕಾರ ಮಸೀದಿಗಳನ್ನು ಏಕೆ ವಶಪಡಿಸಿಕೊಳ್ಳಲಿಲ್ಲ ? ಎಂದು ಪ್ರಶ್ನಿಸಿದರು.

ಪುಷ್ಪೇಂದ್ರ ಕುಲಶ್ರೇಷ್ಠ ಅವರು ಮಾತು ಮುಂದುವರಿಸುತ್ತಾ, ಕಾಶ್ಮೀರದಿಂದ ಕಾಶ್ಮೀರಿ ಪಂಡಿತರ ಪಲಾಯನವಾಯಿತು, ಇದನ್ನು ಓದಿ ಕೂಡ ನಾವು ಮೌನವಾಗಿ ಕುಳಿತೆವು. ಗಾಜಿಯಾಬಾದಿನಲ್ಲಿ ಅಖಲಾಖನ ಗುಂಪಿನಿಂದ ಹತ್ಯೆಗಳು ನಡೆದ ನಂತರ ಜಗತ್ತಿನಾದ್ಯಂತ ಪ್ರತಿಭಟನೆ ನಡೆಸಲಾಯಿತು ; ಆದರೆ ದೇಶದ ಸ್ವಾತಂತ್ರದ ನಂತರ ೪೭೭ ಹಿಂದೂ ಯುವಕ ಯುವತಿಯರನ್ನು ಗುಂಪುಕಟ್ಟಿ ಕೊಲ್ಲಲಾಯಿತು (ಮಾಬ್ ಲಿಚಿಂಗ್).ಅದರ ಬಗ್ಗೆ ಯಾರೂ ಧ್ವನಿಯೆತ್ತಲಿಲ್ಲ. ದೇಶದಲ್ಲಿ ೮೫ ಕೋಟಿ ಹಿಂದುಗಳಿರುವಾಗಲೂ ಈ ರೀತಿಯ ಘಟನೆಗಳು ನಡೆಯುತ್ತವೆ. ಆದ್ದರಿಂದ ಹಿಂದುತ್ವದ ಹಿತಕ್ಕಾಗಿ ಹಿಂದೂಗಳೇ ಕಾರ್ಯ ಮಾಡುವುದು ಆವಶ್ಯಕವಾಗಿದೆ. ಹಿಂದೂಗಳು ಯಾವ ರೀತಿ ಶಕ್ತಿ ನಿರ್ಮಾಣ ಮಾಡಬೇಕೆಂದರೆ, ಈ ಸರಕಾರ ನಮ್ಮ ಹೇಳಿಕೆಯ ಪ್ರಕಾರ ನಡೆಯಬೇಕು ಎಂದರು.

ಗಣೇಶೋತ್ಸವ ಮತ್ತು ಹಿಂದೂಗಳ ಹಬ್ಬ ಉತ್ಸವದಲ್ಲಿ ಮಾಲಿನ್ಯ ಆಗುತ್ತದೆ, ಎಂಬ ಭ್ರಮೆಯಿಂದ ಹಿಂದೂಗಳು ಹೊರಬಂದು ತಮ್ಮ ಹಬ್ಬ ಉತ್ಸವಗಳನ್ನು ಆಚರಿಸಬೇಕು ಎಂದು ಕೋಚರೆಕರ ಹೇಳಿದರು.

ಕಾರ್ಯಕ್ರಮವನ್ನು ಶ್ರೀಗಣೇಶನ ಶ್ಲೋಕ, ಶಂಖನಾದ, ವೇದಮಂತ್ರ ಪಠಣ ಮತ್ತು ಗಣ್ಯರಿಂದ ದೀಪ ಪ್ರಜ್ವಲನೆ ಮಾಡಿ ಆರಂಭಿಸಲಾಯಿತು. ವೇದಿಕೆಯಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಟೆಂಪಲ್ ಟ್ರಸ್ಟಿನ ಅಧ್ಯಕ್ಷ ಪ್ರವೀಣ ಕಾನವಿಂದೆ, ಟ್ರಸ್ಟಿನ ಸಚಿವರಾದ ಶಶಾಂಕ ಗುಳಗುಳೆ, ಮನಸೇಯ ನಾಯಕರಾದ ನಿತಿನ ಸರದೇಸಾಯಿ, ಮುಂಬೈಯ ಸರ್ಜನ್ ಡಾ. ಅಮಿತ ತಡಾನಿ, ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್ಸಗಡ ರಾಜ್ಯ ಸಂಘಟಕರಾದ ಸುನಿಲ ಘನವಟ ಮತ್ತು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾದ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರಗಳ ಗಣ್ಯರ ಸಹಿತ ರಾಷ್ಟ್ರ ಮತ್ತು ಧರ್ಮಪ್ರೇಮಿಗಳು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಪುಸ್ತಕ ಬಿಡುಗಡೆ: ಈ ಸಮಯದಲ್ಲಿ ಮುಂಬೈಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿನ ಭ್ರಷ್ಟಾಚಾರ ಬೆಳಕಿಗೆ ತಂದಿರುವ ಸುಪ್ರಸಿದ್ಧ ಸರ್ಜನ್ ಡಾಕ್ಟರ್ ಅಮಿತ್ ತಡಾನಿ ಇವರು ಬರೆದಿರುವ ‘ದಾಬೋಲಕರ್ – ಪಾನಸರೇ ಹತ್ಯೆ : ಸಮೀಕ್ಷೆಯಲ್ಲಿ ನ ರಹಸ್ಯಗಳು’ ಎಂಬ ಮರಾಠಿ ಪುಸ್ತಕವನ್ನು ಗಣ್ಯರಿಂದ ಬಿಡುಗಡೆ ಮಾಡಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು