News Karnataka Kannada
Monday, April 29 2024
ತೆಲಂಗಾಣ

ಐಫೋನ್ ಉತ್ಪಾದನೆ ತಾತ್ಕಾಲಿಕವಾಗಿ ಸ್ಥಗಿತ

ಚೆನ್ನೈನಲ್ಲಿ ಚಂಡಮಾರುತದ ಪರಿಣಾಮ ಭಾರೀ ಮಳೆ ಬರುತ್ತಿರುವ ಪರಿಣಾಮ ಅಲ್ಲಿನ ಔದ್ಯಮಿಕ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿವೆ. ಇಲ್ಲಿನ ಎರಡು ಐಫೋನ್ ತಯಾರಕಾ ಸಂಸ್ಥೆಗಳ ಘಟಕಗಳು ತಾತ್ಕಾಲಿಕವಾಗಿ ನಿಂತಿವೆ.
Photo Credit : News Kannada

ಚೆನ್ನೈ: ಚೆನ್ನೈನಲ್ಲಿ ಚಂಡಮಾರುತದ ಪರಿಣಾಮ ಭಾರೀ ಮಳೆ ಬರುತ್ತಿರುವ ಪರಿಣಾಮ ಅಲ್ಲಿನ ಔದ್ಯಮಿಕ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿವೆ. ಇಲ್ಲಿನ ಎರಡು ಐಫೋನ್ ತಯಾರಕಾ ಸಂಸ್ಥೆಗಳ ಘಟಕಗಳು ತಾತ್ಕಾಲಿಕವಾಗಿ ನಿಂತಿವೆ. ತೈವಾನ್ ಮೂಲದ ಫಾಕ್ಸ್​ಕಾನ್ ಮತ್ತು ಪೆಗಾಟ್ರಾನ್ ಸಂಸ್ಥೆಗಳು ಚೆನ್ನೈನಲ್ಲಿ ಐಫೋನ್ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಹೊಂದಿವೆ.

ಪ್ರವಾಹ ಪರಿಸ್ಥಿತಿ ಸುಧಾರಿಸಿ ಉದ್ಯೋಗಿಗಳು ಕೆಲಸಕ್ಕೆ ಬರಲು ಸಾಧ್ಯವಾಗುವವರೆಗೂ ಘಟಕಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ.

ಭಾರತದಲ್ಲಿ ಮೂರು ಕಂಪನಿಗಳು ಆ್ಯಪಲ್​ಗಾಗಿ ಐಫೋನ್ ತಯಾರಿಸಿಕೊಡುತ್ತವೆ. ಅದರಲ್ಲಿ ಫಾಕ್ಸ್​ಕಾನ್ ಮತ್ತು ಪೆಗಾಟ್ರಾನ್ ತೈವಾನ್ ಮೂಲದ ಕಂಪನಿಗಳಾಗಿದ್ದು ಎರಡೂ ಕೂಡ ಚೆನ್ನೈನಲ್ಲಿ ಘಟಕ ಹೊಂದಿವೆ. ವಿಸ್ಟ್ರಾನ್ ಕೂಡ ಐಫೋನ್ ತಯಾರಿಸುತ್ತಿತ್ತು. ಕೋಲಾರದಲ್ಲಿ ವಿಸ್ಟ್ರಾನ್ ಘಟಕ ಇದೆ. ಇತ್ತೀಚೆಗೆ ಟಾಟಾ ಗ್ರೂಪ್ ಈ ಘಟಕವನ್ನು ಮತ್ತು ಐಫೋನ್ ತಯಾರಿಕೆಯ ಬಿಸಿನೆಸ್ ಅನ್ನು ವಿಸ್ಟ್ರಾನ್​ನಿಂದ ಖರೀದಿಸಿದೆ.

ಫಾಕ್ಸ್​ಕಾನ್ ಐಫೋನ್ ತಯಾರಿಸುವ ಅತಿದೊಡ್ಡ ಸಂಸ್ಥೆ. ಚೆನ್ನೈನ ಇದರ ಘಟಕಗಳಲ್ಲಿ 35,000 ಮಂದಿ ಕೆಲಸ ಮಾಡುತ್ತಾರೆ. ಇದೀಗ ಚೆನ್ನೈನ ಚಂಡಮಾರುತ ಮತ್ತು ಮಹಾಮಳೆಯ ಪರಿಣಾಮ ಐಫೋನ್ ಉತ್ಪಾದನೆ ನಿಂತಿದೆ. ಇದರಿಂದ ಈ ಎರಡೂ ಕಂಪನಿಗಳಿಗೆ ನಷ್ಟ ಉಂಟಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು