ಕಾಮರೆಡ್ಡಿ: ಕಾಮರೆಡ್ಡಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಚಿಕಿತ್ಸೆ ಪಡೆಯುತ್ತಿದ್ದ ಹೌಸಿಂಗ್ ಬೋರ್ಡ್ ಕಾಲೋನಿಯ ಶೇಖ್ ಮುಜೀಜ್ ಎಂಬ ವ್ಯಕ್ತಿಗೆ ಇಲಿ ಕಚ್ಚಿಕೊಂಡು, ಅಸ್ವಸ್ಥಗೊಂಡಿದ್ದಾರೆ.
ಈ ವ್ಯಕ್ತಿ ಕಳೆದೊಂದು ವಾರದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರೋಗಿಯ ಕಾಲು ಮತ್ತು ತೋಳುಗಳಿಗೆ ಇಲಿ ಕಚ್ಚಿದ್ದು ತೀವ್ರ ರಕ್ತಸ್ರಾವವಾಗಿದೆ. ಇದನ್ನು ಗಮನಿಸಿದ ಕುಟುಂಬ ಸದಸ್ಯರು ಕೂಡಲೇ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಐಸಿಯುನ ಪಿಒಪಿ ವಿಭಾಗ ಹಾಳಾಗಿದ್ದು, ರಂಧ್ರದಲ್ಲಿ ಇಲಿಗಳು ಓಡಾಡುತ್ತಿವೆ ಎಂದು ರೋಗಿಗಳ ಕುಟುಂಬಸ್ಥರು ತಿಳಿಸಿದ್ದಾರೆ.
ಇನ್ನಾದರೂ ಇಲಿಗಳ ಕಾಟದಿಂದ ರೋಗಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಆಸ್ಪತ್ರೆ ಸಿಬ್ಬಂದಿ ಆಗ್ರಹ ಮಾಡಿದ್ದಾರೆ.