News Karnataka Kannada
Thursday, May 02 2024
ತೆಲಂಗಾಣ

ತೆಲಂಗಾಣ: ಟಾಯ್ಲೆಟ್ ಕ್ಲೀನರ್ ಕುಡಿಸಿ ಗರ್ಭಿಣಿ ಜೀವ ತೆಗೆದ ಪತಿ

Police in Mulubagil emptying a lake to investigate 8 years old murder case
Photo Credit :

ತೆಲಂಗಾಣ : ನಿಜಾಮಾಬಾದ್ ಜಿಲ್ಲೆಯಲ್ಲಿ ಗರ್ಭಿಣಿ ಪತ್ನಿಗೆ ಟಾಯ್ಲೆಟ್ ಕ್ಲೀನರ್ ಕುಡಿಸಿದ ಪತಿ ಆಕೆ ಮೃತಪಟ್ಟ ಬಳಿಕ ಪರಾರಿಯಾಗಿದ್ದಾನೆ. ನಿಜಾಮಾಬಾದ್‌ನ ವರ್ಣಿ ಮಂಡಲದ ರಾಜಪೇಟ್ ತಾಂಡಾದಲ್ಲಿ ಈ ಘಟನೆ ನಡೆದಿದೆ. ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ತಂಡ ರಚಿಸಿದ್ದಾರೆ.

ತರುಣ್ ಕೊಲೆ ಆರೋಪಿ. ಮೃತ ಕಲ್ಯಾಣಿಯನ್ನು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ. ಮೂರು ತಿಂಗಳ ಹಿಂದೆ ಕಲ್ಯಾಣಿ ಗರ್ಭಿಣಿಯಾದಾಗ ತರುಣ್ ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದ. ಅವಳು ನೋಡಲು ಚೆನ್ನಾಗಿಲ್ಲ ಎಂದು ಹೀಯಾಳಿಸಿ, ಹೆಚ್ಚಿನ ವರದಕ್ಷಿಣೆ ಹಣ ತರುವಂತೆ ಪೀಡಿಸುತ್ತಿದ್ದ ಎಂದು ವರ್ಣಿ ಪೊಲೀಸರು ತಿಳಿಸಿದ್ದಾರೆ.

ಇಬ್ಬರ ನಡುವೆ ವಾಗ್ವಾದ ನಡೆದ ನಂತರ ತರುಣ್ ಕಲ್ಯಾಣಿಗೆ ಟಾಯ್ಲೆಟ್ ಕ್ಲೀನಿಂಗ್ ಲಿಕ್ವಿಡ್ ಕುಡಿಸಿದ್ದು, ಆಕೆ ತೀವ್ರ ಅಸ್ವಸ್ಥಳಾಗಿದ್ದರಿಂದ ಆಕೆಯ ಕುಟುಂಬದವರು ಚಿಕಿತ್ಸೆಗಾಗಿ ನಿಜಾಮಾಬಾದ್‌ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾಳೆ. ಕಲ್ಯಾಣಿ ಸಂಬಂಧಿಕರು ತರುಣ್ ಮತ್ತು ಆತನ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ತರುಣ್ ಮತ್ತು ಅವರ ಕುಟುಂಬದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು